ಲೋಕದರ್ಶನವರದಿ
ರಾಣೇಬೆನ್ನೂರು 03: ಶೈಕ್ಷಣಿಕ ವರ್ಷ ಆರಂಭಗೊಂಡರೂ ಸಹ ಈವರೆಗೂ ವಿದ್ಯಾಥರ್ಿಗಳಿಗೆ ಬಸ್ ಪಾಸ್ ವ್ಯವಸ್ಥೆ ಕಲ್ಪಿಸದಿರುವುದನ್ನು ಖಂಡಿಸಿ ಮತ್ತು ತುತರ್ಾಗಿ ಬಸ್ ಪಾಸ್ ವಿತರಿಸಬೇಕೆಂದು ಆಗ್ರಹಿಸಿ ವಿದ್ಯಾಥರ್ಿಗಳು, ರೈತ ಮುಖಂಡರು ಪ್ರತಿಭಟಿಸಿ ಸ್ಥಳೀಯ ಕೆಎಸ್ಆರ್ಟಿಸಿ ವ್ಯವಸ್ಥಾಪಕರಿಗೆ ಮನವಿ ಅಪರ್ಿಸಿ ಆಗ್ರಹಿಸಿದರು.
ರೈತ ಸಂಘದ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ ಇದೀಗ ವಿದ್ಯಾಥರ್ಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ಬೇರೆಡೆ ಹಳೆ ಬಸ್ ಪಾಸ್ ಮೂಲಕವೇ ಅವಕಾಶ ನೀಡಿದ್ದು, ಇಲ್ಲಿಯೂ ಸಹ ವಿದ್ಯಾಥರ್ಿಗಳ ಹಿತದೃಷ್ಠಿಯಿಂದ ಅನುಕೂಲ ಮಾಡಬೇಕು, ಇದರಿಂದ ವಿದ್ಯಾಥರ್ಿಗಳ ಭವಿಷ್ಯ ಉತ್ತಮಗೊಳ್ಳುವುದು ಎಂದರು.
ರೈತರ ಮಕ್ಕಳೇ ಅಧಿಕವಾಗಿ ವಿದ್ಯಾರ್ಜನೆಗೆ ನಗರಕ್ಕೆ ಬರುತ್ತಿದ್ದು, ಅವರುಗಳಿಗೆ ತೊಂದರೆಯಾಗದಂತೆ ತುತರ್ಾಗಿ ಕ್ರಮ ಕೈಗೊಳ್ಳಬೇಕು ಎಂದರು. ರತ್ನಾಕರ ಕುಂದಾಪುರ, ಕೃಷ್ಣಮೂತರ್ಿ ಗುಂಗೇರ, ರಾಮನಗೌಡ ಪಾಟೀಲ, ಚಂದ್ರಪ್ಪ ಚಳಗೇರಿ, ಎಸ್ಡಿ ಹಿರೇಮಠ, ಪ್ರಕಾಶ ಕುಂದಾಪುರ, ಈರಪ್ಪ ದೊಡ್ಡಮನಿ, ರವಿ ಆರೇರ, ಸಿಸಿ ಸಣ್ಣಗೌಡ್ರ, ಪ್ರಕಾಶ್ ಕುಂದಾಪುರ, ವಿದ್ಯಾಥರ್ಿಗಳು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.