ಅವೈಜ್ಞಾನಿಕವಾಗಿ ಗೊತ್ತು ಪಡಿಸಿದ 12 ಹೊಸ ಮರಳು ಬ್ಲಾಕ್-ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಲು ಒತ್ತಾಯ
ರಾಣೇಬೆನ್ನೂರು 08: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕು ಮತ್ತು ಹಾವೇರಿ ತಾಲೂಕಿನ ಹಾವನೂರು ಸೇರಿದಂತೆ 12 ಹೊಸ ಮರಳು ಬ್ಲಾಕ್ ಟೆಂಡರ್ ಪ್ರಕ್ರಿಯೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಪ್ರಕ್ಯೂಟ್‌ಮೆಂಟ್ ಮುಖಾಂತರ ಟೆಕ್ನಿಕಲ್ ಮತ್ತು ಪೈನಾನ್ಸಿಯಲ್ ಟೆಂಡರ್ ಪ್ರಕ್ರಿಯೆಯನ್ನು ಸಿದ್ದಗೊಳಿಸಿ ಟೆಂಡರ್ ಪೂರ್ವಭಾವಿ ಸಭೆಯನ್ನು ಆಸಕ್ತರಿಂದ ಇಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಛೇರಿಯಲ್ಲಿ ಕರೆಯಲಾಗಿತ್ತು. ಸಭೆ ನಡೆಯುವ ಸಂದರ್ಭದಲ್ಲಿ ಆಗಮಿಸಿದ ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲರ ನೇತೃತ್ವದ ತಂಡ ಇಲಾಖೆ ಟೆಂಡರ್ ಪ್ರಕ್ರಿಯಲ್ಲಿ ಅನುಸರಿಸುತ್ತಿರುವ ಅವೈಜ್ಞಾನಿಕ ನೀತಿ ಮರಳು ಮಾಫಿಯಾದವರ ಕೈವಾಡ ಜನಸಾಮಾನ್ಯರಿಗೆ ಎಟುಕದಂತ ಮರಳು ಗುತ್ತಿಗೆಯ ನೀತಿಯನ್ನು ಬದಲಾವಣೆ ಮಾಡಬೇಕು ಈ ಹೊಸ ಮರಳು ಬ್ಲಾಕ್‌ಗಳ ಹರಾಜು ಪ್ರಕ್ರಿಯೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಬೇಕು ಟೆಂಡರ್‌ನ ಈ ಪ್ರಕ್ಯೂಟ್‌ಮೆಂಟ್ ಟೆಕ್ನಿಕಲ್ ಮತ್ತು ಪೈನಾನ್ಸಿಯಲ್ ಪದ್ಧತಿಯನ್ನು ಕೈಬಿಟ್ಟು ಸರಳ ರೀತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಬೇಕು ಎಂಬುದು ಸೇರಿದಂತೆ ಟೆಂಡರ್ ಪ್ರಕ್ರಿಯಲ್ಲಿ ಇಲಾಖೆಯ ನ್ಯೂನ್ಯತೆಗಳ ಬಗ್ಗೆ ಸುದೀರ್ಘವಾದ ಮನವಿ ಪತ್ರವನ್ನು ರೈತ ಸಂಘಟನೆಗಳ ಪರವಾಗಿ ಹಿರಿಯ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನವೀನ್ ಪಿ.ಎಸ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ರವೀಂದ್ರಗೌಡ ಎಫ್. ಪಾಟೀಲ ಈಗ ನಿಗದಿಪಡಿಸಿದ 12 ಬ್ಲಾಕ್‌ಗಳಲ್ಲಿ ಕೆಲವು ಪ್ರದೇಶಗಳಲ್ಲಿ ಮರಳನೆಲ್ಲಾ ಅಕ್ರಮ ಮರಳು ದಂದೆಕೋರರು ಬಳಿದುಬಾಚಿದ್ದಾರೆ. ಮೀಸಲು ಬ್ಲಾಕ್‌ಗಳಾದ ಪತ್ತೆಪುರದ ಹತ್ತಿರ ಮರಳೇ ಇಲ್ಲಾ ಅಲ್ಲಿ ಈಗಾಗಲೆ ಅಕ್ರಮವಾಗಿ ಮರಳನ್ನು ಟಾಸ್‌ಪೋರ್ಸ ಸಮಿತಿಯವರ ಸಹಕಾರದಿಂದ ಸಂಪೂರ್ಣ ಖಾಲಿ ಮಾಡಲಾಗಿದೆ. ಈಗ ಇಲಾಖೆ ನಿಗದಿಪಡಿಸಿದ 12 ಬ್ಲಾಕ್ ಮತ್ತು ಮೀಸಲಾತಿಯನ್ನು ಗಮನಿಸಿದರೆ ಯಾರೋ ಪ್ರಭಾವಿ ಮರಳು ದಂದೆಕೋರನ ಅಣತೆಯಂತೆ ಎಲ್ಲವು ನಿಗದಿಯಾಗಿರುವುದು ಸ್ಪಷ್ಟವಾಗುತ್ತದೆ ಎಂದು ಪಾಟೀಲರು, ಈಗಿರುವ ಟೆಂಡರ್ ಪ್ರಕ್ರಿಯೆ ‘ಕಬ್ಬಿಣದ ಕಡೆಲೆ’ ಎಂತಿದೆ ಇದು ಜನಸಾಮಾನ್ಯರಿಗೆ ನಿಲುಕದಂತಿದೆ. ಜಿ.ಎಸ್.ಟಿ. ಲಕ್ಷ ಲಕ್ಷ ಫೈನಾನ್ಸ್ ಡಿಪಾಜಿಟ್ ಅಂತಿಂತವರಿಂದ ಸಾಧ್ಯವಿಲ್ಲ. ಇದುವರೆಗೂ ಈ ಮರಳು ಟೆಂಡರ್‌ನಲ್ಲಿ ಭಾಗವಹಿಸುತ್ತಿರುವವರು ಪ್ರಭಾವಿಗಳು ಮತ್ತು ಉಳ್ಳವರು ಹಾಗೂ ಇಲಾಖೆಯೊಂದಿಗೆ ಶಾಮಿಲಾದಂತವರು ಮಾತ್ರ ಇದ್ದಾರೆ. ಹಾವೇರಿ ಜಿಲ್ಲೆ ಅಕ್ರಮ ಮರಳು ದಂದೆಗೆ ರಾಜ್ಯದಲ್ಲಿಯೇ ಖ್ಯಾತಿಯಾಗಿದೆ. ಸರ್ಕಾರಕ್ಕೆ ಸಂದಾಯವಾಗಬೇಕಿದ್ದ ನೂರಾರು ಕೋಟಿ ರಾಜಧನ ಹಣ ನಷ್ಟವಾಗಿದೆ. ಈಗಾಗಲೆ ಅಕ್ರಮ ಮರಳು ದಂದೆಯಿಂದ ಪರಿಸರ ಹಾನಿಯಾಗಿದೆ ಅಲ್ಲದೆ ನದಿಪಾತ್ರದ ಎರಡೂ ದಂಡೆಯ ರೈತರ ಫಲವತ್ತಾದ ಭೂಮಿಯ ಮಣ್ಣು ನದಿ, ಹಳ್ಳ, ಕೊಳ್ಳ ಸೇರುತ್ತಿದೆ. ಹಟ್ಟಿ ಚಿನ್ನದ ಗಣಿ ಕಂಪನಿಗೆ ಈ ಜಿಲ್ಲೆಯಲ್ಲಿ ಕಳೆದ ಬಾರಿಯಿಂದಲೂ ಕೆಲವು ಬ್ಲಾಕ್‌ಗಳಲ್ಲಿ ಗಣಿಗಾರಿಕೆ ಮಾಡಲು ಸರಕಾರ ಅವಕಾಶ ನೀಡಿದ್ದು ಅಲ್ಲಿಯೂ ಕೂಡ ಎದ್ವತದ್ವಾ ಲೂಟಿ ಹೊಡೆಯಲಾಗಿದೆ. ಈ ಎಲ್ಲಾ ಅಕ್ರಮ ಕಾನೂನುಗಳಿಗೆ ಕಡಿವಾಣ ಹಾಕಲು ಹೊಸದಾಗಿ ಟೆಂಡರ್ ಕರೆಯಬೇಕು. ಕರೆದಿರುವ ಈ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸದಿದ್ದರೆ ಜಿಲ್ಲೆಯಾದ್ಯಂತ ಹೆದ್ದಾರಿ ತಡೆ ಮಾಡಿ ಪ್ರತಿಭಟಿಸಲಾಗುವುದು ಎಂದು ಪಾಟೀಲರು ಎಚ್ಚರಿಸಿದರು.ಪೋಟೋ