ಮಾಸ್ಕೋ, .25 ಕೆನಡಾದ ಡೆನಿಸ್ ಶಪೋವೊಲೊವ್ ವಿರುದ್ಧ ಡೇವಿಸ್ ಕಪ್ ಟೆನಿಸ್ ಟೂನರ್ಿಯ ಫೈನಲ್ ನಲ್ಲಿ ಸೊಗಸಾದ ಆಟದ ಪ್ರದರ್ಶನ ನೀಡಿದ ಸ್ಪೇನ್ ನ ರಫೇಲ್ ನಡಾಲ್ ತಮ್ಮ ತಂಡಕ್ಕೆ ಆರನೇ ಬಾರಿಗೆ ಚಾಂಪಿಯನ್ ಮುಕುಟ ತೊಡಿಸಿದರು. ತವರು ಅಭಿಮಾನಿಗಳ ಸಮ್ಮುಖದಲ್ಲಿ ಅಮೋಘ ಆಟವಾಡಿದ ನಡಾಲ್, ತಂಡಕ್ಕೆ ಜಯದ ಮಾಲೆ ತೊಡಿಸಿದರು. ಡೆನಿಸ್ ಶಪೋವೊಲೊವ್ ವಿರುದ್ಧದ ಪಂದ್ಯದಲ್ಲಿ ನಡಾಲ್ ಮೇಲುಗೈ ಸಾಧಿಸಿದ್ದರು. ಅಂತಿಮವಾಗಿ ನಡಾಲ್ 6-3, 7-6 ರಿಂದ ಪಂದ್ಯ ಗೆದ್ದು ಬೀಗಿದರು. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ರಾಬಟರ್ೊ ಬೌಟಿಸ್ಟಾ ಅಗುಟ್ 7-6, (7-3), 6-3 ಗಳಿಂದ 19 ವರ್ಷದ ಕೆನಡಾದ ಫೆಲಿಕ್ಸ್ ಆಗಿಯರ್-ಅಲಿಯಾಸಿಮ್ ಅವರನ್ನು ಅಂಕಗಳಿಂದ ಸೋಲಿಸಿದರು. ಸೆಮಿಫೈನಲ್ಸ್ ನಲ್ಲಿ ಸ್ಪೇನ್ ಬ್ರಿಟನ್ ತಂಡವನ್ನು, ಕೆನಡಾ ರಷ್ಯಾವನ್ನು ಸೋಲಿಸಿ ಫೈನಲ್ ಗೆ ಅರ್ಹತೆ ಪಡೆಯಿತು. ಸ್ಪೇನ್ ರಾಷ್ಟ್ರೀಯ ತಂಡವು ಈ ಹಿಂದೆ 2000, 2004, 2008, 2009 ಮತ್ತು 2011 ರಲ್ಲಿ ಡೇವಿಸ್ ಕಪ್ ಗೆದ್ದಿತು.