ಲೋಕದರ್ಶನ
ವರದಿ
ದಾಂಡೇಲಿ 20:
2017-18 ನೇ ಸಾಲಿನ ಸರಕಾರವು ತನ್ನ ಅವಧಿಯಲ್ಲಿ 50 ತಾಲೂಕುಗಳನ್ನು
ಘೋಷಣೆ ಮಾಡಿತ್ತು ಅದರಂತೆ ದಾಂಡೇಲಿಯು ಘೋಷಣೆಯಾದ ತಾಲೂಕುಗಳಲ್ಲಿ ಒಂದಾಗಿತ್ತು ಆದರೆ ತಾಲೂಕು ಘೋಷಣೆಯಾಗಿ
ಎರಡು ವರ್ಷ ಕಳೆಯುತ್ತ ಬಂದರು
ಸಹ ಕಾರ್ಯರೂಪಕ್ಕೆ ಬರದೆ ಜನಸಾಮಾನ್ಯರು ಮಾತ್ರ
ತಮ್ಮ ದಿನನಿತ್ಯದ ಕೆಲಸಗಳಿಗಾಗಿ ಹಳಿಯಾಳ ಮತ್ತು ಜೋಯಿಡಾಗೆ ಸುತ್ತುವುದು ಇನ್ನೂವರೆಗೂ ನಡೆದುಕೊಂಡು ಬಂದಿದೆ. ಈ ಸಮಸ್ಯೆಯನ್ನು ಮನಗಂಡ
ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯೂ ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆಯವರಿಗೆ
30-06-2018 ರಂದು ಮನವಿ ಸಲ್ಲಿಸಲಾಗಿತ್ತು. ಅಲ್ಲದೇ
ರಾಜ್ಯ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರಿಗೆ
ಸಮಿತಿಯಿಂದ 20-06-2018 ರಂದು ಮನವಿ ಸಲ್ಲಿಸಲಾಗಿತ್ತು.
ಅದರ ಪ್ರಕಾರ ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆಯವರು
09-07-2018 ರಂದು ಜಿಲ್ಲಾಧಿಕಾರಿ ಉತ್ತರಕನ್ನಡ ಇವರಿಗೆ ದಾಂಡೇಲಿ ತಾಲೂಕು ಎಂದು ನಮೂದಿಸಲು ಎಲ್ಲಾ
ಸರಕಾರಿ ಕಛೇರಿ, ಬ್ಯಾಂಕ್ ,ಅಂಚೆ ಕಛೇರಿ, ಶಾಲಾ
ಕಛೇರಿಗಳಲ್ಲಿ ಬೋರ್ಡ ಹಾಗೂ ಪತ್ರ ವ್ಯವಹಾರಗಳಲ್ಲಿ
ದಾಂಡೇಲಿ ತಾಲೂಕು ಎಂದು ನಮೂದಿಸಲು ಸೂಚಿಸಲಾಗಿತ್ತು.
ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ವಹಿಸದೇ ಇರುವುದರಿಂದ
ಮಂಗಳವಾರದಂದು ಸಂಘದ ಪದಾಧಿಕಾರಿಗಳು
ವಿಶೇಷ ತಹಶಿಲ್ದಾರ ಶೈಲೆಶ್ ಪರಮಾನಂದ ಇವರಿಗೆ ಭೇಟಿಯಾಗಿ ಆದಷ್ಟು ಬೇಗನೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಿ ಎಲ್ಲಾ ಕಛೇರಿಗಳ ಬೋರ್ಡ ಮೇಲೆ ಹಾಗೂ ಪತ್ರ
ವ್ಯವಹಾರಗಳಲ್ಲಿ ತಾಲೂಕನ್ನು ಕಾರ್ಯರೂಪಕ್ಕೆ ತರುವಂತೆ ಕೇಳಿಕೊಳ್ಳಲಾಯಿತು.
ಇದೇ
ಸಂದರ್ಭದಲ್ಲಿ ತಮ್ಮ ಕಛೇರಿಗೆ ಆಗಮಿಸಿದ
ಎಮ್.ಎಲ್.ಸಿ ಎಸ್.ಎಲ್.ಘೋಟ್ನೇಕರ ಇವರನ್ನು
ಸಮಿತಿಯ ಪದಾಧಿಕಾರಿಗಳು ಭೇಟಿಯಾಗಿ ಪಡಿತರ ಚೀಟಿ, ಉತ್ಪನ್ನ ಸಟರ್ಿಪಿಕೆಟ್, ಜಾತಿ ಪ್ರಮಾಣ ಪತ್ರ
ಮತ್ತು ಮತದಾರರ ಚೀಟಿ ಅಲ್ಲದೇ ಆಧಾರ
ಕಾಡರ್ಿನ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ ಕನರ್ಾಟಕ ಒನ್ ಇದರಲ್ಲಿ ಸುಮಾರು
30 ಸೇವೆ ಸಿಗಬೇಕಾಗಿತ್ತು ಆದರೆ ಇಲ್ಲಿ ಟೂಬ್
ಲಾಯಿಟ್ ಮಾರುವುದು ಮತ್ತು ಆಧಾರ ಕಾರ್ಡ ಬಿಟ್ಟರೆ
ಬೇರೆ ಯಾವ ಸೇವೆ ಸಿಗುತ್ತಿಲ್ಲ
ಎಂದು ಗಮನಕ್ಕೆ ತರಲಾಯಿತು. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಸಾರ್ವಜನಿಕರಿಗೆ ಸೇವೆ ಸರಿಯಾಗಿ ಸಿಗುತ್ತಿಲ್ಲ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಗದು
ಹಣ ಜಮಾ ಮಾಡುವ ವ್ಯವಸ್ಥೆ
ಇದ್ದರು ಸಹ ಅದು ಸಾರ್ವಜನಿಕರಿಗೆ
ಸೇವೆಗೆ ಸಿಗುತ್ತಿಲ್ಲ ಎಂದು ತಿಳಿಸಿದರು ಆಗ
ಎಸ್.ಎಲ್.ಘೋಟ್ನೇಕರವರು ಹಳಿಯಾಳ
ತಹಶೀಲ್ದಾರ ಇವರ ಜೊತೆಗೆ ಚಚರ್ೆ
ಮಾಡಿ ಸದ್ಯದ ಮಟ್ಟಿಗೆ ತಹಶಿಲ್ದಾರ ಕಚೇರಿ ಆಹಾರ ನೀರಿಕ್ಷಕರನ್ನು ವಾರದಲ್ಲಿ
ಎರಡು ದಿನ ದಾಂಡೇಲಿ
ತಹಶೀಲ್ದಾರ ಕಾಯರ್ಾಲಯಕ್ಕೆ ಬಂದು ಸಾರ್ವಜನಿಕ ಬೇಡಿಕೆಗಳಿಗೆ
ಕ್ರಮವಹಿಸಲು ತಿಳಿಸಿದರು. ಅಲ್ಲದೇ ಕಂದಾಯ ಸಚಿವರಾದ ದೇಶಪಾಂಡೆಯವರ ಜೊತೆ ಚಚರ್ೆ ಮಾಡಿ
ದಾಂಡೇಲಿ ತಾಲೂಕಿನ ಕಛೇರಿ ಬಗ್ಗೆ ಕ್ರಮವಹಿಸುವ ಭರವಸೆಯನ್ನು ನೀಡಿದರು ಅಲ್ಲದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕ್
ಮ್ಯಾನೇಜರ್ಗೆ ಪೋನ್ ಮೂಲಕ ಸಂಪರ್ಕ
ಮಾಡಿ ಸಾರ್ವಜನಿಕರಿಗೆ ನಗದು ಹಣ ಜಮಾ
ಮಾಡುವ ಯಂತ್ರದ
ವ್ಯವಸ್ಥೆಯು ಸಿಗುವ ರೀತಿಯಲ್ಲಿ ಕ್ರಮ ವಹಿಸುವ ಬಗ್ಗೆ
ತಿಳಿಸಿದಾಗ 15 ದಿನಗಳಲ್ಲಿ ವ್ಯವಸ್ಥೆ ಮಾಡುವುದಾಗಿ ಮ್ಯಾನೇಜರ್ ತಿಳಿಸಿದರು. ಸಂಘದ ಅಧ್ಯಕ್ಷರಾದ ಅಕ್ರಮ್.ಎ.ಖಾನ್ ಇವರ
ನೇತೃತ್ವದಲ್ಲಿ ಚಚರ್ೆ ನಡೆಸಲಾಯಿತು. ಸಂಘದ ಪದಾಧಿಕಾರಿಗಳಾದ ಬಲವಂತ
ಬೊಮ್ಮನಹಳ್ಳಿ, ಫೀರೊಜ್ ಫೀರಜಾದೆ, ಅಶೋಕ ಪಾಟೀಲ, ಸಿ.ಎ.ಲೊಬೋ, ಗೌರೀಶ
ಬಾಬರೇಕರ್, ಅಬ್ದುಲ್ ವಾಹಬ ಬಾಂಸರಿ, ಸತೀಶ
ನಾಯ್ಕ, ರಾಜೇಂದ್ರ ಸೋಲಾಪುರಿ, ರಫೀಕ ಹುದ್ದಾರ, ಇನ್ನಿತರು
ಉಪಸ್ಥಿತರಿದ್ದರು.