ಡಿ. 29ರಿಂದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

ಗದಗ 14:     ಡಿಸೆಂಬರ್ 29, 20 ಹಾಗೂ 31ರಂದು  ಗದುಗಿನ  ಮುಂಡರಗಿ ರಸ್ತೆಯಲ್ಲಿನ   ಜೆ.ಟಿ. ಇಂಜನೀಯರಿಂಗ್ ಕಾಲೇಜ್ ಆವರಣದಲ್ಲಿರುವ ಗುರುಬಸವ ಪ್ರೌಢಶಾಲೆಯಲ್ಲಿ ಜರುಗಲಿರುವ  ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ವ್ಯವಸ್ಥಿತವಾಗಿ ಯಶಸ್ವಿಯಾಗಿ ನಡೆಯುವಂತೆ ಅಗತ್ಯದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ  ಅವರು  ನಿದರ್ೇಶನ ನೀಡಿದರು. 

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಕುರಿತ ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.    ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ವಿದ್ಯಾಥರ್ಿ ಮತ್ತು ಶಿಕ್ಷಕರಿಗೆ ವಸತಿ, ಉಟೋಪಹಾರದ ವ್ಯವಸ್ಥೆಯಲ್ಲಿ ಯಾವದೇ ಗೊಂದಲ ಅಸ್ತವ್ಯಸ್ಥತೆ ಇರಬಾರದು, ವಸತಿ ಮತ್ತು ವಿಜ್ಞಾನ ವಸ್ತು ಪದರ್ಶನ ಸ್ಥಳಗಳಲ್ಲಿ ಸ್ವಚ್ಛತೆ ಮತ್ತು ಶಿಸ್ತು ಇರುವಂತೆ ನೋಡಿಕೊಳ್ಳಬೇಕು.   ವಸ್ತುಪ್ರದರ್ಶನ ಸ್ಥಳದಲ್ಲಿ ಆರೋಗ್ಯ ಇಲಾಖೆ ವೈದ್ಯರ, ಆರೋಗ್ಯ ಸಿಬ್ಬಂದಿ ಮತ್ತು ಆವಶ್ಯಕ ಔಷಧಿಗಳಿರುವ ವೈದ್ಯಕೀಯ ಘಟಕ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

8ರಿಂದ 10ನೇ ತರಗತಿಯ ವಿವಿಧ ಜಿಲ್ಲೆಗಳ ವಿದ್ಯಾಥರ್ಿಗಳು ಇದರಲ್ಲಿ ಭಾಗವಹಿಸುವರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇವರ ವಸತಿಗೆ ನಿತ್ಯ ಅಗತ್ಯಗಳ ಸೌಕರ್ಯಗಳ ಇರುವ ಕ್ರೀಡಾಂಗಣ, ವಸತಿನಿಲಯ, ಯಾತ್ರಿ ನಿವಾಸಗಳನ್ನು ಆಯ್ಕೆ ಮಾಡಲಾಗಿದೆ. ವಸತಿ ಸ್ಥಳದಿಂದ ವಸ್ತುಪ್ರದರ್ಶನ ಸ್ಥಳಕ್ಕೆ ಸಾರಿಗೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಉಟೋಪಹಾರದ ವ್ಯವಸ್ಥೆ ಕೂಡಾ  ಮಾಡಲಾಗುತ್ತಿದೆ  ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಜಿ.ಎಲ್. ಬಾರಾಟಕ್ಕೆ ತಿಳಿಸಿದರು.

       ಸಭೆಯಲ್ಲಿ ಅಮಂತ್ರಣ ಪತ್ರಿಕೆ,  ಕುಡಿಯುವ ನೀರಿನ ಪೂರೈಕೆ,   ನಗರದ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಅಳವಡಿಕೆ,   ಅಗತ್ಯದ ಪೊಲೀಸ ಬಂದೋಬಸ್ತ, ವಿದ್ಯುತ ಪೂರೈಕೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಎಪರ್ಾಡು ಮುಂತಾದ ವಿಷಯಗಳ ಕುರಿತು ಚಚರ್ೆ ನಡೆಸಲಾಯಿತು. 

      ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಜಿ.ಎಲ್. ಬಾರಾಟಕ್ಕೆ,   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಶರಣು ಗೋಗೇರಿ, ಗದಗ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ, ವಿವಿಧ ಇಲಾಖೆಗಳ ಅಧಿಕಾರಿಗಳು   ಸಭೆಯಲ್ಲಿ ಭಾಗವಹಿಸದ್ದರು.

       ಡಯಟ್ದ ಹಿರಿಯ ಉಪನ್ಯಾಸಕರಾದ ಎಸ್.ಆರ್. ಹೂಗಾರ  ಸ್ವಾಗತಿಸಿದರು.  ಡಯಟ್ದ ಪ್ರಭಾರಿ ಪ್ರಾಚಾರ್ಯರಾದ   ಎಚ್.ಎಮ್. ಖಾನ್  ವಂದಿಸಿದರು.