ಬೆಳೆಗೆ ಬೆಂಬಲ ಬೆಲೆ ನೀಡಲು ಆಗ್ರಹ
ಹೂವಿನ ಹಡಗಲಿ 25: ರೈತರು ಬೆಳೆದ ಬೆಳೆಯನ್ನು ಕೃಷಿ ಉತ್ಪನ್ನಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಬೇಕು. ರೈತರು ಬೆಳೆದಬೆಳೆಗೆ ಸರಿಯಾದ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸಿಕೊಳ್ಳಬೇಕು ಎಂದು ಆಗ್ರಹಿಸಿ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ತಿಮ್ಮಪ್ಪನಾಯಕ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸಮನಿ ಸಿದ್ದಪ್ಪ ಗುಜನೂರು ಮನವಿ ಸಲ್ಲಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಆಡಳಿತ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರೈತರು ಬೆಳೆದ ಶೇಂಗಾ ಬೆಳೆಗೆ ಸರ್ಕಾರದ ನಿಯಮಾವಳಿ ಅನುಸಾರವಾಗಿ ಟೆಂಡರ್ ಪ್ರಕ್ರಿಯೆ ನಡೆಸುವ ಕುರಿತು ಕೃಷಿ ಉತ್ಪನ್ನ ಮಾರುಕಟ್ಟೆ ಅಡಳಿತ ಕಚೇರಿಯ ಕಾರ್ಯದರ್ಶಿ ತಿಮ್ಮಪ್ಪನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.ರಾಜ್ಯ ರೈತಸಂಘದ ಪ್ರಧಾನಕಾರ್ಯದರ್ಶಿ ಎಂ.ಶಿವರಾಜ ಹೊಳಗುಂದಿ ಮಾತನಾಡಿ, ಬಿಳಿ ಚೀಟಿ ವ್ಯವಹಾರದ ಬಗ್ಗೆ ಅಗತ್ಯವಾದ ಕ್ರಮ ಕೈಗೊಳ್ಳಿ ರೈತರಿಗೆ ಅನ್ಯಾಯವಾಗದಂತೆ ನಿಮ್ಮ ಉತ್ಪನ್ನ ಮಾರುಕಟ್ಟೆಯಲ್ಲಿ ಪೂರಕವಾದ ಬೆಂಬಲ ಬೆಲೆಯನ್ನು ನಿಗದಿತ ಮಾಡಿ ಮಾರುಕಟ್ಟೆಯಲ್ಲಿಯೇ ರೈತರು ಬೆಳೆದಬೆಳೆಯನ್ನು ಖರೀದಿಸಿಕೊಳ್ಳಿ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ವಿ.ಬಿ.ಚನ್ನಬಸಪ್ಪ, ಮಜ್ಜುಸಾಬ್ ಮಾತನಾಡಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಅಧಿಕಾರಿ ತಿಮ್ಮಪ್ಪನಾಯಕ ಮಾತನಾಡಿ, ವರ್ತಕರು ಬಿಳಿ ಚೀಟಿ ವ್ಯವಹಾರ ಮುಂದುವರಿಸಿದರೆ ಅವರ ಲೈಸೆನ್ಸ್ ರದ್ದು ಮಾಡುತ್ತೇವೆ. ಜಿಎಸ್ಟಿ ರಿಪೋರ್ಟ್ ಮಾಡುತ್ತೇವೆ. ಹಾಗಾದರೆ ಅವರ ಅಕೌಂಟ್ ಬ್ಲಾಕ್ ಆಗುತ್ತದೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ರೈತರಿಗೆ ತಿಳಿಸಿದರು.ಇದೇ ವೇಳೆಯಲ್ಲಿ ಕಂದಾಯ ಇಲಾಖೆ ಅಧಿಕಾರಿ ಸಲೀಂ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಬಿ.ಫಕೀರ್ಪ, ಪ್ರಧಾನ ಕಾರ್ಯದರ್ಶಿ ಎಂ.ಶಿವರಾಜ ಹೊಳಗುಂದಿ, ಉಪಾಧ್ಯಕ್ಷರಾದ ವಿ.ಬಿ.ಚನ್ನಬಸಪ್ಪ, ವಿಠಲ್ ನಾಯ್ಕ, ಸದಸ್ಯ ಮಜ್ಜುಸಾಬ್, ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಸುಭಾನ್ ಸಾಬ್ ಉಗಲೂರು ಮತ್ತು ರಾಜ್ಯ ರೈತ ಸಂಘದ ಸರ್ವ ಸದಸ್ಯರಿದ್ದರು.