ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಜೊತೆಗೆ ಸಂಸ್ಕೃತಿಯನ್ನು ಉಳಿಸಬೇಕು: ಮಂಜುನಾಥ ಮರಿತಮ್ಮಣ್ಣನವರ
ಮಂಡಗೋಡ 25: ಶಿಕ್ಷಣ ಇಲಾಖೆ ಆದೇಶದಂತೆ ತಾಲೂಕಿನ ಎಲ್ಲಾ ಪ್ರೌಢಶಾಲಾ ಇಂಗ್ಲಿಷ ಭಾಷಾ ಶಿಕ್ಷಕರಿಗೆ ಇಂಗ್ಲಿಷ ಕಾರ್ಯಗಾರವನ್ನು ಆದಿ ಜಾಂಬವ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್ ಪಕೀರ್ಪನವರು ಉದ್ಘಾಟನೆ ಮಾಡಿ ತಾಲೂಕಿನ ಎಲ್ಲಾ ಪ್ರೌಢಶಾಲೆಯ ಇಂಗ್ಲಿಷ್ ಭಾಷೆ ಶಿಕ್ಷಕರು ಈ ಕಾರ್ಯಕ್ರಮದ ಹಾಜರಿದ್ದು ವರ್ಗ ಕೋಣೆಯಲ್ಲಿ ಪಾಠ ಮಾಡುವಾಗ ಬರುವ ಕ್ಲಿಷ್ಟತೆಯನ್ನು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಉತ್ತೀರ್ಣರಾಗಲು ಯಾವ ರೀತಿ ಪ್ರಯತ್ನಿಸಬೇಕು ಎಂಬ ಕುರಿತು ಚರ್ಚಿಸುವ ಸಲುವಾಗಿ ಎಲ್ಲಾ ಶಿಕ್ಷಕರು ನಮ್ಮ ಶಾಲೆಗೆ ಆಗಮಿಸಿ ಇಲಾಖೆ ನಿರ್ದಿಷ್ಟ ಪಡಿಸಿದ ವಿಷಯದ ಕುರಿತು ಚರ್ಚಿಸಿ ವಿದ್ಯಾರ್ಥಿಗಳ ಸರ್ವತೋಭಿವೃದ್ಧಿಗೆ ತಾವು ಶ್ರಮಿಸಬೇಕು ಹಾಗೂ ವಿದ್ಯಾರ್ಥಿಗಳ ಮಟ್ಟಕ್ಕೆ ಇಳಿದು ಇಂಗ್ಲಿಷ್ ಭಾಷೆಯನ್ನು ಕಲಿಸಬೇಕು ಆಗ ಮಾತ್ರ ಮಕ್ಕಳು ಇಂಗ್ಲಿಷ ಭಾಷೆಯನ್ನು ಸುಲಭವಾಗಿ ಕಲಿಯಲು ಸಾಧ್ಯವಾಗುತ್ತದೆ. ಶಿಕ್ಷಕರು ಹೆಚ್ಚಿನ ರೀತಿಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಿದರೆ ಫಲಿತಾಂಶ ಹೆಚ್ಚಿಸಲು ಸಾಧ್ಯವಾಗುತ್ತದೆ ಮತ್ತು ಇಂಗ್ಲೀಷ್ ಭಾಷೆ ಕಲಿಕೆಯಲ್ಲಿ ಆಸಕ್ತಿ ಬರಲು ಸಹಾಯಕವಾಗುತ್ತದೆ ಆ ನಿಟ್ಟಿನಲ್ಲಿ ಇಂಗ್ಲೀಷ ಭಾಷೆ ಶಿಕ್ಷಕರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಮರಿತಮ್ಮಣ್ಣನವರ ಮಾತನಾಡುತ್ತಾ ಇಂಗ್ಲೀಷ ಅಂತರಾಷ್ಟ್ರೀಯ ಮಟ್ಟದ ಭಾಷೆಯಾಗಿದ್ದು ಅದನ್ನು ಎಲ್ಲಾ ಮಕ್ಕಳಿಗೆ ತಿಳಿಸುವುದು ದೊಡ್ಡ ಸವಾಲಾಗಿದೆ ಅಲ್ಲದೆ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಜೊತೆಗೆ ಸಂಸ್ಕೃತಿಯನ್ನು ಉಳಿಸಬೇಕು. ಇಂಗ್ಲಿಷ್ ನಲ್ಲಿ ಬರುವ ಮೂಲಾಕ್ಷರಗಳು ಪರಿಚಯಿಸುವಾಗ ಶಿಕ್ಷಕರು ಂ ಫಾರ್ ಆಪಲ್ ಬದಲಾಗಿ ಅಂಬೇಡ್ಕರ್ ಅಂತ ಅವರ ಕಾನೂನುಗಳನ್ನು ತಿಳಿಸಬೇಕು ಃ ಬಿ ಫಾರ್ ಬಾಲ್ ಬದಲಾಗಿ ಬಸವಣ್ಣನವರ ಸಮಾನತೆ ಗುಣವನ್ನು ಪರಿಚಯಿಸಬೇಕು ಅ ಫಾರ್ ಕ್ಯಾಟ್ ಬದಲಾಗಿ ಕಿತ್ತೂರು ರಾಣಿ ಚೆನ್ನಮ್ಮ ಶೌರ್ಯವನ್ನು ಮಕ್ಕಳಿಗೆ ತಿಳಿಸಬೇಕು ಆ ಫಾರ್ ಡಾಗ್ ಬದಲಾಗಿ ಧರ್ಮರಾಯ ರವರ ಉತ್ತಮ ಗುಣಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಇಂಗ್ಲೀಷ್ ಭಾಷೆಯನ್ನು ಪರಿಚಯಿಸಬೇಕು ಇಂಗ್ಲೀಷ್ ಭಾಷೆ ಜೊತೆ ಜೊತೆಗೆ ಕನ್ನಡ ಸಂಸ್ಕೃತಿ ಉಳಿಸಿದಂತಾಗುತ್ತದೆ ಎಂದು ಹೇಳಿದರು. ಶಿರಸಿ ಶೈಕ್ಷಣಿಕ ಜಿಲ್ಲಾಪ್ರೌಢಶಾಲಾ ಮುಖ್ಯ ದ್ಯಾಪಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಎಸ್ ಡಿ ಮುಡೆಣ್ಣವರ ಪ್ರಾಸ್ತವಿಕವಾಗಿ ಮಾತನಾಡುತ್ತಾ ಪ್ರತಿ ಕಾರ್ಯಾಗಾರದಲ್ಲಿ ಯೋಜನಾ ಬದ್ಧವಾಗಿ ನಾವು ಕಾರ್ಯಗಾರವನ್ನು ಮಾಡುತ್ತಿದ್ದು ಕಾರ್ಯಗಾರದಲ್ಲಿ ಎಲ್ಲ ಶಿಕ್ಷಕರಿಗೆ ಪಾಠ ಹಂಚಿಕೆ ಮಾಡಿದ್ದು ಆ ಪಾಠದಲ್ಲಿ ಬರುವ ಕ್ಲಿಷ್ಟಕರ ಅಂಶಗಳನ್ನು ಟಿಪ್ಪಣಿ ಮಾಡಿಕೊಂಡು ಎಲ್ಲರೂ ಮಧ್ಯೆ ಓದಿ ಅದರ ಅರ್ಥವನ್ನು ತಿಳಿಸುವಂತೆ ಮಾಡಿದ್ದೇವೆ. ಅಲ್ಲದೆ ಈ ವರ್ಷದಲ್ಲಿ ಒಟ್ಟು ನಾಲ್ಕು ಕಾರ್ಯಗಳು ಮಾಡಿದ್ದು ಹಿಂದಿನ ಕಾರ್ಯಗಾರದಲ್ಲಿ ಮೂರು ವಿಶೇಷವಾದಂತಹ ಮಾದರಿ ಪ್ರಶ್ನೆ ಪತ್ರಿಕೆ ತಯಾರಿ ಮಾಡಿದ್ದೇವೆ ವಿವಿಧ ರೀತಿಯ ಯೋಜನೆಗಳನ್ನು ನಿರ್ವಹಿಸುತ್ತಾ ಬಂದಿದ್ದೇವೆ. ಇಂಗ್ಲೀಷ ಭಾಷೆ ಕಲಿಕೆಯಲ್ಲಿ ಶಿಕ್ಷಕರು ಕ್ರಮಬದ್ಧವಾಗಿ ಪಾಠ ನಿರ್ವಹಣೆ ಮಾಡಿದರೆ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಪಲಿತಾಂಶ ಮಾಡಲು ಸಹಕರಿಸುತ್ತದೆ ಎಂದು ಪ್ರಾಸ್ಥಾಮಿಕವಾಗಿ ಮಾತನಾಡಿದರು. ಮುಂಡಗೋಡ್ ತಾಲೂಕಿನ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳಾದ ಶ್ರೀ ನಾಗರಾಜ ನಾಯ್ಕ ಮಾತನಾಡುತ್ತಾ ಇಂಗ್ಲಿಷ್ ವಿಷಯ ಶಿಕ್ಷಕರು ಮಕ್ಕಳ ಅಳಕ್ಕೆ ಇಳಿದು ಬೋಧಿಸಬೇಕು. ಇಲಾಖೆಯ ಆದೇಶದಂತೆ ಇಂದು ಇಂಗ್ಲೀಷ್ ಭಾಷಾ ಶಿಕ್ಷಕರ ಕಾರ್ಯಗಾರವನ್ನು ಹಮ್ಮಿಕೊಂಡಿದ್ದೇವೆ. ಎಲ್ಲ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯಗಳನ್ನು ವರ್ಗ ಕೋಡಿಯಲ್ಲಿ ಮಕ್ಕಳಿಗೆ ತಿಳಿಸಬೇಕು ಎಂದರು. ಶ್ರೀಮತಿ ಸವಿತಾ ವೇರ್ಣೇಕರ ಅವರು ಮಾತನಾಡುತ್ತಾ ಇಲಾಖೆ ಆದೇಶದಂತೆ ಎಂದು ನಾವು ಕಾರ್ಯಗಾರ ಹಮ್ಮಿಕೊಂಡಿದ್ದೇವೆ ನಾವು ಕಾರ್ಯಗಾರದಲ್ಲಿ ಚರ್ಚಿಸಿದ ನಿರ್ವಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚು ಫಲಿತಾಂಶ ಬರಲು ಎಲ್ಲಾ ಶಿಕ್ಷಕರು ಶ್ರಮಿಸುತ್ತೇವೆ ಎಂದರು. ಶ್ರೀಮತಿ ರಶ್ಮಿ. ಎನ್. ಆರ್.ರವರು ಸ್ವಾಗತ ಮಾಡಿದರು ಶ್ರೀ ರಮೇಶ್ ಪವಾರ್ ಅವರು ನಿರೂಪಿಸಿದರು ವಾಣಿಶ್ರೀ ನಾಗಮ್ಮನವರ ವಂದಿಸಿದರು ಆದಿ ಜಾಂಬವ ಪ್ರೌಢಶಾಲೆಯ ವಿದ್ಯಾರ್ಥಿಗಳು ಕು.ರುಕ್ಮಿಣಿ. ಮಹಾರಾಜಪೇಟೆ ಹಾಗೂ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆಯಲ್ಲಿ ಶ್ರೀ ಕೆ ಸಿ ಐನಾಪುರ್, ಮಂಜುನಾಥ್ ಕಂಬಿ, ಮಂಜುನಾಥ್, ದೀಪಾ. ಎಲ್, ಶ್ಯಾಡಂಬಿ, ಕುಮಾರಿ ರಾಜೇಶ್ವರಿ, ಶೃತಿ ಮಾವಿನಮರ, ಮುಂತಾದವುರು ಕಾರ್ಯಕರ್ತರಲ್ಲಿ ಹಾಜರಿದ್ದರು.