ಕಾಗವಾಡ 12: ಹಾಡು-ಹಗಲು ಮಧ್ಯಾಹ್ನ 12 ಗಂಟೆಗೆ ಮನೆ ಬೀಗ ಮುರಿದು ಮನೆಯಲ್ಲಿಯ 10 ತೊಲೆ(100ಗ್ರಾಂ)ಗಳ ಚಿನ್ನಾಭರಣಗಳು ಕಳ್ಳತನ ಮಾಡಿರುವ ಘಟಣೆ ಬುಧವಾರ ದಿ. 10ರಂದು ಕಾಗವಾಡದಲ್ಲಿ ಸಂಭವಿಸಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ.
ಬೆಳಗಾವಿ-ಸಾಂಗಲಿ ರಾಜ್ಯ ಹೆದ್ದಾರಿ ಮಾರ್ಗದ ಕಾಗವಾಡ ಗ್ರಾಮದ ಹತ್ತಿರ ರಸ್ತೆ ಬಳಿ ತೋಟದಲ್ಲಿ ಮನೆ ಕಟ್ಟಿಸಿರುವ ಮಲಗೌಡಾ ರಾವಸಾಬ ಪಾಟೀಲ ಇವರ ಮನೆಯ ಬೀಗ ಕಳ್ಳರು ಕಬ್ಬಿಣ ರಾಡ್ದಿಂದ ಮುರಿದು, ಮನೆಯಲ್ಲಿ ಪ್ರವೇಶಿಸಿ ಅಲ್ಲಿಯ ಟ್ರೆಜರಿ ಮುರಿದು ಅದರಲ್ಲಿ ಹಣ, ಚಿನ್ನಾಭರಣ ತಪಾಸಣೆ ಮಾಡಿದ್ದಾರೆ. ಆದರೆ ಅವರ ಕೈಗೆ ಏನೂ ದೊರೆಯದೆಯಿದಿದ್ದರಿಂದ ಪಕ್ಕದಲ್ಲಿರುವ ಮಂಚದ ತಲೆಬದಿಯಿರುವ ಡ್ರಾವರಿನಲ್ಲಿ ಚಿನ್ನಾಭರಣಗಳು ಬಚ್ಚಿಟ್ಟಿದ್ದರು. ಇದನ್ನು ಕಳ್ಳರು ಕೈಚಳಕ ತೋರಿಸಿ, ಕದ್ದುಕೊಂಡು ಹೋಗಿದ್ದಾರೆ.
ಮನೆಯಿಂದ ಕಾಗವಾಡ ಪಟ್ಟಣದಲ್ಲಿ ಹೋಗಿ ಮರಳಿ ಬಂದಾಗ ಮನೆಯವರಿಗೆ ಕಳ್ಳತನವಾಗಿದೆಯೆಂದು ಕಂಡುಬಂದಿದೆ. ಕೂಡಲೆ ಕಾಗವಾಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪಿಎಸ್ಐ ಹನಮಂತ ಶಿರಹಟ್ಟಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.
ಕೂಡಲೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಗುರುವಾರ ಸಂಜೆ ಡಿವೈಎಸ್ಪಿ ಆರ್.ಬಿ.ಬಸಗರ್ಿ, ಅಥಣಿ ಸಿಪಿಐ ಆಲಿಸಾಬ ಇವರು ನೇತೃತ್ವದಲ್ಲಿ ಬೆಳಗಾವಿಯಿಂದ ಶ್ವಾನಪಥಕ, ಬೆರಳೆಚ್ಚು ತಪಾಸಣೆ ತಂಡ ಭೇಟಿನೀಡಿ, ತನಿಖೆ ಮಾಡಿದ್ದಾರೆ. ಆದರೆ ಶ್ವಾನ ಮನೆಯಲ್ಲಿ ಸುತ್ತಾಡಿ, ಶಿರಗುಪ್ಪಿ-ಕಾಗವಾಡ ರಸ್ತೆ ವರೆಗೆ ಹೋಗಿ ಮರಳಿ ಬಂದಿದೆ.
ಹಾಡ-ಹಗಲು ಮನೆ ಬೀಗ ಮುರಿದು ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಗ್ರಾಮದಲ್ಲಿ ಹರಡಿದಾಗ ಅನೇಕ ಕುಟುಂಬಗಳು ಭಯಭೀತಗೊಂಡಿವೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿಕ್ಕಪುಟ್ಟ ಕಳ್ಳತನ ನಡೆಯುತ್ತಿವೆ. ಇದರಿಂದ ಕೆಲವರು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾಗ, ಈಗಿರುವ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಿದ್ದು, ಅಲ್ಲದೇ ಸತತವಾಗಿ ಬೇರೆ ಕಡೆ ಬಂದೋಬಸ್ತ, ಇನ್ನಿತರ ಕಾರ್ಯ ನಿಮಿತ್ತ ಸಿಬ್ಬಂದಿಗಳು ತೊಡಗುತ್ತಿದ್ದರಿಂದ ಗ್ರಾಮಗಳಿಗೆ ಭೇಟಿನೀಡಲು ಸ್ವಲ್ಪ ವಿಳಂಬವಾದಾಗ ಇಂತಹ ಘಟಣೆಗಳು ನಡೆಯುತ್ತಿವೆ. ಈಗ ಎಲ್ಲ ಸಿಬ್ಬಂದಿಗಳು ಅಲಟರ್್ ಆಗಿದ್ದು, ಯಾವುದೇ ಸ್ಥಿತಿಯಲ್ಲಿ ಇಂತಹ ಕಳ್ಳರನ್ನು ಬಂಧಿಸಲು ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಹಿರಿಯ ಅಧಿಕಾರಿಗಳು ಹೇಳಿದರು.