ವಿದ್ಯಾರ್ಥಿ ಬದುಕಿಗೆ ಶ್ರದ್ಧೆ-ಸ್ವಯಂ ಶಿಸ್ತಿನ ಗುಣ ಮುಖ್ಯ: ಸುಜಾತಾ ಪೂಜಾರಿ

Dedication and self-discipline are important qualities for student life: Sujatha Poojary

ವಿದ್ಯಾರ್ಥಿ ಬದುಕಿಗೆ ಶ್ರದ್ಧೆ-ಸ್ವಯಂ ಶಿಸ್ತಿನ ಗುಣ ಮುಖ್ಯ: ಸುಜಾತಾ ಪೂಜಾರಿ 

ಇಂಡಿ 11: ವಿದ್ಯಾರ್ಥಿಗಳು ಓದುವ, ಬರೆಯುವ, ಜ್ಞಾನ ಬೆಳೆಸಿಕೊಳ್ಳುವ ಜೊತೆಗೆ ಬದುಕಿಗೆ ಅಗತ್ಯವಾದ ಮಾನವೀಯ ಮೌಲ್ಯ ಮತ್ತು ಗುಣಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಇಂಡಿ ತಾಲೂಕ ಅಕ್ಷರ ದಾಸೋಹ ಅಧಿಕಾರಿ ಸುಜಾತಾ ಪೂಜಾರಿ ಹೇಳಿದರು. 

ಮಂಗಳವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್ ,ಕೆಜಿಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದುವ ಜೊತೆಗೆ ಗುರುಭಕ್ತಿ, ಶ್ರದ್ಧೆ, ಆಸಕ್ತಿ, ಸ್ವಯಂ ಶಿಸ್ತಿನ ಗುಣಗಳನ್ನು ಮೈಗೂಡಿಸಿಕೊಂಡು ಸಾಧನೆಯ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.  

ಸರ್ವಜ್ಞ ಕರಿಯರ್ ಅಕಾಡೆಮಿಯ ಸಂಸ್ಥಾಪಕ ನಾಗೇಶ ಹೆಗಡ್ಯಾಳ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ನಾಗರಿಕರಾಗಲು ಸತತ ಪರಿಶ್ರಮ ಅಗತ್ಯ. ವಿದ್ಯಾರ್ಥಿ ಜೀವನ ಬಂಗಾರದ ಜೀವನ ಅದನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಅಂಕ ಪಡೆದು ಪಾಲಕರಿಗೆ ಹಾಗೂ ಶಾಲೆಗೆ ಒಳ್ಳೆಯ ಕೀರ್ತಿ ತರಬೇಕೆಂದು ಹಾರೈಸಿದರು.  

    ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಗುರು-ಹಿರಿಯರನ್ನು ಗೌರವಿಸುವ, ಪರಸ್ಪರ ಪ್ರೀತಿ, ಸ್ನೇಹ, ಸಹಬಾಳ್ವೆಯಿಂದ ಜೀವನ ಸಾಗಿಸುವ, ಸಕಾರಾತ್ಮಕ ಚಿಂತನೆ, ಸಮಾಜ ಸೇವೆಯಂತಹ ಜೀವನದ ಮೌಲ್ಯಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

ಕೆಬಿಎಸ್ ಎಸ್‌ಡಿಎಂಸಿ ಅಧ್ಯಕ್ಷ ಮಾಳಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೆಜಿಎಸ್ ಎಸ್‌ಡಿಎಂಸಿ ಉಪಾಧ್ಯಕ್ಷ ಪರಶುರಾಮ ಹೊಸಮನಿ ವಿವಿಧ ವಿಭಾಗದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕ ಅನಿಲ ಪತಂಗಿ, ಶಿಕ್ಷಕಿ ಶ್ರದ್ಧಾ ಬಂಕಲಗಾ ವಾರ್ಷಿಕ ವರದಿ ವಾಚಿಸಿದರು. ಎಸ್‌ಡಿಎಂಸಿ ಸದಸ್ಯರಾದ ಕಾಶೀನಾಥ ದಳವಾಯಿ, ಪಡೆವ್ವ ನಡುವಿನಮನಿ, ಶಾಲುಬಾಯಿ ಸೈನಸಾಕಳೆ, ಆರತಿ ಗೊರನಾಳ, ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ ಹಾಗೂ ಶಿಕ್ಷಕರಾದ ಎಸ್ ಎಂ ಪಂಚಮುಖಿ, ಸಾವಿತ್ರಿ ಸಂಗಮದ, ಎಫ್ ಎ ಹೊರ್ತಿ, ಎಸ್ ಡಿ ಬಿರಾದಾರ, ಎಸ್ ಬಿ ಕುಲಕರ್ಣಿ, ಮಲ್ಲಮ್ಮ ಗಿರಣಿವಡ್ಡರ, ಸುಮಿತ್ರಾ ನಂದಗೊಂಡ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ, ಜೆ ಸಿ ಗುಣಕಿ, ಎಸ್ ಎನ್ ಡಂಗಿ, ಬಿ ಎಸ್ ಹೊಸೂರ, ಪ್ರಜ್ವಲ ಕುಲಕರ್ಣಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು. ಶಿಕ್ಷಕ ಎಸ್ ಆರ್ ಚಾಳೇಕರ ಕಾರ್ಯಕ್ರಮ ನಿರ್ವಹಿಸಿದರು.