ವೈಭದಿಂದ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ: ವಿನೋದ ಹತ್ತಳ್ಳಿ

Decision to celebrate Republic Day with grandeur: Vinod Hatalli

ವೈಭದಿಂದ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ: ವಿನೋದ ಹತ್ತಳ್ಳಿ 

ಬೀಳಗಿ 16: ತಾಲೂಕಾ ಆಡಳಿತ ವತಿಯಿಂದ ನಡೆಯುವ ಜ. 26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅತೀ ವೈಭದಿಂದ ಆಚರಿಸಲು ನಿರ್ಧರಿಸಲಾಗಿದೆ. ಅಯಾ ಇಲಾಖೆಯ ಅಧಿಕಾರಿಗಳಿಗೆ ನಿರ್ವಹಿಸಿದ ಕೆಲಸಗಳು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದು ತಹಶೀಲ್ದಾರ ವಿನೋದ ಹತ್ತಳ್ಳಿ ಹೇಳಿದರು. 

    ಇಲ್ಲಿಯ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಗುರುವಾರ ನಡೆದ ಜ.26 ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

  ಪಟ್ಟಣದ ಗ್ರಾಮ ಚಾವಡಿಯಲ್ಲಿ ಮುಂಜಾನೆ 7.45 ಗಂಟೆಗೆ ಧ್ವಜಾರೋಹಣವನ್ನು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಜೆ.ಟಿ.ಪಾಟೀಲ ನೆರವೇರಿಸುವರು.  

    ವಿಧಾನ ಪರಿಷತ್ ಶಾಸಕರಾದ ಎಚ್‌.ಆರ್‌.ನಿರಾಣಿ ಹಾಗೂ ಇನ್ನೂ ಅನೇಕ ಜನಪ್ರತಿ ನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಚವಡಿಯಲ್ಲಿ ಧ್ವಜಾರೋಹಣ ನೆರವೆರಿಸಿದ ನಂತರ ಬಾಬಾ ಜಗಜೀವನರಾಮ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ ಮತ್ತು ಮಹಾತ್ಮಾ ಗಾಂಧಿಜೀ ಮೂರ್ತಿಗಳಿಗೆ ಪುಷ್ಪ ನಮನ ಹಾಗೂ ನಂತರ ತಹಶೀಲ್ದಾರ ಕಾರ್ಯಾಲಯದಲ್ಲಿ 9ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಜೆ.ಟಿ.ಪಾಟೀಲ ಅಧ್ಯಕ್ಷತೆ ವಹಿಸುವರು. ತಾಲೂಕಾ ಆಡಳಿತವಯಿಂದ ತಹಶೀಲ್ದಾರ ವಿನೋದ ಹತ್ತಳ್ಳಿ ಧ್ವಜಾರೋಹಣ ಮಾಡುವರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ ವಿನೋದ ಹತ್ತಳ್ಳಿಯವರ ಅಧ್ಯಕ್ಷತೆಯಲ್ಲಿ ಮಡಿವಾಳ ಮಾಚಯ್ಯನವರ ಜಯಂತಿ ಆಚರಣೆ ಪೂರ್ವಭಾವಿ ಸಭೆ ನಡೆಯಿತು. 

  ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಹೆಸ್ಕಾಂ ಎಇಇ ಮಂಜುನಾಥ ಬೋಕಿ, ಸಿಡಿಪಿಓ ಬಿ ಜಿ. ಕವಟೇಕರ, ಬಿ.ಆರ್‌.ಸಿ ಶಿವಾಜಿ ಕಾಂಬಳೆ, ತಾಪಂ ಅಧಿಕಾರಿ ಸಿದ್ದು ನಕ್ಕರಗುಂದಿ, ಅಬಕಾರಿ ಅಧಿಕಾರಿ ಅನಿಲ ಹೂಗಾರ, ವಸಂತ ನಾಯಕ, ಪುಂಡಲೀಕ ಲಮಾಣಿ, ಸಹಾಯ ಕೃಷಿ ಕೃಷಿ ನಿರ್ದೇಶಕರು ಶ್ರೀನಿವಾಸ ಪಾಟೀಲ, ನೋಂದಣಿ ಅಧಿಕಾರಿ ಮುಂಡರಗಿ, ಕಂದಾಯ ಇಲಾಖೆ ಶಿರಸ್ತೆದಾರ ಮಂಜುನಾಥ ಧರೆಗೋಂಡ, ಟಿಎಪಿಸಿಎಂಎಸ್ ಮಲ್ಲಪ್ಪ ಕಾಳಗಿ, ಮಹಾದೇವ ಹಾದಿಮನಿ, ಬಸವರಾಜ ಹಳ್ಳದಮನಿ, ಬಸವರಾಜ ಭಜಂತ್ರಿ ಹಾಗೂ ಇನ್ನೂ ಅನೇಕರು ಇದ್ದರು.