ಲೋಕದರ್ಶನ ವರದಿ
ಮೂಡಲಗಿ 16: ತಾಲೂಕಿನ ಕುಲಗೋಡ ಗ್ರಾಮದ ಯುವಧುರೀಣ, ಉಧ್ಯಮಿ ನಾರಾಯಣ ರಾಮಪ್ಪ ಯಡಹಳ್ಳಿ ಇವರ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಗ್ರಾಮದ ನಾರಾಯಣ(ರಾಜು) ಯಡಹಳ್ಳಿ ಅಭಿಮಾನಿ ಬಳಗ ಇವರಿಂದ ಸ್ಥಳಿಯ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ 7 ಅಂಗನವಾಡಿ ಕೇಂದ್ರದ ಮಕ್ಕಳಿಗೆ ಇಂದು ಮುಂಜಾನೆ ಬಿಸ್ಕತು,ಬಾಳೆ ಹಣ್ಣು,ಹಾಲು ವಿತರಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತಮ್ಮಣ್ಣಾ ದೇವರ. ಲಕ್ಷಣ ಬಡಕಲ್ಲ. ಆರ್.ಆಯ್ ಬುದ್ನಿ. ಸೋಮಲಿಂಗ ಮಿಕಲಿ. ಸದಾಶಿವ ಬಡಕಲ. ಮಲ್ಲೇಶ ಮುರಕಟ್ನಾಳ ಶಾಲಾ ಶಿಕ್ಷಕರು, ಹಾಗೂ ಅಭಿಮಾನಿ ಬಳಗದ ಸದಸ್ಯರು ಇದ್ದರು.