ಕಾನೂನು ಸಾಕ್ಷರತಾ ರಥಯಾತ್ರೆಗೆ ಜಿಲ್ಲಾಧಿಕಾರಿ ಚಾಲನೆ

ಧಾರವಾಡ31: ಜನವರಿ 31 ರಿಂದ ಫೆಬ್ರವರಿ 4 ರ ವರೆಗೆ ಧಾರವಾಡ ತಾಲೂಕಿನ ವಿವಿಧ ಹಳ್ಳಿಗಳಿಗೆ ತೆರಳಿ ಸಾರ್ವಜನಿಕರಿಗೆ ಕಾನೂನು ತಿಳುವಳಿಕೆ, ನೆರವು ನೀಡುವ ಕಾನೂನು ಸಾಕ್ಷರತಾ ರಥಯಾತ್ರೆಗೆ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಮತ್ತು ಜಿಲ್ಲಾ ಪ್ರದಾನ ಹಾಗೂ ಸತ್ರನ್ಯಾಯಾಧೀಶ ಈಶಪ್ಪ ಬೂತೆ ಅವರು ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು

 ಕಾನೂನು ಸಾಕ್ಷರತಾ ರಥಯಾತ್ರೆಗೆ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್, ನ್ಯಾಯಾಂಗ ಇಲಾಖೆಯು ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಮಹಿಳೆಯರಿಗೆ, ಮಕ್ಕಳಿಗೆ, ಬಡವರಿಗೆ, ನಿರಾಶ್ರೀತರಿಗೆ, ಅನಾಥರಿಗೆ ಹಾಗೂ ಅಸಾಯಕ ಜನರಿಗೆ ಉಚಿತವಾಗಿ ಕಾನೂನು ಅರಿವು ಮತ್ತು ನೆರವು ನೀಡುತ್ತದೆ. ಗ್ರಾಮೀಣ ಭಾಗದ ಮತ್ತು ನಗರದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸೇವಾ ಪ್ರಾಧಿಕಾರದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಕೊರತೆ ಕಾಣುತ್ತದೆ.

    ಇಂತಹ ಹಿಂದುಳಿದ ಪ್ರದೇಶಗಳಿಗೆ ರಥಯಾತ್ರೆ ಮೂಲಕ ಹೋಗಿ ಉಚಿತವಾಗಿ ಮಾಹಿತಿ ನೀಡಲಾಗುತ್ತದೆ.

   ಕಾನೂನು ರಥಯಾತ್ರೆಯಲ್ಲಿ ಮಹಿಳಾ ದೌರ್ಜನ್ಯ ತಡೆ ಕಾಯ್ದೆ, ವರದಕ್ಷಿಣೆ ಕಾಯ್ದೆ, ಪೊಕ್ಸೊ ಮಹಿಳಾ ರಕ್ಷಣಾ ಕಾಯ್ದೆ, ಮಕ್ಕಳ ರಕ್ಷಣಾ ಕಾಯ್ದೆ, ಕಡ್ಡಾಯ ಶಿಕ್ಷಣ ಕಾಯ್ದೆ ಸೇರಿದಂತೆ ಪ್ರಮುಖ ಕಾನೂನುಗಳ ಕುರಿತು ಹಿರಿಯ ವಕೀಲರು, ವಿಷಯತಜ್ಞರು ನೀಡಲಿದ್ದಾರೆ ಎಂದು ಹೇಳಿದರು.

        ಜಿಲ್ಲಾ ಪ್ರದಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಅವರು ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ಸಂವಿಧಾನದ ಆಶಯವಾಗಿದೆ. ಮಾಹಿತಿ ಕೊರತೆ, ಹಿಂಜರಿಕೆ, ಭಯ, ಒತ್ತಡ, ನ್ಯಾಯ ನಿಧಾನದ ಹುಸಿ ಕಲ್ಪನೆಗಳಿಂದ ಬಹಳಷ್ಟು ಜನ ಅನ್ಯಾಯಗಳಿಗೆ ಒಳಗಾಗುತ್ತಾರೆ.

   ಇಂತಹವರ ಸೇವೆ ಮತ್ತು ಸಹಾಯಕ್ಕಾಗಿ ನ್ಯಾಯಾಂಗವು ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನಿರಂತರವಾಗಿ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ. ಅಸಹಾಯಕರ ನೆರವಿಗಾಗಿ ನ್ಯಾಯಾಲಯ ಪ್ಯಾನಲ್ ವಕೀಲರನ್ನು ನೇಮಿಸಿ ಅವರ ಮೂಲಕ ಉಚಿತವಾಗಿ ಪ್ರಕರಣಗಳನ್ನು ನಡೆಸಿ ನ್ಯಾಯ ಕೊಡುವ ಕೆಲಸ ನಿರಂತರವಾಗಿ ನಡೆದು ಬಂದಿದೆ.

     ಈ ಎಲ್ಲ ಅನುಕೂಲತೆಗಳನ್ನು ಮತ್ತು ಪ್ರಮುಖ ಕಾನೂನುಗಳ ಅರಿವು ಮೂಡಿಸಿ, ಸಾರ್ವಜನಿಕರನ್ನು ಜಾಗೃತಗೊಳಿಸಲು ಕಾನೂನು ಸೆವಾ ರಥಯಾತ್ರೆಯನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ.

     ಅದರಂತೆ ಇಂದಿನಿಂದ ನಾಲ್ಕು ದಿನಗಳ ಕಾಲ ಧಾರವಾಡ ತಾಲೂಕಿನ ವಿವಿಧ ಹಳ್ಳಿಗಳಿಗೆ ಕಾನೂನು ರಥ ತೆರಳಿ ಕಾನೂನು ಸಾಕ್ಷರತೆ ನೀಡಲಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಯಾವುದೇ ರೀತಿ ಸಮಸ್ಯೆ, ತಂಟೆ, ತಕರಾರು ಕುರಿತು ಅಜರ್ಿ ದೂರು ಬಂದಲ್ಲಿ ಸ್ವೀಕರಿಸಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿನ್ನಣ್ಣವರ, ಜಿಲ್ಲಾ ನ್ಯಾಯಾಧೀಶರಾದ ಗಂಗಾಧರ ಸಿ.ಎಂ., ಎಚ್.ಸಿ. ಶ್ಯಾಮಪ್ರಸಾದ, ಹೊಸಮನಿ ಸಿದ್ದಪ್ ಎಚ್., ಸಾವಿತ್ರಿ ಕುಜ್ಜಿ, ಶ್ರೀಕಾಂತ ಎಸ್.ವ್ಹಿ., ಸಂಜಯ ಪಿ. ಗುಡುಗುಡಿ, ಮಮತಾ ಡಿ., ಸುಜಾತಾ, ಶ್ರೀಮತಿ ವಿಜಯಲಕ್ಷ್ಮಿ ಗಾನಾಪೂರ, ಕುರಣಿಕಾಂತ ಧಾಕು, ಪರಿಮಳಾ ತುಬಾಕಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್, ಜಿಲಾ ಆರೋಗ್ಯ ಅಧಿಕಾರಿ ಡಾ.ಆರ್.ಎಂ. ದೊಡ್ಡಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಆರ್.ಎಸ್. ಮುಳ್ಳೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉನಿದರ್ೆಶಕ ಬಸವರಾಜ ವರವಟ್ಟಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆರ್.ಯು. ಬೆಳ್ಳಕ್ಕಿ ಸೇರಿದಂತೆ ವಿವಿಧ ನ್ಯಾಯವಾದಿಗಳು ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.