ಡಿ. 15 ರಂದು ಮುಖ್ಯಮಂತ್ರಿ ಭೇಟಿಯಾಗಲು ನಿಯೋಗ ಭೇಟಿಗೆ ಅವಕಾಶ
Delegation to meet Chief Minister on December 15th
ಮಹಾಲಿಂಗಪುರ 06 : ನಗರದಲ್ಲಿ ಕಳೆದ 1336 ದಿನಗಳಿಂದ ನಡೆಯುತ್ತಿರುವ ತಾಲೂಕಾ ಬೇಡಿಕೆ ಹೋರಾಟಗಾರರು ಇದೆ 8 ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲ್ಲಿರುವ ಚಳಿಗಾಲದ ಅಧಿವೇಶನದಲ್ಲಿ ದಿ 15 ರಂದು ಮುಖ್ಯಮಂತ್ರಿ ಭೇಟಿಯಾಗಲು ನಿಯೋಗ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದು ಆದರ ಪ್ರಯುಕ್ತ ಹೋರಾಟಗಾರರ ನಿಯೋಗ ತೆರಳಲು ತಯಾರಿ ಮಾಡಿಕೊಂಡಿದ್ದಾರೆ.
ಇಂದು ನೀಲಕಂಟೇಶ್ವರ ದೇವಸ್ಥಾನದಲ್ಲಿ ನಡೆದ ಹೋರಾಟ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಸಂಗಪ್ಪ ಹಲಿ ನಮ್ಮ ಹೋರಾಟ ತಾಲೂಕಾಗುವವರೆಗೆ ಮುಂದುವರೆಯುತ್ತದೆ, ಯಾವುದೇ ಸಂದರ್ಭದಲ್ಲಿಯೂ ತಾಲೂಕು ಆಗುವ ವರೆಗೂ ನಮ್ಮ ಈ ಹೋರಾಟ ನಿರಂತರವಾಗಿದೆ ಎಂದು ಹೋರಾಟ ಸಮಿತಿಯ ತಿಳಿಸಿದರು.
ಇಂದಿನ ಸಭೆಯಲ್ಲಿ ಮುಖಂಡರಾದ ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಮುಖಂಡರಾದ ಧರೆಪ್ಪ ಸಾಂಗ್ಲಿಕರ, ಗಂಗಾಧರ ಮೇಟಿ, ಪರ್ಪ ಬ್ಯಾಕೋಡ, ಸಿದ್ದುಗೌಡ ಪಾಟೀಲ, ಶಿವನಗೌಡ ಪಾಟೀಲ,ಮಹಾದೇವ ಮಾರಾಪುರ, ವೀರೇಶ ಆಸಂಗಿ,ಹಣಮಂತ ಜಮಾದಾರ,ಮಹಾಲಿಂಗ ಅವರಾಧಿ, ಸಿದ್ದು ಶಿರೋಳ, ರಫೀಕ್ ಮಾಲಾದರ, ನಿಂಗಪ್ಪ ಬಾಳಿಕಾಯಿ, ದುಂಡಪ್ಪ ಇಟ್ನಾಳ ಮಹದೇವ್ ಹೊಸಕೋಟಿ, ಎಸ್ ಸತ್ತಿಗೇರಿ, ಎಂ ಪುರಾಣಿಕ,ಎಂ ಬಿ ಹುಲಿಕಟ್ಟಿ,ಸೇರಿ ಹಲವರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 