ಕರ್ತವ್ಯಲೋಪ ಮುಖ್ಯ ಶಿಕ್ಷಕ ಅಂಗಡಿ ಅಮಾನತು

Dereliction of duty head teacher shop suspension

ಕರ್ತವ್ಯಲೋಪ ಮುಖ್ಯ ಶಿಕ್ಷಕ ಅಂಗಡಿ ಅಮಾನತು   

ಬೀಳಗಿ  19 : ತಾಲ್ಲೂಕಿನ  ಕೋಲೂರ  ಸರಕಾರಿ  ಪ್ರೌಢಶಾಲೆಯ  ಮುಖ್ಯ  ಶಿಕ್ಷಕ ಡಿ ಎಚ್ ಅಂಗಡಿ ಕರ್ತವ್ಯಲೋಪ  ಆರೋಪದ ಮೇರೆಗೆ ಜಯಶ್ರೀ ಶಿಂಶ್ರೆ ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಅಮಾನತು ಮಾಡಿ ಆದೇಶಿಸಿದ್ದಾರೆ  2022-23ನೇ ಸಾಲಿನಲ್ಲಿ 9ನೇ ತರಗತಿ ವಿದ್ಯಾರ್ಥಿಗಳನ್ನು 5 ದಿನ ಶೈಕ್ಷಣಿಕ ಪ್ರವಾಸಕ್ಕೆ ಕಳುಹಿಸಿ ಉಸ್ತುವಾರಿ ಶಿಕ್ಷಕರಿಂದ ಉಳಿದ ಹಣದಲ್ಲಿ ರೂ. 3000/-ಗಳನ್ನು ಪಡೆದಿರುವುದು.10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ನೀಡಲು ಪ್ರತಿ ವಿದ್ಯಾರ್ಥಿಯಿಂದ ರೂ: 100/- ಹಾಗೂ ವಗಾವಣೆ ಪತ್ರ ನೀಡಲು ಪ್ರತಿ ವಿದ್ಯಾರ್ಥಿಯಿಂದ 100/- ರೂ ಗಳನ್ನು ಪಡೆದು ದುರುಪಯೋಗ, ಅಟಲ್ ಟಿಂಕ್‌ರಿಂಗ್ ಲ್ಯಾಬ್‌ಗೆ ಬರುವ ಅನುದಾನದ ವಿವರದ ಮಾಹಿತಿಯನ್ನು ಶಾಲಾ ಸುಧಾರಣಾ ಸಮಿತಿಯವರ ಗಮನಕ್ಕೆ ತಾರದೇ ಏಕಪಕ್ಷೀಯವಾಗಿ ವಿನಿಯೋಗ. ಗ್ರಂಥಾಲಯ ವಿಷಯ ಶಿಕ್ಷಕರು ತಿಳಿಸಿದ ಪುಸ್ತಕ ಖರೀದಿ ವಿಷಯ ಶಿಕ್ಷಕರ ಬೇಡಿಕೆ ಪಟ್ಟಿ ಪಡೆದು ವಿದ್ಯಾರ್ಥಿಗಳ ಉಪಯೋಗಕ್ಕೆ ಅನುಕೂಲವಾಗುವ ಪುಸ್ತಕಗಳನ್ನು ಖರೀದಿಸಲು ಕ್ರಮವಹಿಸದೇ ಹಣ ದುರಪಯೋಗ. ಸರ್ಕಾರದ ಅನುದಾನಗಳನ್ನು ಏಕಪಕ್ಷೀಯವಾಗಿ ವಿನಿಯೋಗಿಸಿ  ಸಿ.ಸಿ.ಟಿ.ವಿ. ಬಯೋಮೆಟ್ರಿಕ್  ಇತ್ಯಾದಿಗಳನ್ನು  ಖರೀದಿಸಿರುವುದು. ಇನ್ನೂ  ಜ.18 ರಂದು ಮಾಹಿತಿ ಹಕ್ಕು  ಸಾಮಾಜಿಕ ಹೋರಾಟಗಾರ ಪಾಂಡು ಹರಿಜನ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಮುಖ್ಯ ಶಿಕ್ಷಕನ ವಿರುದ್ಧ ಕ್ಷೇತ್ರ  ಶಿಕ್ಷಣಾಧಿಕಾರಿಗಳಿಗೆ  ದೂರು ನೀಡಲಾಗಿತ್ತು  ಹಣಕಾಸಿನ ಖರ್ಚಿನ ದಾಖಲೆಗಳನ್ನು ಸಮರ​‍್ಕವಾಗಿ ನಿರ್ವಹಿಸದೇ ಕರ್ತವ್ಯಲೋಪದ  ಕಾರಣ ಇಲಾಖೆಯ ವಿಚಾರಣೆ ಕಾಯ್ದಿರಿಸಿ  ಅಮಾನತು  ಮಾಡಲಾಗಿದೆ  ಎಂದು  ಆದೇಶದಲ್ಲಿ ತಿಳಿಸಿದ್ದಾರೆ. 

ಗ್ರಾಮಸ್ಥರು ಮತ್ತು ಮುಖ್ಯ ಶಿಕ್ಷಕ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿರುವದನ್ನು ಕುರಿತು ನಾವು ವಿಚಾರಿಸಿದಾಗ ಮುಖ್ಯ ಶಿಕ್ಷಕ ಮಾಡಿದ ಆರೋಪ ಸುಳ್ಳು ಎಂದು ಕಂಡುಬಂದಿತು. ಮುಖ್ಯ ಶಿಕ್ಷಕರ ಮೇಲೆ ಬಂದ ದೋಶಾರೋಪಗಳನ್ನು ಸಿದ್ದ ಪಡಿಸಿ ಧಾರವಾಡ ಕಮೀಶನರ್ ಗೆ ಆರೋಪದ ಪಟ್ಟಿಯನ್ನು ಸಿದ್ದ ಪಡಿಸಿ ಸಲ್ಲಿಸಿದ್ದೇವು. ಅದನ್ನು ಅವರು ಪರೀಶೀಲಿಸಿ ಅಮಾನತ್ತು ಗೊಳ್ಳಿಸಿದ್ದಾರೆ. ಇನ್ನೂ ಪೂರ್ಣ ಹಂತದ ವಿಚಾರಣೆ ಆಗಬೇಕಿದೆ. ಆರೋಪಗಳು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಗೊಳಿಸಲಾಗಿದೆ.