ಗದಗ 20: ಗದಗ ಜಿಲ್ಲೆಯಲ್ಲಿ ವಿಶ್ವ ಶೌಚಾಲಯ ದಿನಾಚರಣೆಯ ಕುರಿತು ಆಚರಣೆ ದಿ. 19ರಂದು ಮಾಡಲಾಯಿತು.
ಗದಗ ಬೆಟಗೇರಿ ಲೋಯಲಾ ಕಾನ್ವೆಂಟ್ ಶಾಲೆಯಿಂದ ಮಕ್ಕಳಿಂದ ಸೈಕಲ್ ಜಾಥಾ ಏರ್ಪಡಿಸಲಾಯಿತು. ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಮಂಜುನಾಥ ಚವ್ಹಾಣ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಹಾಗೂ ಶಾಲೆಯ ಮಕ್ಕಳಿಗೆ ಸ್ವಚ್ಚತೆಯ ಕುರಿತು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಪಂಚಾಯತ ಉಪಕಾರ್ಯದಶರ್ಿಗಳಾದ ಎಸ್. ಸಿ. ಮಹೇಶ ಸಹಾಯಕ ಕಾರ್ಯದಶರ್ಿಗಳಾದ ಸಿ. ಆರ್. ಮುಂಡರಗಿ ಹಾಗೂ ಗದಗ ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿಗಳಾದ ಡಾ. ಹೆಚ್. ಎಸ್. ಜನಗಿ ಲೋಯಲಾ ಕಾನ್ವೆಂಟ್ ಪ್ರಾಚಾರ್ಯರಾದ ಸಿಸ್ಟರ್ ಸಿಸಿಲಿಯಾ ಸಾಂಕ್ಟಿಸ್ ಹಾಗೂ ಸ್ವಚ್ಚ ಭಾರತ ಮಿಷನ್ ಜಿಲ್ಲಾ ಸಮಾಲೋಚಕರಾದ. ಕೃಷ್ಣಾ. ಎಲ್. ದೊಡ್ಡಮನಿ, ಹೆಚ್. ಎಫ್. ಕುಸಣ್ಣವರ ಹಾಗೂ ಸುರೇಶ ಕಪ್ಪತ್ತನವರ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಸೈಕಲ್ ಜಾಥಾ ಲೋಯಲಾ ಕಾನ್ವೆಂಟ್ ಶಾಲೆಯಿಂದ ಪ್ರಾರಂಭವಾಗಿ ಗದಗ ಮುನ್ಸಿಪಲ್ ಶಾಲೆಯ ಆವರಣದಲ್ಲಿ ವಿವಿಧ ಶಾಲೆಯ ಮಕ್ಕಳು ಉಪಸ್ತಿತರಾಗಿ ಸೈಕಲ್ ರ್ಯಾಲಿಯು ಗಾಂಧಿ ಸರ್ಕಲ್ ಮಾರ್ಗವಾಗಿ ಟಾಂಗಾ ಕೂಟ್, ಬಸವೇಶ್ವರ ಸರ್ಕಲ್, . ಕೆ. ಹೆಚ್. ಪಾಟೀಲ್ ವೃತ, ಭೂಮರೆಡ್ಡಿ ಸರ್ಕಲ್ ಮಾರ್ಗವಾಗಿ ಕ್ರಿಡಾಂಗಣಕ್ಕೆ ತಲುಪಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.