ವಿದ್ಯಾರ್ಥಿಗಳ ದಂತ ಆರೋಗ್ಯ ತಪಾಸಣೆ ಶಿಬಿರ

 ವಿದ್ಯಾರ್ಥಿಗಳ ದಂತ ಆರೋಗ್ಯ ತಪಾಸಣೆ ಶಿಬಿರ 

ಬೆಳಗಾವಿ 18: ರಾಷ್ಟ್ರೀಯ ಹಲ್ಲುಜ್ಜುವ ದಿನ ನಿಮಿತ್ತ,  ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ಇಲಾಖೆ, ಕೆಎಲ್‌ಇ ವಿಕೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಬೆಳಗಾವಿ ಇವರು ಚಿಕೋಡಿ ತಾಲೂಕಿನ ನನದಿ ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಪಬ್ಲಿಕ್ ಸ್ಕೂಲ್, ದಂತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದರು.   

12 ದಂತವೈದ್ಯರ ತಂಡವು 824 ವಿದ್ಯಾರ್ಥಿಗಳಿಗೆ ಮೌಖಿಕ ನೈರ್ಮಲ್ಯ, ಹಲ್ಲಿನ ಆರೋಗ್ಯದ ಮೇಲೆ ಆಹಾರದ ಪರಿಣಾಮ, ತಂಬಾಕು ನಿಯಂತ್ರಣ ಬಗ್ಗೆ ಶಿಕ್ಷಣ ನೀಡಿದರು. ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.   

ಶಿಬಿರದ ಯಶಸ್ಸಿಗಾಗಿ ಶಾಲೆಯ ಪ್ರಾಂಶುಪಾಲ ಗೀತಾ ನಾಯ್ಡು, ಡಾ. ಅಲ್ಕಾ ಕಾಳೆ, ಡಾ. ಅನಿಲ್ ಅಂಕೋಲಾ, ಡಾ. ರೂಪಾಲಿ ಎಂ. ಸಂಕೇಶ್ವರಿ, ಡಾ. ಸಾಗರ್ ಜಾಲಿಹಾಳ್, ಡಾ. ಡೇವಿಡ್ ಅವರಿಂದ ವಿಶೇಷ ಬೆಂಬಲವನ್ನು ಪಡೆಯಲಾಯಿತು.