ಹಿಂಗಾರು, ಬೇಸಿಗೆ, ತೋಟಗಾರಿಕೆ ಬೆಳೆ ವಿಮೆಗೆ ಜಿಲ್ಲಾಧಿಕಾರಿಗಳ ಮನವಿ

ಗದಗ 09: ಗದಗ ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತರು ನಿಗದಿತ ಅವಧಿಯಲ್ಲಿ 2018ರ ಹಿಂಗಾರು ಮತ್ತು ಬೇಸಿಗೆ ಬೆಳೆ ವಿಮೆ ಮಾಡಿಸುವಂತೆ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನವಿ ಮಾಡಿದ್ದಾರೆ.

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಬೆಳೆ ವಿಮೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂಗಾರು ಬೆಳೆವಾರು ವಿಮಾ ನೊಂದಣಿ ದಿನಾಂಕ ನಿಗದಿಗೊಳಿಸಿದ್ದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಸಾಲ ಪಡೆಯದ ಆದರೆ ಸಂಬಂಧಿತ ಬೆಳೆ ಬೆಳೆದ ರೈತರು ವಿಮಾ ಕಂತು ಭರಿಸಿ ವಿಮಾ ಸೌಲಭ್ಯ ಪಡೆಯುವಂತೆ ಪ್ರೇರೆಪಿಸಿ ಯಾವುದೇ ಅರ್ಹ ರೈತರು ವಿಮಾ ವ್ಯಾಪ್ತಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು.  ಬೆಳೆಸಾಲ ಪಡೆದ ರೈತರ ಸಂಬಂಧಿತ ಬ್ಯಾಂಕ ಶಾಖಾಧಿಕಾರಿಗಳು ತಮ್ಮ ಸಿಬ್ಬಂದಿಗೆ ಸೂಕ್ತ ಸೂಚನೆ ನೀಡಿ ವಿಮಾ ನೊಂದಣಿಗೆ ರೈತರಿಗೆ ಸಹಾಯ ಸಹಕಾರ ನೀಡಲು ಅಗತ್ಯದ ಕ್ರಮ ವಹಿಸಲು ಸಭೆಯಲ್ಲಿ ಭಾಗವಹಿಸಿದ್ದ ಲೀಡಬ್ಯಾಂಕ (ಎಸ್.ಬಿ.ಐ) ವ್ಯವಸ್ಥಾಪಕ ಬಿ.ವೈ. ಕಾಂಬಳೆ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

     ಗದಗ ಕೃಷಿ ಜಂಟಿ ನಿದರ್ೇಶಕ ಸಿ.ಬಿ. ಬಾಲರೆಡ್ಡಿ ಹಿಂಗಾರು ನೋಂದಣಿಗೆ ಗದಗ, ಮುಂಡರಗಿ, ರೋಣ ಹಾಗೂ ಶಿರಹಟ್ಟಿ ತಾಲೂಕುಗಳಿಗೆ ಮಳೆ ಆಶ್ರಿತ ಜೋಳ, ಕಡಲೆ, ಮತ್ತು ನರಗುಂದ ತಾಲೂಕಿಗೆ ನೀರಾವರಿ ಜೋಳ, ಕಡಲೆ ಗ್ರಾಮ ಪಂಚಾಯತ ಮಟ್ಟದ ಇನ್ನುಳಿದವು ಹೋಬಳಿ ಮಟ್ಟದ ನಿದರ್ೇಶಿತ ಬೆಳೆಗಳಾಗಿವೆ ಎಂದರು. ಬೆಳೆವಾರು ನೊಂದಣಿಯ ಕೊನೆಯ ದಿನಾಂಕಗಳು ಇಂತಿವೆ. ಮಳೆಯಾಶ್ರಿತ ಜೋಳ, ಹುರುಳಿ, ಕುಸುಬೆ, ಅಗಸೆ, ಮುಸುಕಿನ ಜೋಳ, ಸೂರ್ಯಕಾಂತಿ ಹಾಗೂ ನೀರಾವರಿ ಜೋಳ ಇವುಗಳಿಗೆ 15ರಂದು ಹಿಂಗಾರು ಬೆಳೆ ವಿಮೆ ನೋಂದಣಿಗೆ ಕೊನೆಯ ದಿನವಾಗಿದೆ. ಮಳೆಯಾಶ್ರಿತ ಕಡಲೆ, ನೀರಾವರಿಯ ಮುಸುಕಿನ ಜೋಳ, ಸೂರ್ಯಕಾಂತಿಗೆ 30ರ ಹಾಗೂ ಮಳೆಯಾಶ್ರಿತ ಗೋಧಿ, ನೀರಾವರಿಯ ಕಡಲೆ ಮತ್ತು ಗೋಧಿ ಇವುಗಳಿಗೆ 15ರ ಹಿಂಗಾರು ಬೆಳೆ ವಿಮೆ ನೋಂದಣಿಗೆ ಕೊನೆಯ ದಿನವಾಗಿವೆ.

ಬೇಸಿಗೆ ಬೆಳೆ ನೋಂದಣಿಗೆ ಜಿಲ್ಲೆಯ ಆಯ್ದ ಗ್ರಾ.ಪಂ.ಗಳಿಗೆ ನೀರಾವರಿ ಶೇಂಗಾ, ಗ್ರಾಮ ಪಂಚಾಯತ ಮಟ್ಟದ ಹಾಗೂ  ಆಯ್ದ ಹೋಬಳಿಗಳಿಗೆ ನೀರಾವರಿ ಶೇಂಗಾ, ಸೂರ್ಯಕಾಂತಿ ಹಾಗೂ ಭತ್ತ  ಬೇಸಿಗೆ ಹಂಗಾಮಿನ ನಿದರ್ೇಶಿತ ಬೆಳೆಗಳಾಗಿದ್ದು 28-2-2019 ವಿಮಾ ನೋದಣಿಗೆ ಕೊನೆಯ ದಿನವಾಗಿದೆ. ನೋಂದಣಿ ಸಂದರ್ಭದಲ್ಲಿ ರೈತರು, ಬ್ಯಾಂಕಿನವರು ಯಾವ ಮಟ್ಟದ ಬೆಳೆ, ಮಳೆಯಾಶ್ರಿತವೋ, ನೀರಾವರಿಯೋ ಎಂಬುದರ ಕುರಿತು ಜಾಗೃತಿವಹಿಸಿ ನೊಂದಾಯಿಸಬೇಕು. ಹಿಂಗಾರು, ಬೇಸಿಗೆ  ಬೆಳೆ ವಿಮೆ ಕುರಿತಂತೆ ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ, ಬ್ಯಾಂಕು ಶಾಖೆ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕುಗಳನ್ನು ಸಂಪಕರ್ಿಸಲು ಕೃಷಿ ಜಂಟಿ ನಿದರ್ೇಶಕರು ತಿಳಿಸಿದ್ದಾರೆ. 

     ಗದಗ ತೋಟಗಾರಿಕೆ ಉಪನಿದರ್ೇಶಕ ಎಲ್. ಪ್ರದೀಪ ಅವರು ಮಾತನಾಡಿ ಜಿಲ್ಲೆಯ ತಾಲೂಕಾವಾರು ಹೋಬಳಿವಾರು ಮಾವು ಮತ್ತು ದ್ರಾಕ್ಷಿ ಬೆಳೆಗಳು  ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅಧಿಸೂಚನೆಗೊಂಡಿದ್ದು ನಿಗದಿತ ವಿಮಾ ಕಂತಿನೊಂದಿಗೆ ಬೇಳೆ ಸಾಲ ಪಡೆದ ಅಥವಾ ಪಡೆಯದ ರೈತಬೆಳೆಗಾರರು ನೊಂದಾಯಿಸಲು 15ರ ಕೊನೆಯ ದಿನಾಂಕವಾಗಿದೆ.  ಹೆಚ್ಚಿನ ವಿವರಗಳಿಗೆ ಸಮೀಪದ ಬ್ಯಾಂಕ ಶಾಖೆ, ತೋಟಗಾರಿಕೆ ಇಲಾಖೆ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರ ಹಾಗೂ ತೋಟಗಾರಿಕೆ ಸಲಹಾ ಕೇಂದ್ರ ಸಂಪರ್ಕಬೇಕು ಎಂದು ತಿಳಿಸಿದರು.