ಅನುಕಂಪ ಬಯಸದೇ ಸ್ವಾವಲಂಬಿಯಾಗಿ ಬದುಕಲು ವಿಶೇಷಚೇತನರಿಗೆ ಜಿಲ್ಲಾಧಿಕಾರಿ ಶೆಟ್ಟೆಣ್ಣವರ ಕರೆ

ಲೋಕದರ್ಶನ ವರದಿ

ವಿಜಯಪುರ 03: ವಿಶೇಷಚೇತನರು ಎಂಬ ಹೆಸರಿನಲ್ಲಿಯೇ ವಿಶೇಷ ಚೇತನವುಳ್ಳವರು ಎಂಬ ಅರ್ಥವಿದೆ. ದೈಹಿಕವಾಗಿ ನೀವು ಇತರರಿಗಿಂತ ಭಿನ್ನರಾಗಿದ್ದರೂ ವಿಶೇಷ ಶಕ್ತಿಯನ್ನು ಪಡೆದವರಾಗಿರುತ್ತೀರಿ. ಇನ್ನೊಬ್ಬರಿಂದ ಅನುಕಂಪವನ್ನು ಬಯಸದೇ ಸ್ವಾವಲಂಬಿಯಾಗಿ ಬದುಕುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಕರೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿವಿಧ ಸ್ಥಳೀಯ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ವಿಶ್ವ ವಿಕಲಚೇತನರ ದಿನಾಚರಣೆ 1992ರಿಂದ ಆಚರಣೆಗೆ ಬಂತು. ವಿಕಲಚೇತನರ ಅಭಿವೃದ್ದಿ ಹಾಗೂ ಸಬಲೀಕರಣಕ್ಕಾಗಿ ವಿಶ್ವಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಅನೇಕ ಅಂತರರಾಷ್ಟ್ರೀಯ ಒಪ್ಪಂದಗಳು, ಸಕರ್ಾರದ ಆದೇಶಗಳೂ ಆಗಿವೆ. ಆದರೆ ಬೇರೆಯವರು ಕೊಡುವ ಸಹಾಯಗಳನ್ನು ಬಳಸಿಕೊಂಡು ಆತ್ಮಗೌರವದಿಂದ ಬದುಕುವ ಛಲ ವಿಕಲಚೇತನರಲ್ಲಿ ಬರಬೇಕು ಎಂದು ಅವರು ಹೇಳಿದರು. 

ಸಮಾನ ವೇತನ, ಸಮಾನ ಗೌರವ, ಸಮಾನ ಪ್ರಾತಿನಿಧ್ಯ ನಿಮ್ಮ ಹಕ್ಕು. ನಿಮ್ಮ ದೌರ್ಬಲ್ಯವೇ ನಿಮ್ಮ ಶಕ್ತಿಯಾಗಿ ಪರಿವರ್ತನೆಯಾಗಬೇಕು. ನಿಮ್ಮ ಸ್ವಾಭಿಮಾನವನ್ನು ಬಿಟ್ಟು ಯಾರಿಂದಲೂ ಅನುಕಂಪ ಕನಿಕರವನ್ನು ನಿರೀಕ್ಷಿಸಬೇಡಿ. ನಿಮಗೆ ಗ್ರಾಮ ಮಟ್ಟದಲ್ಲಿ ಸಕರ್ಾರಿ ಸೌಲಭ್ಯ ಪಡೆಯುವಲ್ಲಿ ತೊಂದರೆಯಾದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಕಾರ್ಯದಶರ್ಿ ಅಥವಾ ಪಿಡಿಓಗಳನ್ನು ಸಂಪಕರ್ಿಸಿ, ನಿಮಗಾಗಿ ಸಕರ್ಾರ ನೀಡಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ. ಸಕರ್ಾರಿ ಕಚೇರಿಗಳಲ್ಲಿ ವಿಶೇಷ ಚೇತನರಿಗೇಂದೇ ರ್ಯಾಂಪ್, ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ. ನೀವು ಎಲ್ಲರಂತೆ ಎಲ್ಲರೊಂದಿಗೆ ಸಹಬಾಳ್ವೆ ನಡೆಸುವಂತಾಗಬೇಕು ಎಂಬುದೇ ಸಕರ್ಾರದ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಹಾಗೂ ವಿಕಲಚೇತನರ ಕ್ರೀಡಾಕೂಟ ಸಮಿತಿ ಅಧ್ಯಕ್ಷರಾದ ಎಚ್.ಪ್ರಸನ್ನ ಅವರು ಮಾತನಾಡಿ, ವಿಕಲಚೇತನರಿಗೆಂದೇ ವಿಶೇಷ ಕ್ರೀಡಾಕೂಟಗಳನ್ನು ಸಕರ್ಾರ ಹಮ್ಮಿಕೊಳ್ಳುತ್ತದೆ. ನಿಮಗೆ ಸಾಧ್ಯವಿರುವ ಎಲ್ಲ ಕ್ರೀಡೆಗಳಲ್ಲೂ ಭಾಗವಹಿಸಿ ನಿಮ್ಮ ಸಾಮಥ್ರ್ಯ ಸಾಬೀತುಪಡಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು. 

ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ ಎಸ್.ಜಿ.ಲೋಣಿ, ಡಾ.ಜಾವೇದ್ ಜಮಾದಾರ, ಅಡಿವೆಪ್ಪ ಸಾಲಗಲ್, ನಾಗರಾಜ ಲಂಬು, ಅರವಿಂದ ಕೊಪ್ಪ, ಜಿತೇಂದ್ರ ಕಾಂಬ್ಳೆ, ವಿನೋದ ಖೇಡ ಸೇರಿದಂತೆ ವಿವಿಧ ತಾಲೂಕುಗಳ ಕ್ರೀಡಾಪಟುಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿವರಣ ಹರಳಯ್ಯ ಅಂಧ ಮಕ್ಕಳ ಶಾಲೆಯ ವಿದ್ಯಾಥರ್ಿಗಳು, ಪ್ರಾರ್ಥನೆ ಹಾಗೂ ನಾಡಗೀತೆ ನಡೆಸಿಕೊಟ್ಟರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ವ್ಹಿ.ಜಿ.ಉಪಾಧ್ಯೆ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿದರ್ೇಶಕ ಅಶೋಕ ಕೆಲವಡಿ ವಂದಿಸಿದರು.