ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿಯು ಗಜಾನನ ಮಹಾಲೆಯವರ ಹೆಸರಿನಲ್ಲಿ ಪ್ರಶಸ್ತಿ ಕೊಡಲು ಆಗ್ರಹ
ಧಾರವಾಡ 08: ಕಲಾ ಪೋಷಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಗಜಾನನ ಮಹಾಲೆಯವರು ಕಲಾವಿದರರಿಗೆ. ಪ್ರಸಾದನ ಮಾಡುವ ಮೂಲಕ ಉತ್ತಮ ಗೌರವ ತಂದು ಕೊಟ್ಟ ಮಹಾನ ಕಲಾವಿದ ಅಲ್ಲದೆ ಅವರು ಒಬ್ಬ ಶ್ರೇಷ್ಠ ಕಾಯಕ ಯೋಗಿ. ಇಂಥವರ ಹೆಸರಿನಲ್ಲಿ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷ ಪ್ರಶಸ್ತಿಯನ್ನು ಕೊಡುವ ಕೆಲಸ ಮಾಡಬೇಕು ಎಂದು ಧಾರವಾಡದ ಪರಿಸರ ಭವನದಲ್ಲಿ ಗಜಾನನ ಮಹಾಲೆ ಕಲಾ ಪ್ರತಿಷ್ಠಾನದ ವಾರ್ಷಿಕ ಸರ್ವ ಸಾಧಾರಣ ಸದಸ್ಯರ ಸಭೆಯಲ್ಲಿ ಆಗ್ರಹಿಸಲಾಯಿತು. ಈ ಪ್ರತಿಷ್ಠಾನದಿಂದ ಪ್ರಸಾದನ ಕಲೆಯ ಕುರಿತು ತರಬೇತಿ ಮತ್ತು ವಿವಿಧ ಸ್ಪರ್ಧೆಗಳನ್ನು ನಡೆಸುವುದು, ಪ್ರತಿವರ್ಷ ಮಹಾಲೆಯವರ ಜನ್ಮ ದಿನದಂದು ಗಜಾನನ ಮಹಾಲೆ ಅವರ ಹೆಸರಿನಲ್ಲಿ ಕಲಾ ಉಪಾಸಕ ಪ್ರಶಸ್ತಿಯನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ತಮ ಕಾರ್ಯಮಾಡಿದವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಕಲಾ ಉಪಾಸಕ ಪ್ರಶಸ್ತಿ ಪ್ರದಾನ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಇದೆ ಸಭೆಯಲ್ಲಿ ಗಜಾನನ ಮಹಾಲೆ ಕಲಾ ಪ್ರತಿಷ್ಠಾನಕ್ಕೆ 2025-2030 ನೇ ಸಾಲಿಗೆ ಅಧ್ಯಕ್ಷರಾಗಿ ಡಾ.ಬಾಳಣ್ಣ ಶೀಗೀಹಳ್ಳಿ, ಉಪಾಧ್ಯಕ್ಷರಾಗಿ ಶಂಕರ ಕುಂಬಿ ಮತ್ತು ಶಶಿಧರ ತೋಡಕರ, ಕಾರ್ಯದರ್ಶಿಗಳಾಗಿ ಕೆ ಎಚ್ ನಾಯಕ, ಸಹ ಕಾರ್ಯದರ್ಶಿ ಯಾಗಿ ಪ್ರಮಿಳಾ ಜಕ್ಕಣ್ಣವರ, ಕೊಶಾದಕ್ಷರಾಗಿ ಬಿ ಆಯ್ ಈಳಿಗೇರ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ. ಶಂಕರ ಹಲಗತ್ತಿ, ಬಿ ಮಾರುತಿ, ಎಂ ಎಂ ಚಿಕ್ಕಮಠ, ಸುನೀಲ ಕುಲಕರ್ಣಿ, ಪ್ರಕಾಶ ಬಾಳಿಕಾಯಿ, ಸಂತೋಷ ಮಹಾಲೆ, ಅನಿಲ್ ಮೈತ್ರಿ, ವಿದುಷಿ ನಾಗರತ್ನ ಹಡಗಲಿ, ಅಪೂರ್ವ ಮಹಾಲೆ, ವೀಣಾ ಅಠವಲೆ (ಮೊಡಕ್), ಡಾ. ಕುಮಧ್ವತಿ ಶಂ. ಭರಮಗೌಡರ ಇವರು ನೂತನ ಪದಾಧಿಕಾರಿಗಳಾಗಿ ಆಯ್ಕೆ ಆಗಿದ್ದಾರೆ. ಸಭೆಯ ಅಧ್ಯಕ್ಷತೆ ಯನ್ನು ಗಜಾನನ ಮಹಾಲೆ ಕಲಾ ಪ್ರತಿಷ್ಠಾನದ ಅಧ್ಯಕ್ಷ ಡಾ.ಬಾಳಣ್ಣ ಶೀಗೀಹಳ್ಳಿ ವಹಿಸಿದ್ದರು. ಶಂಕರ ಕುಂಬಿ ಸ್ವಾಗತಿಸಿದರು, ಬಿ ಆಯ್ ಈಳಿಗೇರ ವಾರ್ಷಿಕ ವರದಿ ಓದಿದರು, ಕೆ ಎಚ್ ನಾಯಕ ಲೆಕ್ಕ ಪತ್ರ ಮಂಡಿಸಿದರು, ಸಂತೋಷ ಮಹಾಲೆ ವಂದಿಸಿದರು.