ಡಿ.ಕೆ ಶಿವಕುಮಾರ್ ಕಣ್ಣೀರಿಗೆ ಈಶ್ವರಪ್ಪ ವ್ಯಂಗ್ಯ

ಧಾರವಾಡ 10: ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಾಯಕರು ಕಣ್ಣೀರು ಸುರಿಸಿ  ನಾಟಕವಾಡಿದ್ದಾಯಿತು. ಇದೀಗ ಸಚಿವ. ಡಿ.ಕೆ.ಶಿವಕುಮಾರ್ ಅವರ ಸರದಿ. ಇನ್ನೆರೆಡು  ದಿನದಲ್ಲಿ ಸಿದ್ದರಾಮಯ್ಯ ಅಳುತ್ತಾರೆ ಎಂದು ಬಿಜೆಪಿ ಹಿರಿಯ ಮುಖಂಡ, ಶಾಸಕ  ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. 

    ಗುರುವಾರ ಕುಂದಗೋಳದಲ್ಲಿ  ಕುಸಮಾವತಿ ಶಿವಳ್ಳಿ ಪರ ಪ್ರಚಾರ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರ್, ಸಚಿವ  ಸಿ.ಎಸ್.ಶಿವಳ್ಳಿ ಅವರನ್ನು ನೆನೆದು ಕಣ್ಣೀರಿಟ್ಟಿದ್ದರು.  

   ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ  ಚಿಕ್ಕನಗೌಡ ಪರ ಪ್ರಚಾರದಲ್ಲಿ ಭಾಗವಹಿಸಿ ಈಶ್ವರಪ್ಪ ಮಾತನಾಡಿದರು. ರಾಜ್ಯದಲ್ಲಿ  ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ನಲ್ಲಿ  ಸ್ವಯಂಘೋಷಿತ ಮುಖ್ಯಮಂತ್ರಿಗಳು ಹೆಚ್ಚಾಗುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಹತ್ತಿರ  ಹಣ ಪಡೆದು ಜನರು ಬಿಜೆಪಿ ಅಭ್ಯಥರ್ಿಗೆ ಮತಹಾಕಲಿದ್ದು, ಕುಂದಗೋಳ ಹಾಗೂ ಚಿಂಚೋಳಿ ಎರಡೂ  ಕ್ಷೇತ್ರಗಳಲ್ಲಿ  ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

   ಕುಂದಗೋಳದ ಬುಡರಸಿಂಗಿಯಲ್ಲಿ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್-ಜೆಡಿಎಸ್ನಿಂದ ಬಿಜೆಪಿಗೆ 20 ಶಾಸಕರು ಬರಲಿದ್ದು, ಇದನ್ನು ನೋಡಿಕೊಂಡೇ ಯಡಿಯೂರಪ್ಪ ಮೈತ್ರಿ ಸಕರ್ಾರ ಪತನವಾಗಲಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಮೇ 23 ರ ಬಳಿಕ ರಾಜ್ಯದಲ್ಲಿ ರಾಜಕೀಯ ಧೃವೀಕರಣ ಆಗಲಿದೆ ಎಂದರು. 

  ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ಹೈಕಮಾಂಡ್ ಯಾರನ್ನು ಬೇಕಾದರೂ ಆಯ್ಕೆ ಮಾಡಬಹುದು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಉತ್ತರ ಕನರ್ಾಟಕ, ದಕ್ಷಿಣ ಕನರ್ಾಟಕ ಎಂಬ ಪ್ರಾದೇಶಿಕ ತಾರತಮ್ಯವಿಲ್ಲ. ಹೀಗಾಗಿ ಯಾವ ಜಿಲ್ಲೆಯವರು ಬೇಕಾದರೂ ಬಿಜೆಪಿ ರಾಜ್ಯಾಧ್ಯಕ್ಷರಾಗಬಹುದು ಎಂದರು.