ಒಳಚರಂಡಿ ಕಾಮಗಾರಿಯ ಗುಣಮಟ್ಟ ಪರೀಕ್ಷಿಸುವಂತೆ ಕರವೇ ಆಗ್ರಹ

ಲೋಕದರ್ಶನ ವರದಿ

ಬ್ಯಾಡಗಿ02: ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ (ಯುಜಿಡಿ) ಕಾಮಗಾರಿ ಕಳಪೆಯಾಗಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕೆಲಸವನ್ನು ಸ್ಥಗಿತಗೊಳಿಸಿ ಕಾಮಗಾರಿಯ ಗುಣಮಟ್ಟ ಪರೀಕ್ಷಿಸುವಂತೆ ಕನರ್ಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಅಧ್ಯಕ್ಷ ಚಂದ್ರು ಛತ್ರದ ಆಗ್ರಹಿಸಿದ್ದಾರೆ.

  ಬ್ಯಾಡಗಿ ಸುಧಾರಣಾ ಸಮಿತಿ ಕಾರ್ಯಾಲಯದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಅಳವಡಿಸುತ್ತಿರುವ ವಿಷಯ ಸ್ವಾಗತಾರ್ಹವಾಗಿದ್ದರೂ ಸಹ ಅಲ್ಲಿ ನಡೆಯುತ್ತಿರುವ ಕಾಮಗಾರಿಗಳು ಮಾತ್ರ ಸಂಶಯಸ್ಪದವಾಗಿ ಕಾಣುತ್ತಿವೆ, ಕಾಮಗಾರಿ ಕಳಪೆಯಾದ ಕಾರಣಕ್ಕೆ ಕಳೆದ ಕೆಲ ದಿನಗಳ ಹಿಂದೆ ವ್ಯಕ್ತಿಯೋರ್ವ ಅಪಘಾತಕ್ಕೀಡಾಗಿದ ನಿದರ್ಶನವಿದೆ, ಈ ಕುರಿತು ಸಂಬಂಧಿಸಿದ ಯುಜಿಡಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೇ ಅನ್ನುತ್ತಿಲ್ಲ.

   ಇದರಿಂದ ಸಿಬ್ಬಂದಿಗಳು ಗುತ್ತಿಗೆದಾರನ ಅಣತಿಯಂತೆ ನಡೆದುಕೊಳ್ಳುತ್ತಿರುವ ಅನುಮಾನಗಳು ವ್ಯಕ್ತವಾಗಿದ್ದು ಕೂಡಲೇ ಸಮಗ್ರ ಕಾಮಗಾರಿಯನ್ನು ಹಿರಿಯ ಅಧಿಕಾರಿಗಳು ಗುಣಮಟ್ಟ ಪರೀಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದರು.

     'ಶೂ' ಭಾಗ್ಯದಲ್ಲಿ ಕಮೀಶನ್ ಭಾಗ್ಯ: ಬ್ಯಾಡಗಿ ಸುಧಾರಣಾ ಸಮಿತಿ ಉಪಾಧ್ಯಕ್ಷ ಶಂಭುಲಿಂಗಪ್ಪ ಎಲಿ ಮಾತನಾಡಿ, ಶಿಕ್ಷಣ ಇಲಾಖೆಯಡಿ ಶಾಲಾ ಮಕ್ಕಳಿಗೆ ನೀಡುತ್ತಿರುವ 'ಶೂ'ಗಳ ವಿತರಣೆಯಲ್ಲಿಯೂ ಬಹಳಷ್ಟು ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿದರು. 

  ಇದೀಗ ವಿತರಿಸಿರುವ 'ಶೂ' ಕಳಪೆ ಗುಣಮಟ್ಟದ್ದಾಗಿದ್ದು ವಿತರಣಾ ಗುತ್ತಿಗೆ ಪಡೆಯಲು ಎಲ್ಲ ಶಾಲೆಗಳಲ್ಲಿ ಶಿಕ್ಷಕ ವರ್ಗಕ್ಕೆ ಸಾವಿರಾರು ರೂ.ಕಮೀಶನ್ ನೀಡಲಾಗುತ್ತಿದೆ, ಇದರಿಂದ ಮಕ್ಕಳಿಗೆ ಅನ್ಯಾಯವಾಗುತ್ತಿದ್ದು ಸಕರ್ಾರದ ಜನಪ್ರಿಯನ ಕಾರ್ಯಕ್ರಮವೊಂದು ಮದ್ಯವತರ್ಿಗಳ ಹಾವಳಿಯಿಂದ ಹಾಳಾಗುತ್ತಿದೆ ಎಂದ ಅವರು, ಕೂಡಲೇ ಶಿಕ್ಷಣ ಇಲಾಖೆಯ ಆಯುಕ್ತರು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.

         ಮಾತಿಗೆ ತಪ್ಪುತ್ತಿದ್ದಾರೆ ಶಾಸಕರು: ಅಂಗವಿಕಲರ ಸಂಘದ ಅಧ್ಯಕ್ಷ ಪಾಂಡು ಸುತಾರ ಮಾತನಾಡಿ, ಶೂ ವಿತರಣೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟುವ ಉದ್ದೇಶದಿಂದ ಮೂರು ಬಾರಿ ಮನವಿ ಸಲ್ಲಿಸಿದ್ದೇವೆ.

 ಇದೇ ಸಂದರ್ಭದಲ್ಲಿ ಎಲ್ಲ ಶಿಕ್ಷಕರನ್ನು ಕರೆಸಿ ತಮ್ಮೆದುರಿಗೆ ತನಿಖೆ ನಡೆಸುವುದಾಗಿ ಶಾಸಕರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಗಿತ್ತು.

   ಆದರೆ ಅಲ್ಲಿಂದ ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿ ಅಥವಾ ಗುತ್ತಿಗೆದಾರರನ್ನು ಕರೆಸಿರುವುದಿಲ್ಲ ಎಂದು ಆರೋಪಿಸಿದ ಅವರು, ಶಾಸಕರು ಮೌನಕ್ಕೆ ಶರಣಾದರೇ ನಾವು ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

  ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮಹೇಶ ಉಜನಿ, ಸಿದ್ಧಲಿಂಗಪ್ಪ ಕುರವತ್ತಿ, ಮಂಜುನಾಥ ಜಾಧವ, ಗಣೇಶ ಕುದರಿಹಾಳ, ಮಹಾಂತಯ್ಯ ಮಳಲೀಮಠ, ರಾಜು ಬೆಳಕೇರಿ, ನಜುರುಲ್ಲಾ ನದಾಫ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.