ದಿನಸಿ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಲೋಕದರ್ಶನ ವರದಿ

ಸಿಂದಗಿ 15: ಪಟ್ಟಣದ ಡಾ ಅಂಬೇಡ್ಕರ ಭವನ ಬಿಕ್ಕು ನಿವಾಸದಲ್ಲಿ ಸಂಘರತ್ನ ವಿಶ್ವಮೈತ್ರಿ ಟ್ರಷ್ಟವತಿಯಿಂದ ದಾನಿಗಳಿಂದ ಸಂಗ್ರಹಿಸಿದ ಸುಮಾರು ರೂ 1ಲಕ್ಷ ಮೊತ್ತದಲ್ಲಿ ಎಲ್ಲಾ ಧರ್ಮದ 150 ಬಡಕುಟುಂಬಗಳಿಗೆ ಒಂದು ತಿಂಗಳದ ದಿನಸಿ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಭೌಧ ಧಮ್ಮದ ಸಂಘಪಾಲ ಬಂತೇಜಿ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಸಂತೋಷ ಬಜಂತ್ರಿ, ಪರಸುರಾಮ ಕೂಚಬಾಳ, ರಾಜೂ ಮಣೂರ, ಪಿಂಟು ಬಳ್ಳಾರಿ, ರಮೇಶ ಸೇರಿದಂತೆ ಹಲವರಿದ್ದರು.