ಹೊಸಪೇಟೆ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಶೀರ್ಘ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ

Demand that early action be taken to set up a sugar factory in Hospet taluk

ಹೊಸಪೇಟೆ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಶೀರ್ಘ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ  


ವಿಜಯನಗರ   25 : ನಾಗರೀಕ ವೇದಿಕೆ ಹಾಗೂ ವಿನಾಯಕ ನಗರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಇಂದು ಕ್ಷೇತ್ರದ ಶಾಸಕರಾದ ಹೆಚ್‌.ಆರ್‌.ಗವಿಯಪ್ಪ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷರಾದ ವೈ.ಯಮುನೇಶ್ ಮಾತನಾಡಿ ಸ್ಥಳಿಯ ಐ.ಎಸ್‌.ಆರ್‌. ಕಾರ್ಖಾನೆ ಕಳೆದ 9-10 ವರ್ಷಗಳಿಂದ ಬಂದ್ ಆಗಿದೆ. ಕಾರ್ಖಾನೆ ಚಾಲನೆಯಲ್ಲಿದ್ದಾಗ ಈಭಾಗದ ರೈತರ ಆರ್ಥಿಕಪರಿಸ್ಥಿತಿಈಗಿನಷ್ಠು ಶೋಚನೀಯವಾಗಿರಲಿಲ್ಲ. ಶಾಸಕರಾಗಿದ್ದ ದಿಽಽ ಶಂಕರಗೌಡರು, ರೈತ ಸಂಘದ ಅಧ್ಯಕ್ಷರಾಗಿದ್ದಷ್ಟೂ ಕಾಲ ಎಷ್ಟೇ ಅಡೆತಡೆ ಎದುರಾದರೂ ಕಾರ್ಖಾನೆ ಬಂದಾಗಲಿಲ್ಲ. ಅದೇನೆ ಇರಲಿ ಹೊಸಪೇಟೆ ತಾಲೂಕಿನ ಕಬ್ಬು ಬೆಳೆಗಾರರ ಆರ್ಥಿಕ ಜೀವನಾಡಿಯಾಗಿದ್ದ ಕಾರ್ಖಾನೆ ಬಂದ್ ಆದ ನಂತರ ರೈತರ ಬದುಕಿನ ಬೆನ್ನೆಲುಬು ಮುರಿದಂತಾಗಿದೆ. ಕೇವಲ ರೈತರ ಬದುಕಿನ ಮೇಲಲ್ಲದೆ ಈ ಭಾಗದ ವ್ಯಾಪಾರ ವಹಿವಾಟು ಆರ್ಥಿಕ ಬೆಳವಣಿಗೆಯ ಮೇಲೆ ದೊಡ್ಡ ಹೊಡೆತ ಬಿದ್ದಿದೆ.  


ಕೇಂದ್ರ ಸರ್ಕಾರವು 2023-24ನೇ ಸಾಲಿನ ಹಂಗಾಮಿಗೆ ಶೇಕಡ 9.5 ರಿಂದ 10.5 ಇಳುವರಿ ಇರುವ ಪ್ರತೀ ಟನ್ ಕಬ್ಬಿಗೆ ರೂ.3150/- ನಿಗಧಿಪಡಿಸಿದೆ. ಕಬ್ಬು ಬೆಳೆಯುವ ರೈತರಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಹೊರಗಡೆ ಸಾಗಾಣಿಕೆ ಮಾಡುವುದರಿಂದ ರೈತರಿಗೆ ಪ್ರತೀ ಟನ್ ಕಬ್ಬಿಗೆ ರೂ.800/-ಗಳಿಂದ ರೂ.1000/-ಗಳವರೆಗೆ ನಷ್ಟವಾಗುತ್ತಿದೆ. ಸ್ಥಳೀಯವಾಗಿ ಕಾರ್ಖಾನೆ ಇದ್ದು, ಪೂರೈಸಿದರೆ ರೈತರಿಗೆ ಆರ್ಥಿಕವಾಗಿ ಅನುಕೂಲವಾಗುತ್ತದೆ. ತಾಲೂಕಿನಲ್ಲಿ ಒಂದೆರಡು ಎಕರೆ ಜಮೀನು ಇರುವ ಸಣ್ಣ ರೈತರೆ ಹೆಚ್ಚಾಗಿರುವುದರಿಂದ ಅವರ ಮನೆಯವರೆ ಕಬ್ಬು ಕಟಾವಣೆ ಮಾಡಿ ಸ್ವಯಂ ಸಾಗಾಣಿಕೆ ಮಾಡುವುದರಿಂದ ಟನ್ ಕಬ್ಬಿಗೆ ಈಗಿನ ಧರದಲ್ಲಿ ರೂ.3000/- ಉಳಿಸಲು ಅವಕಾಶವಿದೆ. ಇಲ್ಲಿಯೇ ಕಾರ್ಖಾನೆ ಸ್ಥಾಪನೆಯಾದರೆ ಸಾವಿರಾರು ಜನರಿಗೆ ಉದ್ಯೋಗ ಅವಕಾಶಗಳು ದೊರೆಯುವುದರ ಜೊತೆಗೆ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತದೆ. ಕನಿಷ್ಠ 6-8 ತಿಂಗಳು ಕೃಷಿ ಚಟುವಟಿಕೆಗಳು ನಿರಂತರವಾಗಿ ಸಾಗುತ್ತವೆ. ನೂರಾರು ಕೋಟಿ ರೂಪಾಯಿ ಸ್ಥಳೀಯ ಮಾರುಕಟ್ಟೆಯಲ್ಲಿ ಚಲಾವಣೆಯಾಗುವುದರಿಂದ ಎಲ್ಲಾ ವರ್ಗಗಳ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಇಲ್ಲಿಯೇ ಕಾರ್ಖಾನೆಯಾದರೆ ಕಬ್ಬಿನ ತೂಕದಲ್ಲಿ ಮೋಸವಾಗದಂತೆ ತಡೆಯಬಹುದು. ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣ ಹೆಚ್ಚಾದಷ್ಟು ರೈತರಿಗೆ ಕೇಂದ್ರಸರ್ಕಾರದ ನಿಗಧಿತ ಎಂ.ಆರ್‌.ಪಿ ಧರಕ್ಕಿಂತ ಹೆಚ್ಚುಧರ ದೊರೆಯುತ್ತದೆ. ಸ್ಥಳೀಯವಾಗಿ ಕಾರ್ಖಾನೆ ಇದ್ದಾಗ ಮಾತ್ರ ಕಬ್ಬಿನ ನೈಜ ರಿಕವರಿ ದೊರೆಯುತ್ತದೆ. ಅಲ್ಲದೆ ಕಬ್ಬಿನ ತ್ಯಾಜ್ಯದಿಂದ ಉತ್ಪಾದನೆಯಾಗುವ ಫಲವತ್ತಾದ ಕಾಕುಗೊಬ್ಬರ ಸ್ಥಳೀಯ ರೈತರಿಗೆ ಕಡಿಮೆ ಧರದಲ್ಲಿ ದೊರೆಯುತ್ತದೆ. ಹೊಸದಾಗಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗದಿದ್ದರೆ ರೈತರ ಪರಿಸ್ಥಿತಿ ಮತ್ತಷ್ಠು ಶೋಚನಿಯವಾಗಬಹುದು. ಆದುದರಿಂದ ಮಾಗಾಣಿ ಪ್ರದೇಶದ ಸಮೀಪದಲ್ಲೇ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಚಾಲನೆ ನೀಡಬೇಕೆಂದು ಆಗ್ರಹಪಡಿಸಿದರು.