ಲೋಕದರ್ಶನ ವರದಿ
ಬೆಳಗಾವಿ 30: ಇಲ್ಲಿಯ ಸುವರ್ಣ ಸೌಧವನ್ನು ಶಕ್ತಿ ಕೇಂದ್ರವನ್ನಾಗಿ ರೂಪಿಸಬೇಕು ಎಂಬ ಬೇಡಿಕೆ ಸೇರಿದಂತೆ ಉತ್ತರ ಕನರ್ಾಟಕ ಭಾಗದ ಜನತೆಯ ಇತರ ಬೇಡಿಕೆಗಳಿಗೆ ಸರಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳು ಸ್ಪಂದಿಸದಿದ್ದರೆ ಹೋರಾಟದ ದಿಸೆಯನ್ನೆ ಬದಲಾಯತಿಸಬೇಕಾಗುತ್ತದೆ ಎಂದು ಉತ್ತರ ಕನರ್ಾಟಕ ವಿಕಾಸ ವೇದಿಕೆಯ ಮುಖಂಡರುಗಳು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮುಖಂಡ ಅಶೋಕ ಪೂಜಾರಿ ಅವರು, ಸುವರ್ಣ ಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸಿದಾಗ ಬೇಡಿಕೆಗಳಿಗೆ ಸ್ಪಂಧಿಸುವ ಮಾತನಾಡುವ ರಾಜ್ಯ ಸರಕಾರ ಮತ್ತು ವಿರೋಧ ಪಕ್ಷಗಳು, ಹೋರಾಟದ ನಂತರದ ದಿನಗಳಲ್ಲಿ ಯಾವುದೇ ಪೂರಕವಾದ ಕ್ರಮ ಜರುಗಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಜುಲೈ ತಿಂಗಳಲ್ಲಿ ಸುವರ್ಣ ಸೌಧದ ಮುಂದೆ ನೂರಾರು ಮಠಾಧೀಶರ ನೇತೃತ್ವದಲ್ಲಿ ಪಕ್ಞಾತೀತ ಧರಣಿ ನಡೆಸಿದಾಗ ವಿರೋಧ ಪಕ್ಷದ ನಾಯಕರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಪೂರಕ ಸ್ಪಂಧನೆ ನೀಡಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲ ಪ್ರಮುಖ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಲಾಗುವದು. ಕಚೇರಿಗಳನ್ನು ಗುರುತಿಸಲು ಉನ್ನತ ಮಟ್ಟದ ಸಮಿತಿ ರಚಿಸುವದಾಗಿ ಭರವಸೆ ನೀಡಿದ್ದರು. ಈಗ ಮೂರು ತಿಂಗಳಾದರೂ ಯಾವುದೆ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.
ಸುವರ್ಣ ಸೌಧದಲ್ಲಿ ನಡೆಯಲಿರುವ ಅಧಿವೇಶನಕ್ಕೂ ಮುನ್ನ ರಾಜ್ಯ ಸರಕಾರ ನಮ್ಮ ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ಜರುಗಿಸಿದಿದ್ದರೇ, ಅಧಿವೇಶನದ ವೇಳೆ ಹೋರಾಟದ ರೂಪುರೇಷಗಳ ಬಗ್ಗೆ ಚಚರ್ಿಸಲು ಡಿಸೆಂಬರ 5 ರೊಳಗಾಗಿ ಮಠಾಧೀಶರ ನೇತೃತ್ವದಲ್ಲಿ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುವದು ಎಂದರು.
ರಾಜ್ಯ ಸರಕಾರ ಪೂರಕ ಕ್ರಮ ಜರುಗಿಸದಿದ್ದರೆ ಮತ್ತು ಈ ಭಾಗದ ಜನಪ್ರತಿನಿಧಿಗಳು ಸದನದಲ್ಲಿ ಈ ಭಾಗದ ಜನತೆಯ ಬೇಡಿಕೆಗಳ ಬಗ್ಗೆ ಗಮನ ಸೆಳೆಯದಿದ್ದರೇ, ಹೋರಾಟಕ್ಕೆ ರಾಜಕೀಯ ಹೋರಾಟವನ್ನಾಗಿ ಪರಿವತರ್ಿಸುವ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಆರ್.ಎಸ್.ದಗರ್ೆ, ಪ್ರವೀಣ ಪಾಟೀಲ, ಎಂ.ಟಿ.ಪಾಟೀಲ ಮುಂತಾದವರು ಉಪಸ್ಥಿತರಿದ್ದರು.