ರೈಲ್ವೇ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹ

ಬ್ಯಾಡಗಿ20: ಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದ್ದು ಕೂಡಲೇ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಭ್ರಷ್ಟಾಚಾರ ವಿರೋಧಿ ಜಿಲ್ಲಾ ಸಂಚಾಲಕ, ಮಾಜಿ ಸೈನಿಕ ಎಂ.ಡಿ.ಚಿಕ್ಕಣ್ಣನವರ ಆಗ್ರಹಿಸಿದರು. 

 ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಖ್ಯಾತಿ ಮೆಣಸಿನಕಾಯಿ ಮಾರುಕಟ್ಟೆಗೆ ಸದರಿ ನಿಲ್ದಾಣವು ರೈತರು ಮತ್ತು ವ್ಯಾಪಾರಸ್ಥರನ್ನು ಸಂಪಕರ್ಿಸುತ್ತದೆ, ಆದರೆ ಇಲ್ಲಿ ನೋಡಿದರೇ ರೈಲ್ವೇ ನಿಲ್ದಾಣ ಅಕ್ಷರಶಃ ಹಾಳುಕೊಂಪೆಯಂತಾಗಿದ್ದು ಕುಡಿಯಲು ನೀರು ಸೇರಿದಂತೆ ಕುಳಿತುಕೊಳ್ಳಲು ಸೂಕ್ತ ಆಸನ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ ಎಂದರು.

   ನ್ಯಾಯವಾದಿ ಸುರೇಶ ಛಲವಾದಿ ಮಾತನಾಡಿ, ಮಳೆಗಾಲ ಪ್ರಾರಂಭವಾದರೇ ನಿಂತುಕೊಳ್ಳಲು ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆಯಲ್ಲಿ ಅದರಲ್ಲೂ ಎರಡನೇ ಪ್ಲಾಟಫಾರಂ ಮೇಲ್ಚಾವಣಿ ಇಲ್ಲದೇ ಬಿಸಿಲು ಮತ್ತು ಮಳೆಗಾಲದಲ್ಲಿ ಪ್ರಯಾಣಿಕರಿಗೆ ಕಷ್ಟ ಅನುಭವಿಸುತ್ತಿದ್ದಾರೆ. ಪಾದಾಚಾರಿಗಳಿಗೆ ಮೇಲುಸೇತುವೆ (ಫ್ಲೈಓವರ್) ಇಲ್ಲದೇ ಎರಡನೇ ಪ್ಲಾಟ್ಫಾರಂ ಹೋಗಲು ಸಾಧ್ಯವಾಗುತ್ತಿಲ್ಲ ಅದರಲ್ಲೂ ವಯೋವೃದ್ಧರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಗೆ ತುಂಬಾ ತೊಂದರೆ ಆಗುತ್ತಿದೆ ಎಂದರು.

  ಫರೀದಾಬಾನು ನದೀಮುಲ್ಲಾ ಮಾತನಾಡಿ, ದಿನಕ್ಕೆ ಹತ್ತಾರು ರೈಲುಗಳು ಬ್ಯಾಡಗಿ ನಿಲ್ದಾಣದ ಮೂಲಕ ಸಂಚರಿಸುತ್ತಿವೆ. ಆದರೆ ಪ್ರಯಾಣಿಕರಿಗೆ ಸೂಕ್ತವಾದ ಶೌಚಾಲಯವಿಲ್ಲ ಅದರಲ್ಲೂ ಮಹಿಳಾ ಪ್ರಯಾಣಿಕರ ಸೂಕ್ತ ಶೌಚಾಲಯ ಸೌಲಭ್ಯವಿಲ್ಲದೇ ಮಹಿಳೆಯರು ತಮ್ಮ ಗೌರವಕ್ಕೆ ಧಕ್ಕೆ ಯಾದರೂ ಸಹ ಲೆಕ್ಕಿಸದೇ ಬಯಲು ಶೌಚಾಲಯವನ್ನೇ ನಂಬುವಂತಾಗಿದೆ ಇಲ್ಲಿರುವ ಒಂದೇ ಒಂದು ಶೌಚಾಲಯದ ಬಾಗಿಲು ಹಾಕಿ ಅದೆಷ್ಟೋ ವರ್ಷಗಳೆ ಕಳೆದಿವೆ ಯಾವ ಕಾರಣಕ್ಕಾಗಿ ಇಲ್ಲಿಯವರೆಗೂ ಸಾರ್ವಜನಿಕರ ಬಳ ಕೆಗೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. 

  ಪಾಂಡುರಂಗ ಸುತಾರ ಮಾತನಾಡಿ, ಪಟ್ಟಣದಿಂದ ಸುಮಾರು 3 ಕಿಮೀ ದೂರದಲ್ಲಿರುವ ರೈಲು ನಿಲ್ದಾಣಕ್ಕೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ, ಇದರಿಂದಾಗಿ ಪ್ರಯಾಣಿಕರು ಆಟೋಗಳನ್ನೆ ಅವಲಂಬಿಸುವಂತಾಗಿದೆ. ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಇಲ್ಲಿಯವರೆಗೂ ಮುಂದಾಗುತ್ತಿಲ್ಲ. ಅಲ್ಲದೇ ಸಾರ್ವಜನಿಕರ ಸೇವೆ ಮಾಡುತ್ತಿರುವ ಆಟೋ ಚಾಲಕರ ಮೇಲೆ ರೈಲ್ವೆ ಇಲಾಖೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಇದು ಖಂಡನೀಯ ಕೂಡಲೇ ಆಟೋಗಳನ್ನು ಮುಕ್ತವಾಗಿ ಓಡಾಡಲು ಅವಕಾಶ ನೀಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿನಯ ಕಂಬಳಿ, ಫೀರಾಂಬಿ ವಧರ್ಿ, ಮಹಾದೇವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.