ಧಾರವಾಡ: ಭಾರತ ಚುನಾವಣಾ ಆಯೋಗದ ನಿದರ್ೇಶನದನ್ವಯ ಧಾರವಾಡ ಜಿಲ್ಲೆಯಲ್ಲಿನ 7 ವಿಧಾನಸಭಾ ಮತಕ್ಷೇತ್ರಗಳ ಮತದಾರರ ಯಾದಿಯ ವಿಶೇಷ ಪರಿಷ್ಕರಣೆ, 2019- ನೇದ್ದಕ್ಕೆ ಸಂಬಂಧಿಸಿದಂತೆ ಅರ್ಹತಾ ದಿನಾಂಕ ಜನೇವರಿ 1, 2019 ಕ್ಕೆ ಇದ್ದಂತೆ ಮತದಾರರ ವಿಶೇಷ ನೋಂದಣಿ ಅಭಿಯಾನವನ್ನು ಫೆ. 23, 24, 2019 ರಂದು ಹಾಗೂ ಮಾರ್ಚ 2, 2019 ಮತ್ತು ಮಾರ್ಚ 3, 2019 ರಂದು ಏರ್ಪಡಿಸಿದ್ದು ಇರುತ್ತದೆ.
ಸದರಿ ವಿಶೇಷ ನೋಂದಣಿ ಕಾಯರ್ಾಕ್ರಮದಲ್ಲಿ ಜಿಲ್ಲೆಯ ಎಲ್ಲ ಏಳು ವಿಧಾನಸಭಾ ಮತಕ್ಷೇತ್ರಗಳನ್ನೊಳಗೊಂಡಂತೆ ಒಟ್ಟು 1634 ಮತಗಟ್ಟೆಗಳಿದ್ದು, ಸದರಿ ಎಲ್ಲ ಮತಗಟ್ಟೆಗಳಿಗೆ ಒಬ್ಬ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗಳಲ್ಲಿ ಮತದಾರರ ವಿಶೇಷ ನೋಂದಣಿ ಅಭಿಯಾನ ದಿನಗಳಂದು ಲಭ್ಯವಿರುತ್ತಾರೆ.
ಸಾರ್ವಜನಿಕರು ಮತದಾರರ ಯಾದಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ತೆಗೆದುಹಾಕುವಿಕೆ ಹಾಗೂ ಸ್ಥಳಾಂತರಕ್ಕಾಗಿ ನಿಗಧಿತ ನಮೂನೆಗಳನ್ನು ಭರಿಸಿ ಸಲ್ಲಿಸಬಹುದಾಗಿದೆ. ಹೆಸರು ಸೇರ್ಪಡೆಗೆ ನಮೂನೆ-6, ಹೆಸರು ತೆಗೆದುಹಾಕುವಿಕೆಗೆ ನಮೂನೆ-7, ತಿದ್ದುಪಡೆಗೆ ನಮೂನೆ-8, ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ವಿಳಾಸ ಬದಲಾವಣೆಗೆ ನಮೂನೆ-8ಎ ನೇದ್ದನ್ನು ಭತರ್ಿಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.
ಸಾರ್ವಜನಿಕರು ಫೆ. 23, 24, 2019 ರಂದು ಹಾಗೂ ಮಾರ್ಚ 2, 2019 ಮತ್ತು ಮಾರ್ಚ 3, 2019 ರಂದು ರಂದು ನಡೆಯಲಿರುವ ಮತದಾರರ ವಿಶೇಷ ನೋಂದಣಿ ಅಭಿಯಾನದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.