ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಣೆಗೆ ನಿರ್ಧಾರ

ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಣೆಗೆ ನಿರ್ಧಾರ  Decision to celebrate Independence Day in a meaningful way

ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಣೆಗೆ ನಿರ್ಧಾರ  

ತಾಳಿಕೋಟಿ 31: ತಾಲೂಕ ಆಡಳಿತದ ವತಿಯಿಂದ ಆಗಸ್ಟ್‌ 15ರಂದು ಆಯೋಜಿಸುವ 79ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರು ಸೂಚನೆ ನೀಡಿದರು. ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯೋತ್ಸವದ ದಿನಾಚರಣೆ ಪ್ರಯುಕ್ತ ಆಗಸ್ಟ್‌ 15 ರಂದು ಬೆಳಿಗ್ಗೆ 8:30ಕ್ಕೆ ಪಟ್ಟಣದ ಕೆಬಿಎಂಪಿಎಸ್ ಶಾಲಾ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ ಇದರಲ್ಲಿ ಎಲ್ಲಾ ಶಾಲಾ ಕಾಲೇಜುಗಳ ಸಿಬ್ಬಂದಿ ವಿದ್ಯಾರ್ಥಿಗಳು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು.  

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದ್ದು ಗಣ್ಯ ವ್ಯಕ್ತಿಗಳಿಗೆ ಶೇಷ್ಟಾಚಾರದನ್ವಯ ಆಸನಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಪಟ್ಟಣದ ಪ್ರಮುಖ ಬೀದಿ ಹಾಗೂ ವೃತ್ತಗಳ ಸ್ವಚ್ಛತೆ ಕುರಿತು ಪುರಸಭೆ ಮುಖ್ಯಾಧಿಕಾರಿಗಳು ನಿಗಾ ವಹಿಸಬೇಕು. ಸ್ವಾತಂತ್ರ್ಯೋತ್ಸವದ ದಿನಾಚರಣೆ ಸಮಾರಂಭದಲ್ಲಿ ಯಾವುದೇ ಗೊಂದಲಗಳಾದಂತೆ ಅಚ್ಚುಕಟ್ಟಾಗಿ ನಿರ್ವಹಿಸಲು ವಿವಿಧ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಹಸಿಲ್ದಾರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಶಿಷ್ಟಾಚಾರದ ಅನುಸಾರವಾಗಿ ಆಮಂತ್ರಣ ಪತ್ರಿಕೆ ಮುದ್ರಣ, ಅಲ್ಫೋಪ ಹಾರದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಪರೇಡ್ ವ್ಯವಸ್ಥೆ, ಸಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ವಿದ್ಯುತ್ ಸರಬರಾಜು ಸೇರಿದಂತೆ ಕಾರ್ಯಕ್ರಮದ ವೇದಿಕೆ ವ್ಯವಸ್ಥೆ ಕುರಿತು ಅಧಿಕಾರಿಗಳು ಹಾಗೂ ಪಟ್ಟಣದ ಗಣ್ಯರೊಂದಿಗೆ ಚರ್ಚಿಸಲಾಯಿತು.  

ಸಭೆಯಲ್ಲಿ ಉಪಸ್ಥಿತ ಪಟ್ಟಣದ ಗಣ್ಯರು ತಮ್ಮ ಸಲಹೆ ಸೂಚನೆಗಳನ್ನು ತಿಳಿಸಿ ಕಾರ್ಯಕ್ರಮದ ಯಶಸ್ವಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದರು. ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕಿ ಸುಜಾತ ಯಡ್ರಾಮಿ ಶಿಕ್ಷಣ ಸಂಯೋಜಕ ಸುರೇಶ ಹಿರೇಮಠ, ಪಿಎಸ್‌ಐ ಆರ್‌.ಎಸ್‌.ಭಂಗಿ, ಕಂದಾಯ ಅಧಿಕಾರಿ ಎಸ್‌.ಸಿ.ಅಮರಣ್ಣವರ,ಸಿರಸ್ತೆದಾರ ಜೆ.ಆರ್‌.ಜೈನಾಪೂರ,ಸಿ.ಆರಿ​‍್ಸ. ರಾಜು ವಿಜಾಪುರ,ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಬಿ.ಕಟ್ಟಿಮನಿ, ಗಣ್ಯರಾದ ಪ್ರಭುಗೌಡ ಮದರಕಲ್ಲ,ಕಾಶಿನಾಥ ಮುರಾಳ, ವಿಜಯಸಿಂಗ್ ಹಜೇರಿ,ಡಿ.ವಿ. ಪಾಟೀಲ,ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಗಂಗಾಧರ ಕಸ್ತೂರಿ, ಅಣ್ಣಪ್ಪ ಜಗತಾಪ,ಪರಶುರಾಮ ಪರುಶರಾಮ ತಂಗಡಗಿ, ಜೈಭೀಮ ಮುತ್ತಗಿ,ಘನಶ್ಯಾಮ ಚೌವಾಣ, ಹುಸೇನ ಜಮಾದಾರ,ಬಿ.ಎಸ್‌.ಇಸಾಂಪೂರ, ಮೊಹಮ್ಮದ್ ಶಫೀಕ ಇನಾಮದಾರ,ಆಸಿಫ್ ಕೆಂಭಾವಿ, ಗೋಪಾಲ ಕಟ್ಟಿಮನಿ,ಬಸ್ಸು ಮಾದರ ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.