ಪರಿಸರ ರಕ್ಷಣೆಗೆ ಪ್ರತಿಜ್ಞೆ ಮಾಡಲು ವಿದ್ಯಾಥರ್ಿಗಳಿಗೆ ದೀಪಾ ಚೋಳನ್ ಕರೆ

ಧಾರವಾಡ.20: ಇರುವುದೊಂದು ಭೂಮಿ ಇಲ್ಲಿನ ಜಲ, ಮಣ್ಣು, ಗಾಳಿ ಸೇರಿದಂತೆ ಸಮೃದ್ಧ ಪರಿಸರವನ್ನು ಕಾಪಾಡಲು ಪ್ರತಿಯೊಬ್ಬ ವಿದ್ಯಾಥರ್ಿ ಆತ್ಮಸಾಕ್ಷಿಯಿಂದ ಪ್ರಮಾಣ ಮಾಡಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ, ಧಾರವಾಡ ಪ್ರಾದೇಶಿಕ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದರು.

ನಮ್ಮ ಬದುಕಿನ ಭಾಗವಾಗಿರುವ ಪರಿಸರ ಕಾಪಾಡಲು, ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಲು ಸ್ಪಧರ್ೆಗಳನ್ನು ಆಯೋಜಿಸುವ ಪರಿಸ್ಥಿತಿ ಬಂದಿದೆ. ನಮಗಿರುವುದು ಒಂದೇ ಒಂದು ಪರಿಸರ ವ್ಯವಸ್ಥೆ.

  ಅದನ್ನು ಹುಟ್ಟಿನಿಂದ ಸಾಯುವವರೆಗೆ ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತೇವೆ. ಆದರೆ ಯಾರು ಅದಕ್ಕೆ ಕೃತಜ್ಞರಾಗಿಲ್ಲ ಎಂದು ಹೇಳಿದರು. 

ಭೂಮಿಯಲ್ಲಿ ಸಿಗುವ ಮಣ್ಣು, ನೀರು, ಮರ ಮುಂತಾದ ಸಂಪನ್ಮೂಲಗಳನ್ನು ಸದ್ಬಳಕೆ ಮಾಡುವ ಬದಲು ದುರ್ಬಳಕೆ ಮಾಡಲಾಗುತ್ತಿದೆ. ಇದರಿಂದ ವಿವಿಧ ರೀತಿಯ ಜಲ, ವಾಯು, ಭೂ ಮಾಲಿನ್ಯಗಳನ್ನು ಉಂಟಾಗುತ್ತಿದೆ.

ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾನಿಯಾಗಿ ಜೀವಿಗಳ ಬದುಕಿಗೆ ತೊಂದರೆ ಆಗಿದೆ. ಶಬ್ದ ಮಾಲಿನ್ಯದಿಂದ ಜೀವಿಗಳ ಜೀವಕ್ಕೆ ಆಪತ್ತು ಬಂದಿದೆ. ಕಾಡುಪ್ರಾಣಿ, ಪಕ್ಷಿ, ಜೀವಿಗಳನ್ನು ಚಿತ್ರಪಟಗಳಲ್ಲಿ ನೋಡುವ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದರು.

ವಿದ್ಯಾಥರ್ಿಗಳು ಪರಿಸರ ಸಂರಕ್ಷಣೆ ಮಾಡುವುದರೊಂದಿಗೆ ತಮ್ಮ ಪಾಲಕರಿಗೂ ಪರಿಸರದ ಮಹತ್ವ ತಿಳಿಸಿ, ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಕಾರ್ಯಕ್ರಮದಲ್ಲಿ ನನಸಾದ ಕನಸು ಸ್ಮರಣ ಸಂಚಿಕೆಯನ್ನು ಉನ್ನತ ಶಿಕ್ಷಣ ಅಕಾಡೆಮಿ ನಿದರ್ೆಶಕ ಡಾ.ಎನ್.ಎಂ. ಶಿವಪ್ರಸಾದ ಅವರು ಬಿಡುಗಡೆ ಮಾಡಿ, ಮಾತನಾಡಿದರು.ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ಕುಮಾರ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಆರ್.ಎಸ್. ಮುಳ್ಳೂರ ವೇದಿಕೆಯಲ್ಲಿದ್ದರು. 

ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ಕೆ.ಎಚ್. ನಾಯಕ ಕಾರ್ಯಕ್ರಮ ನಿರೂಪಿಸಿದರು. ಉಪ ಪರಿಸರ ಅಧಿಕಾರಿ ಶೋಭಾ ಪೋಳ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ವಿದ್ಯಾಥರ್ಿಗಳಿಗೆ, ಶಿಕ್ಷಕರಿಗೆ ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರಿಗೆ, ಸಾರ್ವಜನಿಕರಿಗೆ ಮತದಾನ ಮಾಡುವ ಕುರಿತು ಮತದಾರ ಪ್ರತಿಜ್ಞೆ ಬೋಧಿಸಿದರು.