ಕೇಂದ್ರ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಗೆ ಕೊರೊನಾ ಸೋಂಕು

ನವದೆಹಲಿ, ಜೂನ್  ೪,  ಕೇಂದ್ರ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್  ಅವರಿಗೆ   ಕೊರೊನಾ ಸೋಂಕು  ಕಾಣಿಸಿಕೊಂಡಿದೆ.   ಅಜಯ್ ಕುಮಾರ್ ಅವರಿಗೆ ನಡೆಸಲಾದ ಪರೀಕ್ಷೆಯಲ್ಲಿ  ಕೊರೊನಾ ಪಾಸಿಟಿವ್  ಇರುವುದು   ಕಂಡು ಬಂದ ನಂತರ ಅವರನ್ನು ಹೋಂ ಕ್ವಾರಂಟೈನ್ ಒಳಪಡಿಸಲಾಗಿದೆ.ನಂತರ  ದೆಹಲಿಯಲ್ಲಿ  ಕೇಂದ್ರ ರಕ್ಷಣಾ ಸಚಿವಾಲಯದ  ಮುಖ್ಯ ಕಾರ್ಯಾಲಯವಾಗಿರುವ ರೈಸಿನಾ ಹಿಲ್ಸ್ ನ   ಸೌತ್  ಬ್ಲಾಕ್ ನಲ್ಲಿ  ಕಾರ್ಯನಿರ್ವಹಿಸುತ್ತಿದ್ದ  ೩೫ ಮಂದಿ  ಉದ್ಯೋಗಿಗಳನ್ನು  ಸಹ  ಮುನ್ನೆಚ್ಚರಿಕೆ  ಕ್ರಮವಾಗಿ ಹೋಂ ಕ್ವಾರಂಟೈನ್ ಒಳಪಡಿಸಲಾಗಿದೆ.

ರಕ್ಷಣಾ  ಸಚಿವಾಲಯ ಕಾರ್ಯದರ್ಶಿ ಗೆ  ಕೊರೊನಾ ಸೋಂಕು ಕಂಡುಬಂದ    ಹಿನ್ನಲೆಯಲ್ಲಿ  ರಕ್ಷಣಾ ಸಚಿವ ರಾಜನಾಥ್ ಸಿಂಗ್  ಅವರು   ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ  ತಮ್ಮ ಕಚೇರಿಗೆ ಹಾಜರಾಗಲಿಲ್ಲಸೌತ್ ಬ್ಲಾಕ್ ನಲ್ಲಿ ಕೇಂದ್ರ ರಕ್ಷಣಾ  ಸಚಿವರು, ರಕ್ಷಣಾ  ಕಾರ್ಯದರ್ಶಿ, ಸೇನಾ ಮುಖ್ಯಸ್ಥರು, ನೌಕಾಪಡೆ ಮುಖ್ಯಸ್ಥರ  ಕಚೇರಿಗಳು ಮೊದಲ ಅಂತಸ್ತಿನಲ್ಲಿವೆ.  ರಕ್ಷಣಾ ಕಾರ್ಯದರ್ಶಿ  ಕಚೇರಿಯನ್ನು ಸ್ಯಾನಿಟೈಜ್ ಗೊಳಿಸಿ ಉದ್ಯೋಗಿಗಳನ್ನು  ಹೋಂ ಕ್ವಾರಂಟೈನ  ಕಳುಹಿಸಲಾಗಿದೆ.