ತುಲಾಭಾರ ಹಣದಿಂದ ಮಠದ ದಾಸೋಹ, ಅಭಿವೃದ್ಧಿ

Dasoha, development of Math with Tulabhara money

ತುಲಾಭಾರ ಹಣದಿಂದ ಮಠದ ದಾಸೋಹ, ಅಭಿವೃದ್ಧಿ   

ಕಂಪ್ಲಿ, 22 ; ಶರಣರು ಹಾಕಿಕೊಟ್ಟ ಪರಂಪರೆ, ಧಾರ್ಮಿಕ ಆಚರಣೆಗಳು ಇಂದಿಗೂ ಶಾಶ್ವತವಾಗಿ ನಡೆದುಕೊಂಡು ಬಂದಿವೆ. ಉದ್ಭವ ವೀರಭದ್ರೇಶ್ವರ ದೇವರ ಅಗಾಧ ಪವಾಡದಿಂದಾಗಿ ಭಕ್ತರ ಇಷ್ಟಾರ್ಥಗಳು ಲಭಿಸುತ್ತಿವೆ ಎಂದು ಚಿಕ್ಕೇನಕೊಪ್ಪ ಶಿವಶಾಂತವೀರ ಶರಣರು ಹೇಳಿದರು. ತಾಲೂಕಿನ ಸಣಾಪುರ ಗ್ರಾಮದಲ್ಲಿ ಶ್ರೀ ಉದ್ಭವ ವೀರಭದ್ರೇಶ್ವರ ಜಾತ್ರಾ ಮಹೋತ್ಸವ, 48ನೇ ವರ್ಷದ ಕಲುಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ತುಲಾಭಾರ ಮತ್ತು ಮುತೈಧೀಯರ ಉಡಿ ತುಂಬುವ ಕಾರ್ಯಕ್ರಮದಲ್ಲಿ  ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ತುಲಾಭಾರ ಹಣದಿಂದ ಮಠದ ದಾಸೋಹ ಮತ್ತು ಅಭಿವೃದ್ಧಿ 48 ವರ್ಷಗಳ ಕಾಲ ನಿರಂತರವಾಗಿ ಪುರಾಣ ನಡೆಸಿಕೊಂಡು ಬರಲಾಗಿದೆ. ಪುರಾಣ ಕೇಳುವದರಿಂದ ಮನಸಿಗೆ ನೆಮ್ಮದಿ ಸಿಗುತ್ತದೆ ಶರಣರು ಲೌಕಿಕ ಮತ್ತು ಆಧ್ಯಾತ್ಮಿಕ ಬದುಕನ್ನು ಸಾಗಿಸಿದ್ದಾರೆ.  ದಾಸೋಹ, ಸಮಾಜ ಸೇವಾ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.  ದುಡಿಯುವ ಕಾಯಕವನ್ನು ಹೊಂದಿದಾಗ ಮಾತ್ರ ಆರ್ಥಿಕವಾಗಿ ಸಬಲರಾಗಬಹುದು. ಸಂಸಾರ ಸುಖ, ದುಖಗಳನ್ನು  ಸಮಾನವಾಗಿ ಸ್ವೀಕರಿಸಿ, ದೈರ್ಯದಿಂದ ಬದುಕನ್ನು ಎದುರಿಸಿಎಂದರು.ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಆಶೀರ್ವಚನ ನೀಡಿ ಮಾತನಾಡಿ, ಮಕ್ಕಳನ್ನುಲಿಂಗ ತಾರತಮ್ಯ ಮಾಡದೆ ಸಮಾನ ಶಿಕ್ಷಣ ಕೊಡಿಸುವಲ್ಲಿ ಪೋಷಕರು ಆಸಕ್ತಿ ತೋರಬೇಕು. ಮಹಿಳೆಯರಿಗೆ ಉಡಿ ತುಂಬುವುದರಿಂದ ಸಮಾಜದಲ್ಲಿ ಭಾವೈಕ್ಯತೆ, ಸಮಾನತೆ, ಸಹೋದರತೆ ಭಾವನೆ ಮೂಡಲು ಸಾಧ್ಯವಿದೆ ಎಂದರು.  ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣರ ಪುರಾಣ ಪ್ರವಚನ ಆಲಿಸುವುದರಿಂದ ಜನರ ಬದುಕು ಅಸನವಾಗಲಿದೆ. ಚಿಕ್ಕೇನಕೊಪ್ಪ ಚನ್ನವೀರ ಶರಣರ, ಇಲ್ಲಿನ ಉದ್ಭವ ವೀರಭದ್ರೇಶ್ವರ ದೇವರ ಪವಾಡ ದೊಡ್ಡದು. ಭಕ್ತರು ಕೇಳಿದ್ದನ್ನು ನೀಡುವ ಶಕ್ತಿವಂತರು. ಇವರ ಆರಾಧನೆ ಹಾಗೂ ನಿರಂತರ ಸ್ಮರಣೆಯಿಂದ ಬದುಕಿನಲ್ಲಿ ಹೊಸ ಬದಲಾವಣೆ ತರಬಹುದು. ಮತ್ತು ಇಷ್ಟಾರ್ಥಗಳು ಈಡೇರಲಿವೆ ಎಂದರು.ಶ್ರೀ ಶರಣಬಸವೇಶ್ವರ ವಿವಾಹ ಕಾರ್ಯಕ್ರಮ ಭಕ್ತರ ಸಮ್ಮುಖದಲ್ಲಿ ಜರುಗಿತು. ಉಡಿ ತುಂಬುವ ಕಾರ್ಯಕ್ರಮದಲ್ಲಿ ಶಾಸಕರ ಧರ್ಮಪತ್ನಿಜೆ.ಎನ್‌.ಶ್ರೀದೇವಿ501 ಮಹಿಳೆಯರಿಗೆ ಉಡಿ ತುಂಬಲಾಯಿತು. ಮತ್ತು ಗುಡುದೂರ ನೀಲಕಂಠಯ್ಯ ಮಹಾಸ್ಚಾಮಿ ಇವರಿಗೆ ತುಲಾಭಾರ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಮುಖಂಡರಾದ ಜಿ.ಈಶಪ್ಪ, ಎಂ.ಚನ್ನಪ್ಪ, ಕೆ.ರೇಣುಕಾಗೌಡ, ಕೆ.ಮರಿಶಾಂತ, ಟಿ.ಶರಣಪ್ಪ, ಜಿ.ಕುಮಾರಸ್ವಾಮಿ, ಯು.ಮಲ್ಲಯ್ಯ, ಕೆ.ಬಸವರಾಜ, ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮ ಮತ್ತು ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ಫೆ001ಗುಡುದೂರು ನೀಲಕಂಠಯ್ಯ ಮಹಾಸ್ವಾಮಿಯ ತುಲಾಭಾರ ಸೇವೆ ಸಂಭ್ರಮದಿಂದ ನೆರವೇರಿತು.