ಪೈಪ್ ಲೈನ್ ಹಾಗೂ ರಸ್ತೆ ದುರಸ್ಥಿ ಮಾಡುವಂತೆ ಒತ್ತಾಯಿಸಿ ಮನವಿ

ಪೈಪ್ ಲೈನ್ ಹಾಗೂ ರಸ್ತೆ ದುರಸ್ಥಿ ಮಾಡುವಂತೆ ಒತ್ತಾಯಿಸಿ ಮನವಿ  

ಹಾವೇರಿ 16:ಇಲ್ಲಿನ  ಬಸವೇಶ್ವರ ನಗರದ ಬಿ ಬ್ಲಾಕ್ 12ನೇ ಕ್ರಾಸ್‌ನಲ್ಲಿ ಮುಖ್ಯರಸ್ತೆಯಲ್ಲಿನ ಪೈಪ್ ಲೈನ್ ಹಾಗೂ ರಸ್ತೆ ದುರಸ್ಥಿ ಮಾಡುವಂತೆ ಒತ್ತಾಯಿಸಿ ಸ್ಥಳೀಯ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇಲ್ಲಿನ ನೀರು ಸರಬರಾಜು ಪೈಪ್ ಲೈನ  ಒಡೆದು ಒಂದು ವರ್ಷ ಗತಿಸಿದರು ಇದುವರೆಗೂ ದುರಸ್ತಿ ಮಾಡದ ನಗರಸಭೆ ಈ ಕುರಿತಂತೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಎಲ್ಲರಿಗೂ ಗಮನಕ್ಕೆ ತರಲಾಗಿದೆ. ಇದುವರೆಗೂ ದುರಸ್ತಿ ಆಗಿರುವುದಿಲ್ಲ. ಸಂಬಂಧಿಸಿದವರಿಗೆ ತಕ್ಷಣ ದುರಸ್ಥಿ ಮಾಡಲು ತಿಳಿಸಿ ವಾರಕ್ಕೊಮ್ಮೆ ನೀರು ಬಿಡುವುದನ್ನು ಬಿಟ್ಟು ಈ ರೀತಿಯಾಗಿ ನಗರದಲ್ಲಿ ಹಲವಾರು ಕಡೆ ನಿತ್ಯ ನೀರು ಪೋಲಾಗುತ್ತಿದ್ದು, ಇದನ್ನು ತಡೆದು ಕನಿಷ್ಠ ಎರಡು-ಮೂರು ದಿನಕ್ಕಾದರೂ ನಗರದಲ್ಲಿ ನೀರು ಬಿಡಬೇಕೆಂದು ಹಾಗೂ ನಗರದಲ್ಲಿ ಗ್ಯಾಸ್ ಪೈಪ್ಲೈನ್ ಹಾಕುವ ನಿಟ್ಟಿನಲ್ಲಿ ಹಲವಾರು ಕಡೆ ಒಳ್ಳೆಯ ರಸ್ತೆಗಳನ್ನು ಅಗೆದು ಹಾಗೆ ಬಿಟ್ಟು ಹೋಗಿದ್ದಾರೆ. ಇದುವರೆಗೂ ದುರಸ್ತಿ ಮಾಡಿರುವುದಿಲ್ಲ. ತಕ್ಷಣ ಸಂಬಂಧಿಸಿದವರಿಗೆ ದುರಸ್ಥಿ ಮಾಡಲು ಕಠಿಣ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ  ಜಿಪಂ ಮಾಜಿ ಸದಸ್ಯ  ಸಿದ್ಧರಾಜ ಕಲಕೋಟಿ ನಾಗರಿಕರಾದ ದಿನಕರ ಸಿ ಕೋರಿಶೆಟ್ಟರ,ಶಶಿಧರ ಹೊಸಳ್ಳಿ,ಶಿವಕುಮಾರ ಲಂಬಿ ಇದ್ದರು.