ಬನಶಂಕರಿದೇವಿ ಜಾತ್ರೆ ಅಧ್ಧೂರಿ ಆಚರಣೆಗೆ ನಿರ್ಧಾರ
ಚಿಮ್ಮಡ,01: ಫೆ.12 ರಂದು ನಡೆಯಲಿರುವ ಗ್ರಾಮದ ಹಟಗಾರ ಸಮಾಜದ ಆರಾದ್ಯ ದೇವತೆ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವನ್ನು ಅಧ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಕರೆಯಲಾಗಿದ್ದ ಗ್ರಾಮದ ಸರ್ವ ಸಮಾಜ ಬಾಂಧವರ ಸಭೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಈ ಬಾರಿಯೂ ವಿಶೇಷ ಮಹಾಪ್ರಸಾದ ವಿತರಿಸುವ ಮೂಲಕ ಜಾತ್ರೆಯನ್ನು ಅಧ್ಧೂರಿಯಾಗಿ ಆಚರಿಸಲಾಗುವುದೆಂದು ಸಮಾಜದ ಪ್ರಮುಖರಾದ ಅಶೋಕ ಧಡೂತಿ ಸಭೆಯಲ್ಲಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಮುಖರಾದ ಚಂದ್ರಕಾಂತ ಜಾಡಗೌಡರ ವಹಿಸಿದ್ದರು. ಪ್ರಮುಖರಾದ ರಾಮಣ್ಣ ಮುಗಳಖೋಡ, ಬಾಳಪ್ಪಾ ಹಳಿಂಗಳಿ, ಪುಂಡಲಿಕಪ್ಪಾ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಗುರಲಿಂಗಪ್ಪ ಪೂಜಾರಿ, ರಾಚಯ್ಯ ಮಠಪತಿ, ಗ್ರಾ.ಪಂ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರ್ಪ ಪಾಲಭಾವಿ, ಬೀರ್ಪ ಹಳೆಮನಿ, ಗಿರಮಲ್ಲಪ್ಪಾ ಹಟ್ಟಿ, ಬಸವರಾಜ ಕುಂಚನೂರ, ಪರಾ್ಪ ಜಾಡಗೌಡರ ಸೇರಿದಂತೆ ಹಲವಾರು ಜನ ಪ್ರಮುಖರು ಆಗಮಿಸಿದ್ದರು.
ಜಾತ್ರಾ ಮಹೋತ್ಸವದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವಿಯ ಕ್ರಪೆಗೆ ಪಾತ್ರಾಗಬೇಕೆಂದು ಬನಶಂಕರಿದೇವಿ ಸೇವಾ ಸಮೀತಿಯ ಪ್ರಮುಖರು ತಿಳಿಸಿದ್ದಾರೆ.