ರಾಣೇಬೆನ್ನೂರು13: ಸ್ಥಳೀಯ ದೇವರಗುಡ್ಡ ಮಾರ್ಗದ ರಾಜ್ಯ ಹೆದ್ದಾರಿಗೆ ನಿಮರ್ಾಣವಾಗುತ್ತಿರುವ ರೈಲ್ವೇ ಇಲಾಖೆಯ ಒಳಸೇತುವೆ ನಿಮರ್ಾಣ ಕಾರ್ಯ ಅವೈಜ್ಞಾನಿಕವಾಗಿದ್ದು, ಅದನ್ನು ಸ್ಥಗಿತಗೊಳಿಸಿ ಮೇಲ್ಸೇತುವೆ ನಿಮರ್ಾಣ ಮಾಡಬೇಕೆಂದು ಆಗ್ರಹಿಸಿ ಸೋಮವಾರ ಕೈಗೊಂಡಿದ್ದ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ರೈಲ್ವೈ ಇಂಜನೀಯರ ವೇಣುಗೋಪಾಲ ನೀಡಿದ ಭರವಸೆಯ ಮೇರೆಗೆ ಹೋರಾಟ ಸಮಿತಿಯವರು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದರು.
ಸ್ಥಳೀಯ ವಿರಕ್ತಮಠದ ಶ್ರೀ ಗುರುಬಸವ ಸ್ವಾಮಿಗಳು, ಮಂಜುನಾಥ ಗೌಡಶಿವಣ್ಣನವರ, ಜಗದೀಶ ಕೆರೂಡಿ, ಬಸವರಾಜ ಪಾಟೀಲ, ಉಮೇಶ ಹೊನ್ನಾಳಿ, ಮಲ್ಲಣ್ಣ ಅಂಗಡಿ, ರವೀಂದ್ರಗೌಡಪಾಟೀಲ, ಜಿ.ಜಿ.ಹೊಟ್ಟಿಗೌಡ್ರ, ಪ್ರಭುಸ್ವಾಮಿ ಕರ್ಜಗಿಮಠ, ಪ್ರಕಾಶ ಪೂಜಾರ, ಹನುಮಂತಪ್ಪ ಕಬ್ಬಾರ, ಚಂದ್ರಣ್ಣ ಹೊನ್ನಾಳಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.