ಶೀಘ್ರದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲು ಆಗ್ರಹ
ಕಂಪ್ಲಿ.11 ರೈತರನ್ನು ನಷ್ಟದಿಂದ ಪಾರಮಾಡಲು ಶೀಘ್ರದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ನಂ.3ಸಣಾಪುರ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಅಯ್ಯೋದಿ ವೆಂಕಟೇಶ ಆಗ್ರಹಿಸಿದರು. ಪಟ್ಟಣದತ ತಹಸೀಲ್ದಾರ್ ಎಸ್.ಶಿವರಾಜಗೆ ಶುಕ್ರವಾರ ನಂ.3ಸಣಾಪುರ ನೀರು ಬಳಕೆದಾರರ ಸಹಕಾರ ಸಂಘದ ಸಪದಾಧಿಕಾರಿಗಳು ಮನವಿ ಸಲ್ಲಿಸಿದ ನಂತರ ಮಾತನಾಡಿ ಇತ್ತಿಚಿಗೆ ಮುಂಗಾರು ಮಳೆ ಫ್ರಾರಂಭವಾಗಿದೆ ಕಂಪ್ಲಿ ಸುತ್ತ ಮುತ್ತ ಸಂಪೂರ್ಣವಾಗಿ ಭತ್ತ ಕ್ಲೋಯಲು ಹಂತಕೇ ಬಂದಿದೆ ಸರ್ಕಾರ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದರ ಜೊತೆಗೆ ಶೀಘ್ರದಲ್ಲಿ ಖರೀದಿ ಕೇಂದ್ರ ತೆಗೆಯಬೇಕು ತುಂಗಭದ್ರಾ ನದಿ ಪಾತ್ರದ 2000ಹೆಕ್ಟರ್ ಪ್ರದೇಶದ ಭತ್ತ ಕೊಯ್ಲಾಗುತ್ತಿದ್ದು, ಸದ್ಯದ ದರದಲಿ ಭತ್ತ ಮಾರಿದರೆ ರೈತ ತುಂಭ ನಷ್ಟವಾಗುತ್ತದೆ ಕೂಲಿ ಕೃಷಿವೆಚ್ಚ ವೀಪರೀತವಾಗಿ ಏರುತ್ತಿದೆ ಭತ್ತ ದರ ಏರಿಕೆಯಾಗುತ್ತಿಲ್ಲ ಬೇಸಿಗೆ ಹಂಗಾಮಿನ ಸಸಿಮಡಿಗಳಲ್ಲೇ ಆನೆಕೊಂಬು, ಕೊಳವೆ ಕಾಣಿಸಿಕೊಂಡಿದ್ದರಿಂದ ಸಸಿಮಡಿ ಕೆಡಿಸಿ ಹೊಸ ಸಸಿಮಡಿ ಹಾಕಿಕೊಂಡಿದ್ದರಿಂದ ಆರಂಭದಲ್ಲಿಯೇ ಸಾವಿರಾರು ರೂಪಾಯಿ ನಷ್ಟವಾಗಿತ್ತು. ಗೊಬ್ಬರ, ಓಷಧಿ, ಕೂಲಿ, ಕೊಯ್ಲು ದರ, ವಿಪರೀತವಾಗಿದ್ದು. ಇದೀಗ ಬೇಸಿಗೆ ಹಂಗಾಮಿನ ಭತ್ತ ದರ ಕುಸಿತಗೊಂಡಿದೆ.. ಏ.10ರಿಂದ ಕಾಲುವೆಯಲ್ಲಿ ನೀರು ಸ್ಥಗಿತಗೊಂಡಿದ್ದು ಸುಮಾರು 10ಸಾವಿರ ಹೆಕ್ಟರ್ ಪ್ರದೇಶದ ಭತ್ತಕ್ಕೆ ನೀರಿಲ್ಲದೆ ಶೇ.30ರಿಂದ ಶೇ.40ರಷ್ಟು ಭತ್ತ ಇಳುವರಿ ಕುಸಿತಗೊಳ್ಳಲಿದೆ.ಸರ್ಕಾರ ತುರ್ತಾಗಿ ಭತ್ತ ಖರೀದಿ ಕೇಂದ್ರ ತೆರೆಯುವಲ್ಲಿ ಮುಂದಾಗಬೇಕು ಒತ್ತಾಯಿಸಿದರು.
ಮನವಿ ಸಲ್ಲಿಸುವಲ್ಲಿ ಅಕ್ಕಿ ಗಿರಣಿಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ನೀರು ಬಳಕೆದಾರರ ಸಂಘದ ಪದಾಧಿಕಾರಿಗಳಾದ ಅಲಬನೂರು ಬಸವರಾಜ, ಕೆ.ದೊಡ್ಡಬಸಪ್ಪ, ಸಿ.ಶರಣಗೌಡ, ಓಂಕಾರಿಗೌಡ, ಶರಣಪ್ಪ, ಎಚ್.ಡಿ.ದೊಡ್ಡಬಸಪ್ಪ, ಪ್ರಸಾದ್, ಅರುಣ್‌ಕುಮಾರ್, ಪಂಪಾಪತಿ ಇತರರಿದ್ದರು.