ಬೆಳಗಾವಿ-ಹೈದ್ರಾಬಾದ್-ಮಣಗೂರು ರೈಲನ್ನು ದಿನವಹಿ ರೈಲಾಗಿ ಖಾಯಂಗೊಳ್ಳಿಸಲು ಒತ್ತಾಯ
ಹಬ್ಬಳ್ಳಿ 21: ನೈರುತ್ಯ ರೈಲ್ವೇ ವಲಯ ಬಳಕೆದಾರರ ಸಮಾಲೋಚನಾ ಸಮಿತಿ ಸಭೆ, ದಿನಾಂಕ : 20.12.2024 ರಂದು ವಲಯ ಪ್ರಧಾನ ಕಾರ್ಯಾಲಯ, ಹುಬ್ಬಳ್ಳಿ ರೈಲು ಸೌಧದಲ್ಲಿ ಜರುಗಿತು. ಈ ಸಂದರ್ಭದಲ್ಲಯ ವಲಯ ರೈಲು ಬಳಕೆದಾರರ ಹಿರಿಯ ಸಲಹಾ ಸಮಿತಿ ಸದಸ್ಯರಾದ ಬಾಬುಲಾಲ್ ಜೈನ್ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಅಗತ್ಯವಾಗಿರುವ ಹಲವು ಪ್ರಮುಖ ರೈಲ್ವೇ ಬೇಡಿಕೆಗಳ ಬಗ್ಗೆ ಪ್ರಧಾನ ವ್ಯವಸ್ಥಾಪಕರಾದ ಅರವಿಂದ್ ಶ್ರೀವಾಸ್ತವ್ ಅವರ ಜೊತೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಬೇಡಿಕೆಗಳು :ಇತ್ತೀಚಿಗೆ ರದ್ದಾದ ಗಾಡಿ ಸಂಖ್ಯೆ : 07335/07336 ಬೆಳಗಾವಿ-ಹೈದ್ರಾಬಾದ್-ಮಣಗೂರು ರೈಲನ್ನು ಪುನರ್‌ಆರಂಭಗೊಳಿಸಿ ದಿನವಹಿ ರೈಲಾಗಿ ಖಾಯಂ ಗೊಳಿಸಲು ಒತ್ತಾಯ.
ಹೊಸಪೇಟೆ-ಮುಂಬೈ ನಡುವೆ ಸಂಚರಿಸುತ್ತಿರುವ ಗಾಡಿ ಸಂಖ್ಯೆ : 11139/11140 ಈ ರೈಲಿಗೆ ಹಳೆಯ ಋಈ ಕೋಚ್‌ಗಳನ್ನು ಅಳವಡಿಸಲಾಗಿದ್ದು, ಸದರಿ ರೈಲಿಗೆ ಆಧುನಿಕ ಸೌಲಭ್ಯ ವುಳ್ಳ ಪೂರ್ಣಪ್ರಮಾಣದ ಐಊಃ ಕೋಚ್‌ಗಳನ್ನು ಅಳವಡಿಸಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಂದ ಮುಂಬೈ ಮತ್ತು ಮಹರಾಷ್ಟ್ರದ ಇತರ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚುವರಿ ಆಸನಗಳ ಕೋಟಾವನ್ನು ನಿಗದಿಪಡಿಸಬೇಕೆಂದರು. ಹೊಸಪೇಟೆ ನಗರದ ಚಿತ್ತವಾಡ್ಗಿ ಪ್ರದೇಶದಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ : 4ರಲ್ಲಿ (ಐ.ಎಸ್.ಆರ್.ಸಕ್ಕರೆ ಕಾರ್ಖಾನೆ ಸಮೀಪ) ರೈಲು ಸಂಚಾರ ದಟ್ಟಣೆಯಿಂದ ಹೆಚ್ಚುಕಾಲ ಮುಚ್ಚಿರುವುದರಿಂದ ಈ ಪ್ರದೇಶದ ನಿವಾಸಿಗಳಿಗೆ ವಿಪರೀತ ತೊಂದರೆಯಾಗುತ್ತದೆ. ಇಲ್ಲಿ ಸುರಕ್ಷತೆ ಮತ್ತು ತಡೆ ರಹಿತ ಸುಗಮ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಖಓಃ (ಮೇಲು ಸೇತುವೆ) ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಹಬ್ಬಗಳು ಹಾಗೂ ಇತರೆ ವಿಶೇಷ ಸಂದರ್ಭದಲ್ಲಿ ಮೈಸೂರು ಮತ್ತು ಬೆಂಗಳೂರಿನಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ವಿಶೇಷ ರೈಲುಗಳ ಸಂಚಾರ ವ್ಯವಸ್ಥೆಯನ್ನು ಮಾಡಬೇಕೆಂದರು. ಹಂಪಿ ಎಕ್ಸ್‌ಪ್ರೇಸ್ ಹಾಗೂ ಹೊಸಪೇಟೆ-ಮುಂಬೈ ಗಾಡಿಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಮರ್ಕ ಹೊದಿಕೆ (ಃಜಜ ಖಠಟ) ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.