ಪಿಕೆಪಿಎಸ್ ಅಧ್ಯಕ್ಷರಾಗಿ ದಳವಾಯಿ, ಉಪಾಧ್ಯಕ್ಷರಾಗಿ ಮುರಗಟ್ಟಿ ಆಯ್ಕೆ

Dalvai elected as PKPS President, Muragatti as Vice President

ಪಿಕೆಪಿಎಸ್ ಅಧ್ಯಕ್ಷರಾಗಿ ದಳವಾಯಿ, ಉಪಾಧ್ಯಕ್ಷರಾಗಿ ಮುರಗಟ್ಟಿ ಆಯ್ಕೆ 

ಯರಗಟ್ಟಿ 11: ಸಮೀಪದ ಮುಗಳಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಸಪ್ಪ ದಳವಾಯಿ, ಉಪಾಧ್ಯಕ್ಷರಾಗಿ ಗೋವಿಂದಪ್ಪ ಮುರಗಟ್ಟಿ ಆಯ್ಕೆಯಾದರು.  

ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಅತಿ ವಿಜೃಂಭಣೆಯಿಂದ ಪಟಾಕಿ, ಗುಲಾಲ್ ಹಚ್ಚಿ ಸಂಭ್ರಮಿಸಿದರು.ಬೆಳಗಾವಿ ಕೆಎಂಎಫ್ ನಿರ್ದೇಶಕರಾದ ಶಂಕರ್ ಇಟ್ನಾಳ್, ಮುಗಳಿಹಾಳ ಕೆಎಂಎಫ್ ಅಧ್ಯಕ್ಷ ಯಮನಪ್ಪ ಹುಲಕುಂದ, ಎಪಿಎಂಸಿ ಸದಸ್ಯರಾದ ಲಕ್ಷ್ಮಣ ದಳವಾಯಿ, ರಾಮಣ್ಣ ದಳವಾಯಿ, ಮುತ್ತು ಅಣ್ಣಿಗೇರಿ, ಗ್ರಾ ಪ. ಮಾಜಿ ಅಧ್ಯಕ್ಷರಾದ ವಿಠ್ಠಲ ದಳವಾಯಿ, ಪಂಚಾಕ್ಷರಿ ಪಟ್ಟಣಶೆಟ್ಟಿ, ಬಸಪ್ಪ ಹಾದಿಮನಿ, ಬಸಪ್ಪ ಅರಭಾವಿ, ಮಾರುತಿ ಅರಭಾವಿ, ಬಸಪ್ಪ ಮಾಯನ್ನಿ, ಗೋಪಾಲ ದಳವಾಯಿ, ನಾಗರಾಜ ದೇಸಾಯಿ, ಬಸವರಾಜ ಪಾರಿವಾಳ, ನಿಂಗಪ್ಪ ದಳವಾಯಿ, ಯಲ್ಲಪ್ಪ ಪೂಜೆರ, ಉದ್ದವ್ವ ಪಾರಿವಾಳ, ಬಸವರಾಜ ಹಸಬಿ, ಯಲ್ಲಪ್ಪ ಬಾವಿಕಟ್ಟಿ, ವಿಠ್ಠಲ ಮಾಲದಿನ್ನಿ, ಭೀಮಪ್ಪ ಕೌಜಲಗಿ, ಮತ್ತಿತರರು ಹಿರಿಯರು, ಯುವಕರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.