ಧ. ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ-ಐ.ಸಿ.ಟಿ,ಅಕ್ಯಾಡಮಿ ಒಡಂಬಡಿಕೆ

ಧಾರವಾಡ 29: ಧಾರವಾಡ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ಭಾರತ ಸಕರ್ಾರದ ಐ.ಸಿ.ಟಿ, ಅಕ್ಯಾಡಮಿಯೊಂದಿಗೆ ಹೊಸ ಒಡಂಬಡಿಕೆಯನ್ನು ದಿ. 28ರಂದು ಮಾಡಿಕೊಂಡಿತು. ಈ ಒಡಂಬಡಿಕೆಯು ವಿದ್ಯಥರ್ಿಗಳಿಗೆ ಮತ್ತು ಶಿಕ್ಷಕ ಸಿಬ್ಬಂದಿಗೆ ಹೆಚ್ಚು ಅನುಕೂಲವಾಗಲಿದೆ. ಶಿಕ್ಷಕ ಸಿಬಂದಿಯೂ ಕೌಶಲ್ಯವೃದ್ಧಿಯನ್ನು ಹೆಚ್ಚಿಸಿಕೊಳ್ಳಲು ಉದ್ಯಮಿಗಳೊಂದಿಗೆ ಬಾಂಧವ್ಯ ಬೆಸೆಯಲು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಾಯವಾಗಲಿದೆ. ಕೇಂದ್ರ ಸಕರ್ಾರದ ಐ.ಸಿ.ಟಿ, ಅಕ್ಯಾಡಮಿಯು ಕೌಶಲ್ಯದ ಬೇಡಿಕೆಯನ್ನು ಹೆಚ್ಚಿಸುವುದು ಮತ್ತು ಉದ್ಯೋಗ ವೃದ್ಧಿಗೆ ಸಹಾಯಕವಾಗಿ ಕೆಲಸ ಮಾಡುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾರತ ಎರಡನೇ ಮತ್ತು ಮೂರನೇ ದಜರ್ೆಯ ನಗರಗಳ ಯುವಕರ ಕೌಶಲ್ಯ ವರ್ಧನೆಗೆ ಮತ್ತು ಉದ್ಯೋಗಗಳನ್ನು ಸೃಷ್ಠಿಸಲು ಪೂರಕ ಕೆಲಸವನ್ನು ಮಾಡುತ್ತಿದೆ.

ಕೇಂದ್ರ ನೀತಿ ಆಯೋಗದ ನಿದರ್ೇಶನದ ಅನುಸಾರ ಐ.ಸಿ.ಟಿ,ಅಕ್ಯಾಡಮಿಯು ದೇಶದೆಲ್ಲಡೆ ತನ್ನ ವ್ಯಾಪ್ತಿಯನ್ನು ಉನ್ನತ್ತ ಶಿಕ್ಷಣ ಸಂಸ್ಥೆಗಳ ಮೂಲಕ ವಿಸ್ತರಿಸುತ್ತಿದೆ.

ಒಡಂಬಡಿಕೆಯ ಪತ್ರಕ್ಕೆ ಸಂಸ್ಥೆಯ ಮುಖ್ಯಸ್ಥ ಡಾ. ಎಸ್. ಬಿ.ವಣಕುದುರೆ ಮತ್ತು ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ.ಕುಲಕಣರ್ಿ ಹಾಗೂ ಸರಕಾರದ ಪರವಾಗಿ ಡಿ. ವಿಷ್ಣುಪ್ರಸಾದ ಸಹಿ ಮಾಡಿದರು. ಐ.ಸಿ.ಟಿ,ಅಕ್ಯಾಡಮಿಚಿು ರಾಜ್ಯ ಘಟಕದ ಮುಖ್ಯಸ್ಥ ಡಿ. ವಿಷ್ಣುಪ್ರಸಾದ ಮಾತನಾಡಿ, ಸಕರ್ಾರದಿಂದ ಸಾಧ್ಯವಿರುವ ಎಲ್ಲ ಸಹಾಯ ಸಹಕಾರಗಳನ್ನು  ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,  ಧಾರವಾಡಕ್ಕೆ ಒದಗಿಸುವುದಾಗಿ ಭರವಸೆಯನ್ನಿತ್ತರು. ಶಿಕ್ಷಕ ಮತ್ತು ವಿದ್ಯಾಥರ್ಿ ವೃಂದಕ್ಕೆ ಜಾಗತಿಕ ಮಟ್ಟದ ತರಬೇತಿ ಮತ್ತು ವಿವಿಧ ಕೌಶಲ್ಯ ವರ್ಧನೆಯ ತರಬೇತಿಗಳನ್ನು ಕೊಡುವುದಾಗಿ ಹೇಳಿದರು. ಇದು ಮೊದಲ ಹೆಜ್ಜೆಯಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.