ಗ್ರಾಮ ಪಂಚಾಯಿತಿಗಳು ಬಲಗೊಂಡಾಗ ಅಧಿಕಾರ ವಿಕೇಂದ್ರೀಕರಣಕ್ಕೆ ಅರ್ಥ: ಚನ್ನರಾಜ ಹಟ್ಟಿಹೊಳಿ

Decentralization means when Gram Panchayats are strengthened: Channaraja Hattiholi

ಗ್ರಾಮ ಪಂಚಾಯಿತಿಗಳು ಬಲಗೊಂಡಾಗ ಅಧಿಕಾರ ವಿಕೇಂದ್ರೀಕರಣಕ್ಕೆ ಅರ್ಥ: ಚನ್ನರಾಜ ಹಟ್ಟಿಹೊಳಿ 

ಬೈಲಹೊಂಗಲ 04  :  ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೊದಲನೆ ಮಹಡಿ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.ಗ್ರಾಮ ಪಂಚಾಯಿತಿಗಳು ಬಲಗೊಂಡಾಗ ಅಧಿಕಾರ ವಿಕೇಂದ್ರೀಕರಣಕ್ಕೆ ಅರ್ಥ ಬರುತ್ತದೆ. ಹಳ್ಳಿಗಳಿಗೆ ಹೆಚ್ಚಿನ ಅಧಿಕಾರ ಸಿಗಬೇಕು. ಹಾಗಾಗಿ ಗ್ರಾಮ ಸಭೆಗಳು ಹೆಚ್ಚಾಗಿ ನಡೆಯಬೇಕು. ಸ್ಥಳೀಯ ಆಡಳಿತಗಳು ಜನರಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸಬೇಕು ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು. ಈ ವೇಳೆ ಬೈಲಹೊಂಗಲ ಕ್ಷೇತ್ರದ ಶಾಸಕರಾದ ಮಹಾಂತೇಶ ಕೌಜಲಗಿ, ಗ್ರಾಮ ಪಂಚಾಯತ್  ಅಧ್ಯಕ್ಷರಾದ ಸಂಗಪ್ಪ ಬ ಭದ್ರಶೆಟ್ಟಿ, ಉಪಾಧ್ಯಕ್ಷರಾದ  ರೇಖಾ ಢವಳಿ, ಸರ್ವ ಸದಸ್ಯರು, ರಾಮನಗೌಡ ಪಾಟೀಲ, ಸಿ.ಕೆ.ಮೆಕ್ಕೆದ್, ಅಶೋಕ್ ಭದ್ರಶೆಟ್ಟಿ, ಈರಣ್ಣ ಅಂಗಡಿ, ಗಜಾನಂದ ಸುತಗಟ್ಟಿ ಮುಂತಾದವರು ಉಪಸ್ಥಿತರಿದ್ದರು.