ಲೋಕದರ್ಶನ
ವರದಿ
ಬೆಳಗಾವಿ 22 : ನವೆಂಬರ್ 1 ಕನರ್ಾಟಕ ರಾಜ್ಯೋತ್ಸವದಂದು ನಾಡದ್ರೋಹಿ ಎಂಇಎಸ್ ಸಂಘಟನೆ ಕರಾಳ ದಿನಾಚರಣೆ ಆಚರಣೆ
ಮಾಡುತ್ತಿರುವದರಿಂದ ಕನ್ನಡಿಗರು, ಕನರ್ಾಟಕ ಸಕರ್ಾರವನ್ನು ಅವಮಾನಿಸುತ್ತಿದೆ. ಈ ವರ್ಷ ಕರಾಳ
ದಿನಕ್ಕೆ ಅನುಮತಿ ನೀಡಿದರೆ ನ್ಯಾಯಾಲಯದಲ್ಲಿ ಪಿಆಯ್ಎಲ್ ಹಾಕಲಾಗುವುದು ಎಂದು ಮಾಹಿತಿ ಹಕ್ಕು
ಕಾರ್ಯಕರ್ತ ಭೀಮಪ್ಪ ಗಡಾದ ಅವರು ಎಚ್ಚರಿಕೆ
ನೀಡಿದ್ದಾರೆ.
ಸೋಮವಾರ ನಗರದ ಕನ್ನಡ ಸಾಹಿತ್ಯ
ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,
2016 ರಲ್ಲಿ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದವರ
ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ
ಅಂದಿನ ಜಿಲ್ಲಾಧಿಕಾರಿಯಾಗಿದ್ದ ಜಯರಾಮ ಅವರು ಸಕರ್ಾರಕ್ಕೆ ವರದಿ
ನೀಡಿ, ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವಂತೆ ಅದರಲ್ಲಿ
ಶಿಫಾರಸ್ಸು ಮಾಡಿದ್ದರು, ಆದರೆ 2 ವರ್ಷದ ಕಳೆದರೂ ಅದನ್ನು ಪರಿಶೀಲನೆ ಮಾಡಿಲ್ಲ. ಯಾರ ಮೇಲೆ ಕ್ರಮವೂ
ಕೈಗೊಂಡಿಲ್ಲ ಸಕರ್ಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಎಂಇಎಸ್ ಸಂಘಟನೆಯವರು ಪ್ರತಿವರ್ಷ ನಾಡಹಬ್ಬದಂದು ನಾಡದ್ರೋಹಿ ಚಟುವಟಿಕೆ ನಡೆಸುವುದಲ್ಲದೇ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿವೆ. ಆದರೆ ಇದನ್ನು ರಾಜ್ಯ
ಸಕರ್ಾರ ಗಂಬೀರವಾಗಿ ಪರಿಗಣಿಸುತ್ತಿಲ್ಲ. ಸಕರ್ಾರದ ವರ್ತನೆ ನೋಡಿದರೆ ಸಕರ್ಾರ ಎಂಇಎಸ್ ಪರವಾಗಿದೆಯೇ ಎಂದು ಅನುಮಾನ ಮೂಡುತ್ತಿದೆ
ಎಂದು ಹೇಳಿದರು.
ಗುಪ್ತಚರ ಇಲಾಖೆಯಿಂದ ನಾಡದ್ರೋಹಿ ಚಟುವಟಿಕೆ ಮಾಹಿತಿ ಪಡೆಯುವಂತೆ ವಿಧಾನ ಸಭಾ ಸಭಾಧ್ಯಕ್ಷರು, ಗೃಹ
ಸಚಿವರಿಗೆ ಪತ್ರ ಬರೆಯಲಾಗಿತ್ತು, ಅಲ್ಲದೇ,
ಪೊಲೀಸ್ ಆಯುಕ್ತರು ಅನುಮತಿ ಕೂಡ ನೀಡಿದ್ದರು. ಆದರೆ
ಅಂದು ನಾಡದ್ರೋಹಿಗಳು ಅನುಮತಿ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ನಗರಾಭಿವೃದ್ಧಿ ಸಚಿವರು ಕರಾಳ ದಿನದಲ್ಲಿ ಪಾಲ್ಗೊಂಡ
ನಗರಸೇವಕರ ಮೇಲೆ ಕ್ರಮ ಕೈಗೊಳ್ಳುವುದಾಗಿ
ತಿಳಿಸಿದ್ದರು, ಆದರೆ ಇದುವರೆಗೂ ಯಾವುದೇ
ಕ್ರಮವಾಗಿಲ್ಲ. ಭಾಷೆ, ನಾಡವಿರೋಧ ಚಟುವಟಿಕೆ ನಡೆಸಿದ್ದಾರೆ. ಆದರೆ ಮತ್ತೇ ಅನುಮತಿ
ನೀಡುತ್ತಿರುವುದು ಯಾಕೆ ಎಂದು ಸಾರ್ವಜನಿಕರು
ಪ್ರಶ್ನೆ ಮಾಡುವಂತಾಗಿದೆ ಎಂದು ಹೇಳಿದರು.
ಎಂಇಎಸ್ನವರು ಕರಾಳ ದಿನಾಚರಣೆ ಆಚರಿಸುವುದು
ಕೇಂದ್ರ ಸಕರ್ಾರದ ವಿರುದ್ಧ ಅಂದ ಬಳಿಕ ರಾಜ್ಯೋತ್ಸವ
ನಡೆಯುವ ದಿನವೇ ಕರಾಳ ದಿನಕ್ಕೆ ಅನುಮತಿ
ನೀಡುವುದು ಎಷ್ಟು ಸರಿ ಎಂದು ಸಕರ್ಾರ
ಚಿಂತನೆ ನಡೆಸಬೇಕಿದೆ. ಕನ್ನಡಪರ ಸಂಘಟನೆ, ಸಾರ್ವಜನಿಕರ ಒತ್ತಾಯದ ಮೇಲೂ ಅನುಮತಿ ನೀಡಿದ್ದೇ
ಆದರೆ ಸಕರ್ಾರ, ಸಚಿವರು ಹಾಗೂ ಅಧಿಕಾರಿ ಕ್ರಮ
ಪ್ರಶ್ನಿಸಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ
ಹಿತಾಸಕ್ತಿ ಅಜರ್ಿ ದಾಖಲಿಸಲಾಗುವುದು ಎಂದರಲ್ಲದೇ ಮುಂದಾಗುವ ಅವಘಡಗಳಿಗೆ ಸಕರ್ಾರವೇ ನೇರ ಹೊಣೆ ಎಂದು
ಹೇಳಿದ್ದಾರೆ.