ಲಾರ್ವಾನಾಶ ಪಡಿಸುವುದರಿಂದ ಡೆಂಘೀ ಚುಕುಂಗುನ್ಯ ಮಲೇರಿಯಾ ರೋಗಗಳನ್ನು ನಿಯಂತ್ರಣ ಸಾಧ್ಯ :ಡಾ.ಹೆಚ್ ಎಲ್ ಗಿರಡ್ಡಿ

Dengue, Chikungunya and Malaria can be controlled by de-larvae: Dr. H.L. Girardi

ಲಾರ್ವಾನಾಶ ಪಡಿಸುವುದರಿಂದ ಡೆಂಘೀ ಚುಕುಂಗುನ್ಯ ಮಲೇರಿಯಾ ರೋಗಗಳನ್ನು ನಿಯಂತ್ರಣ ಸಾಧ್ಯ :ಡಾ.ಹೆಚ್ ಎಲ್ ಗಿರಡ್ಡಿ 

ಗದಗ 10 :  ಪ್ರತಿಯೊಬ್ಬರ ಮನೆ ನೀರಿನ ಪರಿಕರಗಳಲ್ಲಿ ಉತ್ಪತ್ತಿಯಾಗುವ ಲಾರ್ವಾ ನಾಶ ಪಡಿಸುವುದರಿಂದ ಸೊಳ್ಳೆಗಳ ನಿಯಂತ್ರಣದ ಜೊತೆಗೆ ಸಾಂಕ್ರಾಮಿಕ ರೋಗಗಳಾದ ಮಲೇರಿಯ ಡೆಂಘೀ ಚಿಕುಂಗುನ್ಯ ರೋಗಗಳನ್ನು ನಿಯಂತ್ರಣ ಮಾಡಬಹುದು ಆದ್ದರಿಂದ ಆಶಾ ಕಾರ್ಯಕರ್ತೆಯರು  ಲಾರ್ವಾ ಸಮೀಕ್ಷೆ ಸರಿಯಾಗಿ ಮಾಡಿ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೆಕೆಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ.ಹೆಚ್ ಎಲ್ ಗೀರಡ್ಡಿಯವರು ಹೇಳಿದರು. 

ಅವರು ಕರ್ನಾಟಕ ಜಿಲ್ಲಾ ಆಡಳಿತ. ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಾಲಯ ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ .ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಏರಿರಿ​‍್ಡಸಲಾಗಿದ್ದ ಆಶಾ ಕಾರ್ಯಕರ್ತೆಯರ ತರಬೇತಿ ಮತ್ತು ಬ್ಯಾಟರಿಗಳನ್ನು ವಿತರಣಾ ಸಮಾರಂಭದಲ್ಲಿ ಬ್ಯಾಟರಿ ವಿತರಿಸಿ ಮಾತನಾಡಿಪ್ರತಿದಿನವೂ ನೀವು ಪ್ರತಿಯೊಂದು ಮನೆ ಬೇಟಿ ಮಾಡುವಾರ ಸಾರ್ವಜನಿಕರ ಪ್ರೀತಿಗೆದ್ದು ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸಬೇಕು.,ಸಾರ್ವಜನಿಕರಿಗೆ ಲಾರ್ವಾ ನಾಶದ ಪರಿಣಾಮದ ಮತ್ತು  ಬಗ್ಗೆ.                  ಡೆಂಘೀ ಚಿಕುಂಗುನ್ಯ ರೋಗದ ಲಕ್ಷಣದ ಬಗ್ಗೆ ಅರಿವನ್ನು ಮೂಡಿಸಬೇಕು.ವರದಿಗಳನ್ನು ಸರಿಯಾದ ಸಮಯಕ್ಕೆ ಕೋಡುವುದು ನಿತ್ಯ ನೀವು ಬೆಳಿಗ್ಗೆ ಕಾರ್ಯ ಆರಂಬಿಸಿರಿ ಮತ್ತು ಸಮನ್ವಯತೆಯಿಂದ ಸೇವೆಯನ್ನು ಸಲ್ಲಿಸಿ ಅಧಿಕಾರಿಗಳಿಂದ ಸಾರ್ವಜನಿಕ ರಿಂದ ಪ್ರಶಂಸನೆಗೆ ಪಾತ್ರರಾಗಬೇಕೆಂದು ಹೇಳಿದರು 

ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ  ವೈದ್ಯಾಧಿಕಾರಿಗಳಾದ ಡಾ ಅಮೃತ ಹರಿದಾಸ ಮಾತನಾಡಿ ಪ್ರತಿನಿತ್ಯ ನೀವು ನಿವೂ ಕಾರ್ಯ ನಿರ್ವಹಿಸಿದ ಬಗ್ಗೆ ಜಿಪಿಎಸ್ ಫೋಟೋಗಳನ್ನು ಗ್ರುಪ್‌ಗೆ ಶೇರ್ ಮಾಡಿರಿ, ಅಂಗನವಾಡಿ ಶಾಲೆ.ವಸತಿ ನಿಲಯ. ಗ್ರಾಮ ಪಂಚಾಯತಿಗೆ ಬೇಟಿ ಮಾಡಿರಿ,  ನೀರಿನ ಪೈಲೈನ್ ಲಿಕೇಜ್ ಇದ್ದರರೆ ಪೋಟೋ ಕಳುಹಿರಿ. ಬೇಸಿಗೆಯಲ್ಲಿ ಬಿಸಿಲಿನ ಪ್ರಕರತೆ ಹೆಚ್ಚಾಗಿದ್ದು ಸುದ್ದ ನೀರು ಆಹಾರವನ್ನು ಮತ್ತು ಮನೆಯಲ್ಲಿಯೇ ತಯಾರಿಸಿದ ಶರಬತ್ ಮತ್ತು ಹಣ್ಣುಗಳನ್ನು ಸೇವಿಸಲು ಹಾಗೂ ಒಆರ್ ಎಸ್   ಸೇವನೆಯ ಮಹತ್ವದ ಬಗ್ಗೆ ತಿಳಿಸಬೇಕೆಂದು ಹೇಳಿದರು. 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಕಾರ್ಯಾಧ್ಯಕ್ಷರಾದ ಶಿದ್ದಪ್ಪ ಲಿಂಗದಾಳ ಹಾಗೂ ಎನ್ ವಿ ಬಿಡಿ ಸಿ ವಿಭಾಗ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ  ಅಜಯಕುಮಾರ ಕಲಾಲ ಮಾತನಾಡಿ  ಯಾವುದೇ ಜ್ವರ ಇರಲಿ ನೀವು ತಪ್ಪದೆ ರಕ್ತಲೇಪನವನ್ನು ಮಾಡಬೇಕು, ಗೋವಾ ಮಂಗಳೂರಿನಿಂದ ಬಂದವರ ರಕ್ತಲೇಪನ ಮಾಡುವುದು, ಮನೆಯಲ್ಲಿ ಸಂಜೆ ಬೇವಿನಸೊಪ್ಪಿನಿಂದ ದೂಮಿಕರ ಮಾಡುವುದರಿಂದ ಸೊಳ್ಳೆ ಕಡಿತವನ್ನು ತಪ್ಪಿಸಿಕೊಳ್ಳಬುದು ನಿಮ್ಮ ನಿತ್ಯದ ಕಾರ್ಯಗಳಲ್ಲಿ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಲು ಎನ್ ವಿಡಿ ಬಿಡಿಸಿ ಇಲಾಖೆಯಿಂದ ಬ್ಯಾಟರಿಗಳನ್ನು ನೀಡಿದ್ದು ನೀವು ಲಾರ್ವ ಸಮೀಕ್ಷೆ ಸರಿಯಾಗಿ ಮಾಡಿ ವರದಿಯನ್ನು ಇಲಾಖೆ ಸಲ್ಲಿಸಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸಹಾಯಕರಾದ ವಾಯ್ ಎನ್ ಕಡೇಮನಿ ಎಸ್‌.ಬಿ,ಗಡಾದ ವಿನಾಯಕ ಬಡಿಗೇರ.ವಂದನಾ ಠಾಕೂರ ಲಕ್ಷ್ಮಿ ಭಜಂತ್ರಿ ನಿಕಿತಾ ಮೈತ್ರಿ ಚಂದ್ರಕಲಾ ತೋಟದ ಅಕ್ಷತಾ ಇಳಿಗೇರ  ರೇಶ್ಮಾ ಹೊಸೂರ ಮಾಲಾ ಮೇವುಂಡಿ ಶಶಿಕಲಾ ಹಡಪದ ಉಪಸ್ಥಿತರಿದ್ದರು ಪ್ರಾರ್ಥನೆಯನ್ನು ಅನಿತಾ ಬಾಗಲಕೋಟ ಮಾಡಿದರು.ಕಾರ್ಯಕ್ರಮವನ್ನು ಮುತ್ತಪ್ಪ ಹಟ್ಟಿಮನಿ ನಿರೂಪಿಸಿದರು ಜಯಶ್ರೀ ಡಬಾಲಿ ಸ್ವಾಗತಿಸಿದರು