ಲೋಕದರ್ಶನ ವರದಿ
ಬಳ್ಳಾರಿ 09: ಹೈದರಾಬಾದ್ ಕನರ್ಾಟಕ ಪ್ರದೇಶದಲ್ಲಿ ಖಾಲಿ ಇರುವ ಪದವಿದರ ಶಿಕ್ಷಕರ ಹುದ್ದೆಗಳ ಭತರ್ಿಗೆ ಒತ್ತಾಯಿಸಿ ಹೈ.ಕ ನಿರುದ್ಯೋಗಿ ಪದವಿದರ ಶಿಕ್ಷಕರ ಸಂಘ ಡಿ.12ರಂದು ಬೆಳಗಾವಿ ಚಲೋ ಹಮ್ಮಿಕೊಂಡಿದೆ. ಈ ಕುರಿತು ಪತ್ರಿಕಾಗೋಷ್ಟಿ ನಡೆಸಿದ ಹೈ.ಕ ಹೋರಾಟ ಸಮಿತಿ ಮುಖಂಡ ಪಿ.ಜಿ.ವಿಠ್ಠಲ್ ಸರಕಾರದಿಂದ ಆರಂಭದಿಂದಲೂ 371ಜೆ ಅನುಷ್ಟಾನ ಮಾಡಲು ವಿಳಂಬ ದೋರಣೆ ಮತ್ತು ಅನ್ಯಾಯ ಮಾಡುತ್ತಲೆ ಬಂದಿದೆ. 2012ರಿಂದ ಇಲ್ಲಿಯವರೆಗೆ 6,550 ಕೋಟಿ ರೂ ಬಿಡುಗಡೆಯಾಗಿದ್ದರೂ ಈ ವರೆಗೆ ಮಾಡಿದ ವೆಚ್ಚ ಕೇವಲ 3,550 ಕೋಟಿ ಮಾತ್ರ. ಇನ್ನು ಉದ್ಯೋಗ ನೀಡಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂದು ನೇರವಾಗಿ ಆರೋಪಿಸಿದರು.
ಅವರು 2017ರಲ್ಲಿ ಪದವಿದರ ಶಿಕ್ಷಕರ ನೇಮಕಾತಿಯಲ್ಲಿ ಕೇವಲ 4 ಸಾವಿರ ಹುದ್ದೆಗಳ ಭತರ್ಿಗೆ ಅಜರ್ಿ ಕರೆದಿತ್ತು. ಆದರೆ ಕಠಿಣವಾದ ನಿಯಮಗಳನ್ನು ಅನುಸರಿಸಿ ಕೇವಲ 335 ಹುದ್ದೆಗಳನ್ನು ಮಾತ್ರ ಭತರ್ಿ ಮಾಡಿದೆ. ನೇಮಕಾತಿ ನಿಯಮ ಸಡಿಲಗೊಳಿಸಲು ಕಾನೂನು ಇಲಾಖೆ ಒಪ್ಪಿದರೂ ನೇಮಕಾತಿಗೆ ವಿಳಂಬಮಾಡುತ್ತಿದೆ. ಕಳೇದ ಜುಲೈ 17ರಂದು ರಾಜ್ಯಪಾಲರು ಈ ಕುರಿತು ಆದೇಶ ಹೊರಡಿಸಿದ್ದರೂ ಅನುಷ್ಟಾನಕ್ಕೆ ಮುಂದಾಗಿಲ್ಲ. ಅದಕ್ಕಾಗಿ ರಾಜ್ಯಪಾಲರ ಆದೇಶ ಒಂದು ತಿಂಗಳಲ್ಲಿ ಜಾರಿಗೆ ಮಾಡಲು ಆಗ್ರಹಿಸಿ ಡಿ.12 ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ನಿರುದ್ಯೋಗಿ ಪದವಿದರ ಶಿಕ್ಷಕರ ಸಂಘದ ಮುಖ್ಯಸ್ಥ ಸುದಾಕರ್ ಪಾಟಿಲ್ ಮಾತನಾಡಿ ಶಿಕ್ಷಕರ ನೇಮಕಾತಿಗೆ ಟಿ.ಇ.ಟಿ ಅರ್ಹತೆಯ ಜೊತೆಗೆ ಸಿಇಟಿ ಕೇಳುತ್ತಿದೆ. ವಿನಾಕಾರಣ ಈ ಭಾಗದ ಹುದ್ದೆಗಳ ಭತರ್ಿಗೆ ಅಧಿಕಾರಿಗಳು ನಿರ್ಲಕ್ಷದೋರಣೆ ತಾಳಿದ್ದಾರೆಂದು ಆರೋಪಿಸಿದರು. ಈ ಸುದ್ದಿಗೋಷ್ಟಿಯಲ್ಲಿ ನಿರುದ್ಯೋಗಿ ಪದವಿದರ ಶಿಕ್ಷಕರ ಸಂಘದ ಸುದಕರ್ ಪಾಟಿಲ್, ಚಂದ್ರಶೇಖರಗೌಡ, ವಸಂತಕುಮಾರ, ರಂಗಸ್ವಾಮಿ, ಬಿ.ಸಿ ಪಾಟಿಲ್, ಶೇಖಪ್ಪ ಹಾಗೂ ಹೈ.ಕ ಭಾಗದ ಹೋರಾಟಗಾರರಾದ ಚಾಗನೂರು ಮಲ್ಲಿಕಾಜರ್ುನರೆಡ್ಡಿ, ಉಪಸ್ಥಿತರಿದ್ದರು.