ಜಿಲ್ಲೆಯಲ್ಲಿ ಬೇರೆ ರಾಜ್ಯದ ವಾಹನಗಳ ಓಡಾಡಿದ ವಾಹನ ಮಾಹಿತಿ ಕೇಳಿದ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳು
ಹಾವೇರಿ 13: ಜಿಲ್ಲೆಯಲ್ಲಿ ಬೇರೆ ರಾಜ್ಯದ ವಾಹನಗಳ ಓಡಾಡಿದ ಸಂಖ್ಯೆ ಹಾಗೂ ಆ ವಾಹನಗಳು ಟ್ಯಾಕ್ಸ್ ಪಾವತಿಸಿದ ಮಾಹಿತಿ ಇದೇಯಾ ಎಂದು ಹಾವೇರಿ ಸಾರಿಗೆ ಪ್ರಾದೇಶಿಕ ಅಧಿಕಾರಿಗಳನ್ನು ಕರ್ನಾಟಕ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಬಿ.ವೀರ್ಪ ಅವರು ಪ್ರಶ್ನಿಸಿದರು. ಬುಧವಾರ ಬೆಳಿಗ್ಗೆ 6 ಗಂಟೆಯಿಂದ ನಿರಂತರ ನಗರದ ಎ.ಪಿ.ಎಂ.ಸಿ. ಹಾಗೂ ವಿವಿಧ ಕಚೇರಿಗಳಿಗೆ ಭೇಟಿ ನೀಡಿದ ಅವರು, ಸಂಜೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಕಚೇರಿಯ ವಿವಿಧ ಕಡತಗಳನ್ನು ಪರೀಶೀಲಿಸಿದರು. ಜಿಲ್ಲೆಯಲ್ಲಿ ಟ್ರ್ಯಾಕ್ಟರ್‌ಗಳ ನೋಂದಣಿ, ಅಂತರಾಷ್ಟ್ರೀಯ ವಾಹನಗಳಿಗೆ 30 ದಿನಗಳ ನಂತರ ಟ್ಯಾಕ್ಸ್ ಅನ್ವಯವಾಗುತ್ತದೆ, ಇನ್ಸೂರೆನ್ಸ್ ಇಲ್ಲ ವಾನಗಳ ಸಂಖ್ಯೆ, ಸಿಜ್ ಮಾಡಲಾದ ವಾಹನಗಳ ಸಂಖ್ಯೆ, ವೈಟ್ ಬೋಡ್ ವಾಹನಗಳ ಸಂಖ್ಯೆ ಹಾಗೂ ಎಷ್ಟು ವಾಹನ ಚಾಲನಾ ತರಬೇತಿ ಶಾಲೆಗಳಿಗೆ ಪರವಾನಿಗೆ ನೀಡಲಾಗಿದೆ ಎಂದು ಸಾರಿಗೆ ಪ್ರಾದೇಶಿಕ ಅಧಿಕಾರಿಗಳನ್ನು ಪ್ರಶ್ನಿಸಿದರು. ಎಫ್.ಸಿ.ಮುಗಿದ ವಾಹನಗಳ ವಶಕ್ಕೆ ಸೂಚನೆ: ಜಿಲ್ಲೆಯಲ್ಲಿ ನೋಂದಣಿಗೆ ಎಫ್ ಸಿ ಮುಗಿದುಹೋಗಿರುವ ವಾಹನಗಳನ್ನು ಕೂಡಲೇ ವಶ ಪಡಿಸಿಕೊಳ್ಳಬೇಕು. ಈ ವಾಹನಗಳು ಇತರೆ ಅಪರಾಧ ಪ್ರಕಾರಣಗಳಲ್ಲಿ ಬಳಕೆಯಾಗುವ ಸಂಭವ ಇರುವುದರಿಂದ ಕೂಡಲೇ ಅಧಿಕಾರಿಗಳು ಎಚ್ಚತ್ತುಕೊಂಡು ಎಫ್ ಸಿ ಮುಗಿದ ವಾಹನಗಳು ರಸ್ತೆಗೆ ಇಳಿಯದಂತೆ ಕಟ್ಟುನಿಟ್ಟಾಗಿ ನಿಗಾವಹಿಸಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು. ಪರವಾನಿಗೆ ಇಲ್ಲದ ವಾಹನಗಳ ಪರೀಶೀಲನೆ ಮಾಡಿ: 46 ಶಾಲಾ ಮಕ್ಕಳ ಬಸ್‌ಗಳಿಗೆ ಲೈಸನ್ಸ್ ಮತ್ತು ಇನ್ಶೂರೆನ್ಸ್ ಇಲ್ಲದೆ ಚಾಲನೆ ಮಾಡಿರುವ ಬಗ್ಗೆ ದೂರು ಬಂದಿದೆ, ಈ ಕುರಿತು ಯಾಕೆ ಪರೀಶೀಲನೆ ಮಾಡಿಲ್ಲ ಎಂದು ಕೇಳಿದರು. ನಾಲ್ಕು ಜನರಿಗೆ ನೋಟೀಸ್: ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಮೂರು ಜನ ಸಿಬ್ಬಂದಿಗಳು ಸೇರಿದಂತೆ ಒಟ್ಟು ನಾಲ್ಕು ಜನರಿಗೆ ನೋಟೀಸ್ ಜಾರಿ ಮಾಡಿ, ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಶಾಲಾ ವಾಹನಗಳ ವಶಕ್ಕೆ ಸೂಚನೆ: ಜಿಲ್ಲೆಯಲ್ಲಿ 2.5 ಲಕ್ಷ ವಾಹನಗಳಿದ್ದು, ಈ ಪೈಕಿ 58,555 ವಾಹನಗಳ ಎಫ್.ಸಿ. ಅವಧಿ ಮುಗಿದ್ದು, ಈ ವಾಹನಗಳ ಪೈಕಿ 26 ಶಾಲಾ ವಾಹನಗಳಿವೆ. ಈ ಶಾಲಾ ವಾಹನಗಳನ್ನು ವಶಕ್ಕೆ ಪಡೆದು ವರದಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯಾರ್ಥಿ ನಿಲಯಕ್ಕೆ ಭೇಟಿ: ನಗರದ ಶ್ರೀ ದೇವರಾಜ ಅರಸು ಮೇಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು, 6 ನೇ ತರಗತಿಯಿಂದ 10 ತರಗತಿ ವರೆಗಿನ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ, ಶೌಚಾಲಯ ವ್ಯವಸ್ಥೆ , ಊಟದ ವ್ಯವಸ್ಥೆ, ಪುಸ್ತಕ, ರಾತ್ರಿ ಕಾವಲುಗರರು ಬಗ್ಗೆ ಮಾಹಿತಿ ಪಡೆದುಕೊಂಡರು. ಬೆಳ್ಳಿಗೆ ಬೇಗ ಎದ್ದು ಯೋಗ ಮಾಡಿ ಒಳ್ಳೆಯ ಉದ್ದೇಶದೊಂದಿಗೆ ಚನ್ನಾಗಿ ಓದಿ ನಿಮ್ಮ ತಂದೆ -ತಾಯಿ ಹೆಸರು ಉಳಿಸಿ. ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಚನ್ನಾಗಿ ಓದಿ ಸರ್ಕಾರ ನಿಮಗಾಗಿ ಸಾಕಷ್ಟು ಸೌಕರ್ಯಗಳನ್ನು ಕಲ್ಪಿಸಿದೆ ಅದನ್ನು ಸರಿಯಾಗಿ ಬಳಸಿಕೊಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್.ಮುತಾಲಿಕದೇಸಾಯಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.