ಲೋಕದರ್ಶನ ವರದಿ
ಕಂಪ್ಲಿ11: ತಾಲೂಕಿನ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಆಗ್ರಹಿಸಿ, ಕನರ್ಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಂಪ್ಲಿ ತಾಲೂಕು ಸಮಿತಿಯಿಂದ ಪ್ರಥಮ ತಾಲೂಕು ಸಮ್ಮೇಳನ ಭಾನುವಾರ ನಡೆಯಿತು.
ಕನರ್ಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಿಲ್ಪ ಅವರು ತಾಲೂಕು ಸಮ್ಮೇಳನದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕೇಂದ್ರ ಸಕರ್ಾರ 2002ರಲ್ಲಿ ಬಿಸಿಊಟ ಯೋಜನೆ ಜಾರಿಗೆ ತಂದಿದೆ. ಶಾಲಾ ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸುವ ಹಿತದೃಷ್ಠಿ ಬಿಸಿಊಟದ್ದಾಗಿದೆ. ಆದರೆ, ಈಗ ಕೇಂದ್ರದ ಮೋದಿಯವರು ಬಿಸಿಊಟದ ಬದಲು ಮಕ್ಕಳಿಗೆ ಇಸ್ಕಾನ್ ಊಟ ನೀಡುವ ಮೂಲಕ ಮಕ್ಕಳ ಅಪೌಷ್ಠಿಕತೆಗೆ ಮಾರ್ಗವಾಗಿದೆ. ಕೇಂದ್ರ ಸಕರ್ಾರ ಇಸ್ಕಾನ್ ಎಂಬ ಖಾಸಗಿನತಕ್ಕೆ ನೀಡಲು ಮುಂದಾಗಿದೆ.
ಬಂಡವಾಳಶಾಹಿ ಸಕರ್ಾರ ನಮ್ಮನ್ನು ಆಳುವಂತಾಗಿದೆ. ಕೇಂದ್ರೀಕೃತ ಅಡುಗೆ ಮನೆಯೊಂದಿಗೆ ಬಿಸಿಊಟದ ನೌಕರರನ್ನು ಕಡೆಗಣಿಸಲು ದಿಟ್ಟ ಹೆಜ್ಜೆ ಇಟ್ಟಿರುವುದು ಖಂಡನೀಯ. ಇದರಿಂದ ಬಿಸಿಊಟ ಅಮ್ಮಂದಿರ ಕೆಲಸಕ್ಕೆ ಕುತ್ತು ಬಿಳುವಂತಾಗಿದೆ. ಹೀಗಾಗಿ ಕೇಂದ್ರ ಸಕರ್ಾರ ನಡೆ ವಿರುದ್ಧ ಹೋರಾಟ ಕೈಗೊಳ್ಳಬೇಕಾಗಿದೆ. ಕೇಂದ್ರ ಸಕರ್ಾರ ಆರೋಗ್ಯ, ಶಿಕ್ಷಣ ಮತ್ತು ಆಹಾರಕ್ಕೆ ನೀಡುವ ಅನುದಾನದಲ್ಲಿ ಶೇ.40 ರಷ್ಟು ಕಡಿತಗೊಳಿಸುತ್ತಿದೆ. ಇದರರ್ಥ ಜನತ ಮತ ಪಡೆದು, ಶ್ರೀಮಂತ ಬಂಡವಾಳಗಾರರ ಪರ ಆಡಳಿತ ನಡೆಸುತ್ತಿದೆ. ಸಂಘಟನೆಯ ಒಗ್ಗಟ್ಟಿನೊಂದಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ 1.18 ಲಕ್ಷ ಜನ ಬಿಸಿಊಟ ನೌಕರರಿದ್ದಾರೆ. ಅದಕ್ಕಾಗಿ ಕೇಂದ್ರೀಕೃತ ಅಡುಗೆ ಮನೆ ತೆರೆಯುವ ಆದೇಶ ಕೈಬಿಡಬೇಕು. ಬಿಸಿಊಟ ಯೋಜನೆಯನ್ನು ಖಾಯಂಗೊಳಿಸಿ. ಕೇಂದ್ರ ಸಕರ್ಾರ ಬಿಸಿಊಟ ನೌಕರರಿಗೆ 18 ಸಾವಿರ ಕನಿಷ್ಟ ಕೂಲಿ ಭರಿಸಬೇಕು. ಹಾಜರಾತಿ ಆಧಾರದಲ್ಲಿ ಅಡುಗೆಯನ್ನು ಕೈ ಬಿಡಬೇಕು. ನೌಕರರನ್ನು 4ನೇ ಪ್ರಥಮ ದಜರ್ೆಯ ನೌಕರರಾಗಿ ಪರಿಗಣಿಸಬೇಕು. 45ನೇ ಐಎಲ್ಸಿ ಶಿಫಾರಸ್ಸು ಜಾರಿಗೆ ತರಬೇಕು. ನಿಗದಿತ ಸಮಯದಲ್ಲಿ ನೌಕರರಿಗೆ ವೇತನ ನೀಡಬೇಕೆಂದು ಒತ್ತಾಯಿಸಿದರು. ಹಾಲಿ ಅಧ್ಯಕ್ಷೆ ವಿಜಯಲಕ್ಷ್ಮಿ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಷಾಮಿಯಾಚಂದ್ ಪೌಢಶಾಲೆ ಪ್ರಭಾರಿ ಉಪ ಪ್ರಾಚಾರ್ಯ ಎಸ್.ಜಿ.ಚಿತ್ರಗಾರ, ತಾಲೂಕು ಅಧ್ಯಕ್ಷ ಕೆ.ಮುನಿಸ್ವಾಮಿ, ಪ್ರಧಾನ ಕಾರ್ಯದಶರ್ಿ ಬಂಡಿ ಬಸವರಾಜ್, ಮಾನ್ವಿ ಮಹೇಶ್, ಹೊನ್ನೂರಸಾಬ್, ಭಕ್ಷಿಸಾಬ್, ನಾಗರಾಜ್, ದುರುಗಮ್ಮ, ಉಮಾದೇವಿ ಸೇರಿ ಬಿಸಿಊಟ ನೌಕರರ ಸಂಘದ ಮಹಿಳೆಯರು ಭಾಗವಹಿಸಿದ್ದರು.