ಅರಣ್ಯ ನಾಶದ ಕಾರಣದಿಂದ ಹವಾಮಾನದ ವೈಪರೀತ್ಯಗಳು ಉಂಟಾಗಿ ಕೃಷಿ ವಲಯದ ಮೇಲೆ ದುಷ್ಪರಿಣಾಮ ಬೀರುತ್ತವೆ

Deforestation causes extreme weather events that adversely affect the agricultural sector

ಅರಣ್ಯ ನಾಶದ ಕಾರಣದಿಂದ  ಹವಾಮಾನದ  ವೈಪರೀತ್ಯಗಳು ಉಂಟಾಗಿ ಕೃಷಿ  ವಲಯದ ಮೇಲೆ  ದುಷ್ಪರಿಣಾಮ  ಬೀರುತ್ತವೆ 

ರಾಣಿಬೆನ್ನೂರ 26: ಅರಣ್ಯ  ಉಳಿಸಲು ಮತ್ತೊಮ್ಮೆ  70 ರ   ದಶಕದ  ಚಿಪ್ಕೋ  ಚಳುವಳಿ  ನಡೆಯಬೇಕು, ಅರಣ್ಯ ನಾಶದ ಕಾರಣದಿಂದ  ಹವಾಮಾನದ  ವೈಪರೀತ್ಯಗಳು ಉಂಟಾಗಿ ಕೃಷಿ  ವಲಯದ ಮೇಲೆ  ದುಷ್ಪರಿಣಾಮ  ಬೀರುತ್ತವೆ ಎಂದು ಪ್ರಾಧ್ಯಾಪಕ ಪ್ರೊ. ಬಿ.ಯು ಮಾಳೇನಹಳ್ಳಿ ಹೇಳಿದರು.  

  ಇಲ್ಲಿನ ಹಲಗೇರಿ ರಸ್ತೆಯ ಬಿಎಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ  ಭೂಗೋಳಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಅರಣ್ಯ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು, ಇದಲ್ಲದೇ ಈ ವರ್ಷದ ಎನ್‌.ಎಸ್‌.ಎಸ್‌.  ವಾರ್ಷಿಕ ಶಿಬಿರ ನಡೆಯುವ ಗ್ರಾಮದಲ್ಲಿ 100 ಸಸಿ ನೆಡುವ ಮೂಲಕ  ಮರ ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. 

    ಪ್ರಾಚಾರ್ಯ ಡಾ. ಸುರೇಶ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಡಾ.  ಪುಷ್ಪಾಂಜಲಿ ಕಾಂಬಳೆ, ಚೈತ್ರಾ ಕಮ್ಮಾರ, ನಂದಾ ಹಲಗೇರಿ,   ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.