ಕವಿ ಬಿ.ಎ. ಸನದಿ ನಿಧನ : ಶ್ರದ್ಧಾಂಜಲಿ ಸಭೆ

ಬೆಳಗಾವಿ, 31: ನಗರದ ಜನಸಾಹಿತ್ಯ ಪೀಠವು ಇಂದು ಕವಿ ಬಿ.ಎ. ಸನದಿ ನಿಧನಕ್ಕೆ ಸಂತಾಪ ಸಭೆಯನ್ನು ಜನಜೀವಾಳ ಕಾಯರ್ಾಲಯದಲ್ಲಿ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಅಧ್ಯಕ್ಷ ಪುಂಡಲೀಕ ಪಾಟೀಲ ಮಾತನಾಡಿ, ಕವಿ ಬಿ.ಎ. ಸನದಿ ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು ಅವರ ಹರಿತ ಕಾವ್ಯಶಕ್ತಿ ಎಲ್ಲರನ್ನು ಆಕಷರ್ಿಸುವಂತಿತ್ತು. ಜನಸಾಹಿತ್ಯ ಪೀಠದೊಂದಿಗೆ ಅವರ ಒಡನಾಟವನ್ನು ಮೆಲಕು ಹಾಕಿದರು. ಅವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ನವೋದಯ ಸಾಹಿತ್ಯಕ್ಕೆ ಮಂಕು ಕವಿದಂತಾಗಿದೆ ಎಂದರು.

ಕಾರ್ಯದಶರ್ಿ ಶಿವರಾಯ ಏಳುಕೋಟಿ ಮಾತನಾಡಿ, ಬಿ.ಎ. ಸನದಿಯವರು ಸಾಹಿತ್ಯಿಕ ಯುವ ಸಮುದಾಯವನ್ನು ಬೆಳೆಸಿದಂತವರು. ಅವರ ಸಾಹಿತ್ಯಿಕ ಮಾರ್ಗದರ್ಶನ ಅನೇಕರ ಜೀವನಕ್ಕೆ ನಾಂದಿ ಹಾಡಿದೆ. ಇತ್ತೀಚೆಗೆ ಅವರು ಕಳುಹಿಸಿದ 'ಸಮೀಕರಣ' ಹೊತ್ತಿಗೆಯಲ್ಲಿ 1953 ರ ಲೇಖನ ಅರ್ಥಪೂರ್ಣವಾದುದು. ಸಹೋದರ ಸಂಸ್ಥೆ 'ಜನಜೀವಾಳ'ದೊಂದಿಗೆ ಸಾಹಿತ್ಯಿಕವಾಗಿ  ಇಟ್ಟುಕೊಂಡ ರಸನಿಮಿಷಗಳನ್ನು ಇದೇ ಸಂದರ್ಭದಲ್ಲಿ ವಿವರಿಸಿದರು. 

ಪದಾಧಿಕಾರಿಗಳಾದ ಮಹಾಂತೇಶ ಮೆಣಸಿನಕಾಯಿ, ಬಿ.ಎಸ್. ಜಗಾಪೂರ, ಚನ್ನಬಸಪ್ಪ ಪಾಗಾದ, ಗೀತಾ ಗಾಣಗಿ, ಶ್ರೀಧರ ಕಮ್ಮಾರ, ಅಭಯ ಕತ್ತಿ, ರಮೇಶ ಗಸ್ತಿ ಮುಂತಾದವರು ಹಾಜರಿದ್ದು ಅಗಲಿದ ಕವಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎರಡು ನಿಮಿಷ ಮೌನ ಸೂಚಿಸಿ ಕಂಬನಿ ಮಿಡಿದರು.

ಸಾಹಿತಿಗಳಿಂದ ಕಂಬನಿ:  

ನಗರದ ಚೆನ್ನಮ್ಮ ವತರ್ುಳದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಕವಿ ಬಿ.ಎ. ಸನದಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ಅವರ ಸಾಹಿತ್ಯದ ವಿವಿಧ ಮಜಲುಗಳ ಬಗ್ಗೆ ಮೆಲಕು ಹಾಕಲಾಯಿತು.

ಪತ್ರಿಕೆಗಾರ, ಸಾಹಿತಿ ಡಾ. ಸರಜೂ ಕಾಟ್ಕರ ಮಾತನಾಡಿ, ಬಿ.ಎ. ಸನದಿ ಒಬ್ಬರು ಮಾನವೀಯತೆಯ ಕವಿ. ಅವರ ಕವನಗಳು ಪ್ರೀತಿ, ತುಡಿತ, ಕಳಕಳಿಗಳನ್ನು ಪ್ರತಿನಿಧಿಸುವಂತವುಗಳು. ಅವರ ಅತ್ಯುತ್ತಮ ಕಾವ್ಯಕ್ಷೇತ್ರ ಎಂತವರನ್ನು ಆಕಷರ್ಿಸುತ್ತಿತ್ತು ಎಂದರು. ಇದೇ ಕಾಲಕ್ಕೆ  ಅತ್ಯಂತ ಸಂಭಾವಿತ, ಸಜ್ಜನ, ಸುಸಂಸ್ಕೃತ ಮುಸ್ಲಿಂ ಎಂದರೆ ಬಿ.ಎ. ಸನದಿಯವರು. ಜಾತಿ, ಧರ್ಮ ಮೀರಿದ ಕವಿತ್ವ ಶಕ್ತಿ ಹಾಗೂ ಮನೋಭಾವ ಉಳ್ಳವರು ಎಂದು ಪಾಟೀಲ ಪುಟ್ಟಪ್ಪನವರು ಮಾತನಾಡಿದ ನುಡಿಗಳನ್ನು ಉಲ್ಲೇಖಿಸಿ ನೆನಪಿಸಿದರು.

ಕಸಾಪ ಮಾಜಿ ಅಧ್ಯಕ್ಷ ಯ.ರು ಪಾಟೀಲ ಮಾತನಾಡಿ ಶಿಂದೊಳ್ಳಿಗೆ ಬಂದಾಗ ಬಿ.ಎ. ಸನದಿಯವರನ್ನು ಬೇಟಿಯಾಗಿ ತಮ್ಮ ಸಾಹಿತ್ಯ್ತಿಕ ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಬರೆಸಿದ್ದನ್ನು ಹಾಗೂ ಅನೇಕ ಸಾಹಿತ್ಯಿಕ ಚಿಂತನೆಗಳಿಗೆ ಪ್ರೆರೇಪಕರಾಗಿದ್ದನ್ನು ಸ್ಮರಿಸಿದರು.ನವೋದಯ ಕಾವ್ಯ ಶಕ್ತಿಯಾಗಿ ಭಾಪಾಂತರಕಾರರಾಗಿ ಕನ್ನಡ ನಾಡಿಗೆ ಅದ್ವ್ವಿತೀಯ ಸೇವೆಗೈದಿದ್ದಾರೆ ಎಂದು ಹಿರಿಯ ಸಾಹಿತಿ ಚಂದ್ರಕಾಂತ ಪೋಕಳೆ ಹೇಳಿದರು. 

ಹಿರಿಯ ಪ್ರಾಧ್ಯಾಪಕ  ಸಾಹಿತಿ ಡಾ. ರಾಮಕೃಷ್ಣ ಮರಾಠೆ ಮಾತಾನಾಡಿ ಬಿ.ಎ. ಸನದಿ ಪ್ರತಿಷ್ಠಾನದ ಮೂಲಕ ಅವರ ವೈಚಾರಿಕ ಚಿಂತನೆಗಳನ್ನು ಹಿಂದೆನಂತೆಯೇ ಮುಂದುವರೆಸಿಕೊಂಡು ಹೋಗುವದಾಗಿ ಭರವಸೆ ನೀಡಿದರು. ಧರ್ಮದತ್ತಿ ಇಲಾಖೆಯ ಹಿರಿಯ ಅಧಿಕಾರಿ ಸಾಹಿತಿ ರವಿ ಕೋಟಾರಗಸ್ತಿ ಅವರೊಂದಿಗಿನ ಸಾಹಿತ್ಯಿಕ ಒಡನಾಟ ಹಾಗೂ ಬೆಳಗಾವಿ ಬಂದಾಗ ಅವರೊಂದಿಗಿನ ಅನುಭವದಾಗರವನ್ನು ನೆನಪಿಸಿಕೊಂಡರು. 

ಶಿಕ್ಷಕ ಸಾಹಿತಿ ಶಿವರಾಯ ಏಳುಕೋಟಿ ಮಾತನಾಡಿ, ಬಿ.ಎ. ಸನದಿಯವರ ಕಾವ್ಯ ಕ್ಷೇತ್ರ ಅನೇಕ ಸಾಹಿತಿಗಳನ್ನು ಬೆಳೆಸಿದೆ. ಕೇಳಿದಾಕ್ಷಣ ಕಾವ್ಯ ಕೊಡುವ ತಾಕತ್ತು ಅವರಲ್ಲಿತ್ತು. ಅಂತಹ ಅನೇಕ ಕಾವ್ಯಗಳನ್ನು 'ಜನಜೀವಾಳ' ಪ್ರಕಟಿಸಿದೆ. ಪತ್ರಿಕೆಯ ಸಂಸ್ಥಾಪಕ ಸಂಪಾದಕರ, ಕಚೇರಿ ಜೊತೆಗೆ ಇದ್ದ ಸಂಗತಿಗಳನ್ನು ಇದೇ ವೇಳೆ ಪ್ರಸ್ತಾಪಿಸಿದರು. ಉಪನ್ಯಾಸಕ ಸಾಹಿತಿ ಡಾ. ಎಸ್.ಎಸ್. ಅಂಗಡಿ ಮಾತನಾಡಿ   ಅವರ ಕಾವ್ಯದ ಪ್ರತಿ ಮಜಲುಗಳು ಸಾಹಿತ್ಯ ಓದುಗರನ್ನು ಹಿಡಿದಿಡುತ್ತವೆ ಅವರ ಅಗಲುವಿಕೆ ಕರುನಾಡಿಗೆ ತುಂಬಲಾರದ ಹಾನಿಯಾಗಿದೆ ಎಂದರು.

ಇದೇ ಕಾಲಕ್ಕೆ ಪತ್ರಕರ್ತರಾದ ಆರ್.ಎಸ್. ದಗರ್ೆ, ರಾಜು ಉಸ್ತಾದ ಸೇರಿದಂತೆ ಹಿರಿಯ ಕಿರಿಯ ಸಾಹಿತ್ಯಿಕ ಅಭಿಮಾನಿಗಳು ಆಗಮಿಸಿ ಅಗಲಿದ ಕವಿಯ ಭಾವಚಿತ್ರಕ್ಕೆ ಪುಷ್ಪ ಸಮಪರ್ಿಸಿ  ಎರಡು ನಿಮಿಷಗಳ ಮೌನ ಸೂಚಿಸಿದರು.