'ಪ್ರತ್ಯೇಕತೆ ಕೂಗಿಗೆ ಅಪ್ಪ-ಮಕ್ಕಳೇ ಕಾರಣ'


ಬೆಳಗಾವಿ 31: ಉತ್ತರ ಕನರ್ಾಟಕದ ಬಗ್ಗೆ ಹಗುರುವಾಗಿ ಮಾತನಾಡುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಅದರಂತೆ ಮಾಧ್ಯಗಳ ಮೇಲೆ ಹರಿಹಾಯ್ದು ವಿಷದ ಬೀಜ ಬಿತ್ತುವ ಮೂಲಕ ರಾಜ್ಯಕ್ಕೆ ಬೆಂಕಿ ಇಡುವ ಕುತಂತ್ರ ಅಪ್ಪ ಮಕ್ಕಳು ನಡೆಸಿದ್ದಾರೆ. ಉತ್ತರ ಕನರ್ಾಟಕ ಬಗ್ಗೆ ಇಲ್ಲ ಸಲ್ಲದ ಮಾತನಾಡುವ ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಉ. ಕನರ್ಾಟಕಕ್ಕೆ ಏನು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷ ದುರೀಣ ಬಿಎಸ್ ಯಡಿಯೂರಪ್ಪ ಇಂದಿಲ್ಲಿ ಪ್ರಶ್ನಿಸಿದರು. 

ಇಲ್ಲಿನ ಸುವರ್ಣ ಸೌಧದ ಮುಂದೆ ಮಂಗಳವಾರ ನೂರಾರು ಮಠಾಧೀಶರು ಹಾಗೂ ಕೆಲವು ಸಂಘಟನೆಯವರು ಉತ್ತರ ಕನರ್ಾಟಕ ಸಮಗ್ರ ಅಭಿವೃದ್ಧಿ ಹಾಗೂ ಸುವರ್ಣಸೌಧಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ನಡೆಸಿದ ಒಂದು ದಿನದ ಧರಣಿಯಲ್ಲಿ ಸಾಂಕೇತಿಕವಾಗಿ ಭಾಗವಹಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. 

ಈ ಹಿಂದೆ ಕಾಂಗ್ರೆಸ್ನವರು ಪ್ರತ್ಯೇಕ ಲಿಂಗಾಯಿತ ಧರ್ಮ ಮಾಡಲು ಯತ್ನಿಸಿದರು. ಈಗ ಇಲ್ಲ ಸಲ್ಲದ ಮಾತುಗಳನ್ನಾಡಿ ಪ್ರಾದೇಶಿಕ ಅಸಮಾನತೆಯ ಕೂಗನ್ನು ಹೆಚ್ಚಿಸಲು ಅಪ್ಪ ಮಕ್ಕಳು ಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು ಅವರ ಈ ಸಾಹಸ ಕೈಗೂಡುವುದಿಲ್ಲ ಎಂದರು. ಉತ್ತರ ಕನರ್ಾಟಕ ಅಭಿವೃದ್ಧಿ ಕಂಡಿಲ್ಲ ಎಂಬ ನೋವು ನಿಮಗಿದ್ದರೂ ಬಿಜೆಪಿ ಯಾವತ್ತಿದ್ದರೂ ಅಖಂಡ ಕನರ್ಾಟಕದ ಪರ ಇದೆ. 

ಕನರ್ಾಟಕ ಏಕೀಕರಣಕ್ಕೆ ಅಲೂರ ವೆಂಕಟರಾಯರು, ಫಗು ಹಳಕಟ್ಟಿ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತರು ಹೋರಾಟ ಮಾಡಿದ್ದಾರೆ. ಕನರ್ಾಟಕ ಏಕೀಕರಣಕ್ಕೆ ನಿಜಾಮರ ಆಡಳಿತ, ಮುಂಬೈ, ಮದ್ರಾಸ್, ಕೇರಳ ಪ್ರಾಂತ್ಯದ ಅನೇಕ ಕನ್ನಡ ಪ್ರದೇಶಗಳನ್ನು ಒಂದು ಮಾಡಲಾಗಿದೆ. ನಾಡಿನ ಹಲವಾರು ಗಣ್ಯರು ಬೆವರು ಸುರಿಸಿದ್ದಾರೆ. ಅವರ ತ್ಯಾಗ ಬಲಿದಾನವನ್ನು ನೆನೆದು ತಾವು ಉ.ಕ. ಪ್ರತ್ಯೇಕ ರಾಜ್ಯದ ಕೂಗನ್ನು ಕೈ ಬಿಡಬೇಕು.

ಈವರೆಗೆ ನಮ್ಮ ಪಕ್ಷದ ಮುಖಂಡರು, ಶಾಸಕರು ಪ್ರತ್ಯೇಕ ರಾಜ್ಯದ ಮಾತುಗಳನ್ನಾಡಿರಬಹದು. ಆದರೆ ಇನ್ನು ಮುಂದೆ ಯಾವೊಬ್ಬ ನಮ್ಮ ಪಕ್ಷದ ಶಾಸಕರು, ಮುಖಂಡರು ಈ ಕುರಿತು ಹೇಳಿಕೆ ನೀಡದಂತೆ ಸೂಚಿಸಿದ್ದೇನೆ ಎಂದರು. ಈ ಹಿಂದೆ ಪ್ರತೇಕ ಕನರ್ಾಟಕದ ಬಗ್ಗೆ ಮಾತನಾಡಿದ್ದರೂ ಅವರು ಯಾವ ಉದ್ದೇಶವನ್ನು ಪ್ರತೇಕತೆಯ ಉದ್ದೇಶವನ್ನು ಹೊಂದಿ ಮಾತನಾಡಿಲ್ಲ. ಹೊರತು ಅವರು ಈ ಭಾಗದ ಅಭಿವೃದ್ದಿಗಾಗಿ ಹೇಳಿದ್ದಾರೆ ಎಂದರು.

ವಿರೋಧ ಪಕ್ಷದ ನಾಯಕನಾಗಿ ನಾನು ಬೆಳಗಾವಿಗೆ ಬಂದು ಸ್ವಾಮೀಜಿಗಳನ್ನು ಹೋರಾಟಗಾರರನ್ನು ಭೇಟಿ ಮಾಡಿ ಕಷ್ಟನಷ್ಟಗಳನ್ನು ಕೇಳುತ್ತಿದ್ದೇನೆ. ಈ ಕೆಲಸವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಬಹುದಲ್ಲವೇ ಎಂದು ಬಿಎಸ್ವೈ ಪ್ರಶ್ನಿಸಿಸಿದರು. 

ಕನರ್ಾಟಕದಲ್ಲಿ ಏಕೀಕರಣದ ಆದ ಮೇಲೆ ಈ ರೀತಿ ಬೃಹತ್ ಹೋರಾಟ ನಡೆಯುತ್ತಿದೆ. ಸತ್ಯಾಗ್ರಹದಂತಹ ಪರಿಸ್ಥಿತಿ ಎಂದು ನಡೆದಿರಲಿಲ್ಲ. ಸಿಎಂ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆ ಈ ಹೋರಾಟಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಜಾತಿಯ ವಿಷ ಬೀಜ ಬಿತ್ತಿದ್ದಾರೆ. ಬರುವ 2ನೇರಂದು ಉ. ಕನರ್ಾಟಕ ಬಂದ್ ಮಾಡಬೇಡಿ. 104 ಜನ ಶಾಸಕರು ಇರುವ ನಾವು ಈ ಬಗ್ಗೆ ಪ್ರತಿಪಕ್ಷವಾಗಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುವೆ ಎಂದು ಹೇಳಿದರು.  

ಕನರ್ಾಟಕದ ಜನತೆ ನಿಮ್ಮನ್ನು ಕ್ಣಮಿಸುವುದಿಲ್ಲ ಎಂದರು. ಇಡೀ ರಾಜ್ಯಕ್ಕೆ ಅಕ್ಕಿ, ಬೆಳೆ, ವಿದ್ಯುತ್ ಸಿಗುವುದು ಉತ್ತರ ಕನರ್ಾಟಕದಿಂದ ಎಂದರು. ಆಲಮಟ್ಟಿ ಅಣೆಕಟ್ಟು ಎತ್ತರ ಮಾಡುವ ಕಾಮಗಾರಿ ನೆನಗುದಿಗೆ ಬಿದ್ದಿದ್ದ. ಹೈಕದಲ್ಲಿ 40 ಸಾವಿರ ಹುದ್ದೆ ಖಾಲಿಯಿದ್ದರೂ, 3-4 ಸಾವಿರ ಹುದ್ದೆಗಳನ್ನು ಭತರ್ಿ ಮಾಡಲಾಗಿದ್ದೆ. 9 ಕೋಟಿ ರು.ಗಳನ್ನು ಆಲಮಟ್ಟಿ ಆಣೆಕಟ್ಟುಯಿಂದ ಕೆಎಸ್ಆರ್ನ ಉದ್ಯಾನಕ್ಕೆ ಕಳುಹಿಸಿದ್ದು ಏಕೆ ಎಂದು ಸಿಎಮ್ ಉತ್ತರಿಸಬೇಕು ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ. 

ಈ ಸಂದರ್ಭದಲ್ಲಿ ಶಾಸಕರಾದ ಉಮೇಶ ಕತ್ತಿ, ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ, ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ವಿಶ್ವನಾಥ ಪಾಟೀಲ, ಶಶಿಕಾಂತ ನಾಯಿಕ ಉಪಸ್ಥಿತರಿದ್ದರು.