ಗದಗ 6: ಬೆಳಗಾವಿ ವಿಭಾಗದ ಬರ ಪೀಡಿತ ಪ್ರದೇಶದ ಅಧ್ಯಯನ ಪರಿಹಾರ ಹಾಗೂ ನಿರ್ವಹಣೆ ಕುರಿತ ರಾಜ್ಯ ಸಚಿವ ಸಂಪುಟದ ಉಪಸಮಿತಿಯು ಕಂದಾಯ ಸಚಿವರಾದ ಆರ್.ವಿ. ದೇಶಪಾಂಡೆಯವರ ನೇತೃತ್ವದಲ್ಲಿ ಸೋಮವಾರ ದಿ.7ರಂದು ಜಿಲ್ಲೆಗೆ ಭೇಟಿ ನೀಡಲಿದ್ದು ಸಂಬಂಧಿತ ಅಧಿಕಾರಿಗಳು ಸರಿಯಾದ ಮಾಹಿತಿಯೊಂದಿಗೆ ಸೂಚಿತ ಸ್ಥಳಗಳಲ್ಲಿ ಹಾಜರಿರಲು ಹಾಗೂ ಸಚಿವ ಸಂಪುಟ ಉಪಸಮಿತಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಧ್ಯಾಹ್ನ ಜರುಗಿಸುವ ಪ್ರಕೃತಿ ವಿಕೋಪದಿಂದ ಸಂಭವಿಸಿರುವ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಪರಿಶೀಲನಾ ಸಭೆಗೆ ಅಗತ್ಯದ ಮಾಹಿತಿಯೊಂದಿಗೆ ತಪ್ಪದೇ ಭಾಗವಹಿಸಲು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಿದರ್ೇಶನ ನೀಡಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸಚಿವ ಸಂಪುಟದ ಉಪಸಮಿತಿಗೆ ಒದಗಿದಬೇಕಾದ ಮಾಹಿತಿ ಹಾಗೂ ಸಿದ್ಧತಾ ಕ್ರಮಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಅವರು ಮಾತನಾಡಿ ಈಗಾಗಲೇ ರಾಜ್ಯ ಸಕರ್ಾರ ಪ್ರತಿ ತಾಲೂಕಿಗೆ ಬರನಿರ್ವಹಣೆಯ ವಿವಿಧ ಕಾರ್ಯಗಳಿಗೆ ತಲಾ 50 ಲಕ್ಷ ರೂ.ಗಳ ಅನುದಾನ ಘೋಷಿಸಿದೆ. ಆ ಪೈಕಿ ತಲಾ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ತಾಲೂಕಾ ಸಮಿತಿಗಳು ಕ್ರಿಯಾ ಯೋಜನೆಯನ್ನು 50 ಲಕ್ಷ ರೂ.ಗಳಿಗೆ ತಯಾರಿಸಿ ಸಮಿತಿಯಿಂದ ಮಂಜುರಾತಿ ಪಡೆಯಬೇಕು ಎಂದು ತೀಳಿಸಿದರು.
ಮುಂಗಾರು ಮಳೆ ಕೊರತೆಯಿಂದ ಗದಗ ಜಿಲ್ಲೆಯ ಕೃಷಿ, ತೋಟಗಾರಿಕೆ ಬೆಳೆಗಳ ಹಾನಿ. ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರ ನೊದಣಿ ಕಾರ್ಯ, ನಗರ ಹಾಗೂ ಗ್ರಾಮೀನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಬರುಬ ಬೇಸಿಗೆಯಲ್ಲಿ ಸಂಭವನೀಯ ನೀರಿನ ಕೊರತೆ ಎದುರಿಸಬಹುದಾದ ನಗರ ಹಾಗೂ ಗ್ರಾಮಗಳ ಗುರುತಿಸುವಿಕೆ, ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೃಷಿಕರಿಗೆ, ಕಾಮರ್ಿಕರಿಗೆ ಉದ್ಯೋಗ, ಜಾನುವಾರುಗಳಿಗೆ ನೀರು, ಮೇವಿನ ಪೂರೈಕೆ, ಮೇವಿನ ಕೊರತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಮೇವಿನ ಕಿಟ್ಟು ಪೂರೈಕೆ, ಜಿಲ್ಲಾಡಳಿತ ಮೂಲಕ ಟೆಂಡರ ಮೂಲಕ ಮೇವು ಖರೀದಿ, ಅಗತ್ಯವಿರುವೆಡೆ ಮೇವು ಬ್ಯಾಂಕ ಹಾಗೂ ಗೋಶಾಲೆ ತೆರೆಯವ ಸ್ಥಳಗಳು ಅವುಗಳಿಗೆ ಅಲ್ಲಿ ಇರುವ ಮೂಲಭೂತ ಸೌಕರ್ಯ, ಸಚಿವ ಸಂಪುಟದ ಉಪಸಮಿತಿಯ ಹಿಂದಿನ ಪರಿಶೀಲನಾ ಸಭೆಗಳಲ್ಲಿ ಸೂಚಿತ ವಿಷಯಗಳ ಕುರಿತು ಕೈಕೊಂಡ ಕ್ರಮಗಳು ಇತ್ಯಾದಿ ವಿಷಯಗಳ ಪರಿಶೀಲನೆಯನ್ನು ಜಿಲ್ಲಾಧಿಕಾರಿಗಳು ನಡೆಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿಎಸ್. ಮಂಜುನಾಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ, ಜಿ.ಪಂ. ಯೋಜನಾ ನಿದರ್ೇಶಕ ಟಿ.ದಿನೇಶ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಎಲ್ಲ ತಾಲೂಕಾ ತಹಶೀಲ್ದಾರರು, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿಗಳು, ಬರನಿರ್ವಹನೆ ತಾಲೂಕಾ ಮತ್ತು ಹೊಬಳಿ ಮಟ್ಟದ ನೊಡಲ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಉಪಸಮಿತಿ ಕಾರ್ಯಕ್ರಮ
ಬೆಳಗಾವಿ ವಿಭಾಗದ ಬರ ಪೀಡಿತ ಪ್ರದೇಶದ ಅಧ್ಯಯನ ಪರಿಹಾರ ಹಾಗೂ ನಿರ್ವಹಣೆ ಕುರಿತ ರಾಜ್ಯ ಸಚಿವ ಸಂಪುಟದ ಉಪಸಮಿತಿಯು ಕಂದಾಯ ಸಚಿವರಾದ ಆರ್.ವಿ. ದೇಶಪಾಂಡೆಯವರ ನೇತೃತ್ವದಲ್ಲಿ ಸೋಮವಾರ ಜನೆವರಿ 7ರಂದು ಹಾವೇರಿಯಿಂದ ಲಕ್ಷ್ಮೇಶ್ವರಗೆ ಆಗಮಿಸುವ ಮುನ್ನ ಮಧ್ಯಾಹ್ನ 12-30 ಗಂಟೆಗೆ ಗೋನಾಳದಿಂದ ಶಿಗ್ಲಿಗೆ ಹೋಗುವ ರಸ್ತೆಯಲ್ಲಿನ ಕೆರೆಯ ಹೂಳೆತ್ತುವ ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಿಸಲಿದೆ. ತದನಂತರ ಲಕ್ಷ್ಮೇಶ್ವರದ ಅಗಡಿ ಇಂಜನೀಯರಿಂಗ ಕಾಲೇಜಿನ ಎದುರಿಗಿರುವ ಸವರ್ೇ ಸಂಖ್ಯೆ 29ರ ವೆಣರ್ೇಕರ ಕೃಷಿ ಜಮೀನಿನಲ್ಲಿ ಹಿಂಗಾರು ಜೋಳದ ಬೆಳೆ, ಮಾಗಡಿ ರಸ್ತೆಯಲ್ಲಿರುವ ಸವರ್ೇ ಸಂಖ್ಯೆ 14/2 ಹುಳಕಣ್ಣವರ ಜಮೀನಿನಲ್ಲಿ ಮೆಣಸಿನಕಾಯಿ, ಕಡಲೆ ಜೋಳದ ಬೆಳೆ ಹಾನಿ ವೀಕ್ಷಿಸುವರು. ಮಾಗಡಿಯ ಕೆರೆ ಹತ್ತಿರ ಡಿಬಿಓಟಿ ಯೋಜನೆಯಡಿ ಕುಡಿಯವ ನೀರಿನ ಜಲಾಗಾರ ನಿಮರ್ಾಣ ಕಾಮಗಾರಿ ವೀಕ್ಷಣೆ. ಮುಳಗುಂದಕ್ಕೆ ಆಗಮಿಸಿ ದೇಶಪಾಂಡೆ ಅವರ ಜಮೀನನಲ್ಲಿ ಕಡಲೆ ಬೆಳೆ ಪರಿಶೀಲಿನೆ. ಕುರ್ತಕೋಟಿ ಗ್ರಾಮದಲ್ಲಿ ನರೇಗಾ ಯೋಜನೆ ಬಳಸಿಕೊಂಡು ರಿಜ್ ವ್ಯಾಲಿ ಯೋಜನೆಯಡಿ ರೈತರ ಹೊಲಗಳಿಗೆ ಬದು ನಿಮರ್ಾಣದ ಕಾಮಗಾರಿ ವೀಕ್ಷಿಸುವದರ ಜೊತೆಗೆ ಈ ಎಲ್ಲ ಸ್ಥಳಗಲಲ್ಲಿ ರೈತರು ಸಾರ್ವಜನಿಕರೊಂದಿಗೆ ಸಮಿತಿಯು ಸಮಸ್ಯೆ ಅಹವಾಲು ಆಲಿಸಲಿದೆ. ಮಧ್ಯಾಹ್ನ 2.30 ಗಂಟೆಗೆ ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲೆಯ ಪ್ರಕೃತಿ ವಿಕೋಪದಿಂದ ಸಂಭವಿಸಿರುವ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಂಜೆ 4-30ಗಂಟೆಗೆ ರೋಣ, ಬದಾಮಿ, ಬಾಗಲಕೋಟ ಮಾರ್ಗವಾಗಿ ವಿಜಯಪುರಕ್ಕೆ ಸಮಿತಿಯ ತೆರಳಲಿದೆ.
ಬೆಳಗಾವಿ ವಿಭಾಗದ ಬರ ಪೀಡಿತ ಪ್ರದೇಶದ ಅಧ್ಯಯನ ಪರಿಹಾರ ಹಾಗೂ ನಿರ್ವಹಣೆ ಕುರಿತ ರಾಜ್ಯ ಸಚಿವ ಸಂಪುಟದ ಉಪಸಮಿತಿಯು ಕಂದಾಯ ಸಚಿವರಾದ ಆರ್.ವಿ. ದೇಶಪಾಂಡೆಯವರ ನೇತೃತ್ವದಲ್ಲಿ ಸೋಮವಾರ ಜನೆವರಿ 7 ರಂದು ಹಾವೇರಿ, ಲಕ್ಷ್ಮೇಶ್ವರ ಗದಗ ಮಾರ್ಗದಲ್ಲಿ ಮಧ್ಯಾಹ್ನ 12.30 ಗಂಟೆಗೆ ಗದಗ ಜಿಲ್ಲೆಯ ಬರ ಪೀಡಿತ ಕೃಷಿ ಜಮೀನು ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಆರಂಭಿಸಿರುವ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಜನರೊಂದಿಗೆ ಚಚರ್ೆ ನಡೆಸಲಿದೆ. ಮಧ್ಯಾಹ್ನ2.30 ಗಂಟೆಗೆ ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿರುವ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದೆ. ಸಂಪುಟ ಉಪಸಮಿತಿಯು ಸಂಜೆ. 4.30 ಗಂಟೆಗೆ ಗದಗನಿಂದ ವಿಜಯಪುರಕ್ಕೆ ಪ್ರಯಾಣಿಸಲಿದೆ.