ಮಾನವನ ಅತಿಯಾಸೆಗೆ ವನ್ಯ ಸಂಪತ್ತು ನಾಶ: ಎಸ್.ಎಸ್.ಪಾಟೀಲ
ಹೂವಿನಹಡಗಲಿ 04: ಮಾನವನ ಅತಿಯಾದ ಆಸೆಯಿಂದಾಗಿ ಭೂಮಿ ಮೇಲಿನ ವನ್ಯ ಸಂಪತ್ತು ನಾಶವಾಗುತಿದ್ದು ಯುವ ಜನತೆ ಜಾಗೃತಿಯಾಗುವ ಅವಶ್ಯಕತೆ ಇದೆ ಎಂದು ಪ್ರಾಚಾರ್ಯ ಎಸ್.ಎಸ್.ಪಾಟೀಲ ಹೇಳಿದರು.
ಪಟ್ಟಣದ ಜಿಬಿಆರ್ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ವನ್ಯಜೀವಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿವಿಶ್ವಪರಿಸರ ಸಂರಕ್ಷಣೆಯ ಅಂತರಾಷ್ಟ್ರೀಯ ಒಕ್ಕೂಟದ ಪ್ರಕಾಶ ವನ್ಯ ಪ್ರಾಣಿ ಸಂಕುಲ ಮತ್ತು ಸಸ್ಯಗಳ ಸುಮಾರು 8400 ಪ್ರಭೇದಗಳು ತೀವ್ರ ಅಪಾಯದ ಸ್ಥಿತಿಯಲ್ಲಿವೆ. 30 ಸಾವಿರಕ್ಕೂ ಹೆಚ್ಚು ಪ್ರಭೇದಗಳು ಅಳಿವಿನಂಚಿನಲ್ಲಿವೆ ಎಂದರು.
ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಎಂ.ಹರ್ಷ ವನ್ಯಜೀವಿ ಸಂಕುಲದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಐಕ್ಯೂಎಸಿ ಸಂಯೋಜಕಿ ಡಾ.ಮಹಿಮಾ ಜ್ಯೋತಿ, ಪ್ರಾಧ್ಯಾಪಕ ಸದಾಶಿವ, ಸಹಾಯಕ ಪ್ರಾಧ್ಯಾಪಕರಾದ ಸಂಜಯ್, ಚಂದನ, ಚೈತ್ರ, ಅನ್ನದಾನಪ್ಪ, ಡಾ.ಶರಣಪ್ಪ ಜಕ್ಕಲಿ, ಪ್ರಿಯಾಂಕ. ಶ್ವೇತಾ, ಕುಸುಮ ಇದ್ದರು.