ಸಂಸ್ಕಾರ ಮಾರಾಟದ ವಸ್ತುವಲ್ಲ: ಪ್ರಭುಗೌಡ

ಲೋಕದರ್ಶನ ವರದಿ

ತಾಳಿಕೋಟೆ :   ವಿದ್ಯಾಥರ್ಿಗಳಿಗೆ ದಿನನಿತ್ಯ ಕಲಿಯುವಂತಹ ವಿಷಯಗಳು ಬಹಳೇ ಇವೆ ಅವೇಲ್ಲವೂಗಳಲ್ಲಿ ಒಳ್ಳೆಯ ಸಂಸ್ಕಾರವಂತರಾಗಿ ನಡೆಯುವದು ಮುಖ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಅವರು ನುಡಿದರು. ಸ್ಥಳೀಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಎಸ್.ಎಸ್.ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ವಿವಿಧ ಶಾಲಾ ಕಾಲೇಜುಗಳ ಅಂತಿಮ ವರ್ಷದ ವಿದ್ಯಾಥರ್ಿಗಳ ಶುಭ ಕೋರುವ ಕುರಿತು ಸಂಸ್ಥೆಯ ಸಭಾ ಭವನದಲ್ಲಿ ಏರ್ಪಡಿಸಲಾದ ಸಮಾರಂಭದ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಸಂಸ್ಕಾರವೆಂಬುದು ಮಾತಾಪಿತರಿಂದ ಹಾಗೂ ಶಿಕ್ಷಕರಿಂದಲೇ ಬರಬೇಕು ಅಂದರೆ ಸಂಸ್ಕಾರವಂತರಾಗಿ ಬಾಳಿ ಬೆಳಗಲು ಸಾದ್ಯವಾಗುತ್ತದೆ ಸಂಸ್ಕಾರವೆಂಬುದು ಇದು ಮಾರಾಟದ ವಸ್ತುವಲ್ಲಾ ಅಂಗಡಿ ಮುಗ್ಗಟ್ಟುಗಳಲ್ಲಿ ಸಿಗುವಂತಹದ್ದಲ್ಲಾವೆಂದು ಹೇಳಿದ ದೇಸಾಯಿ ಅವರು ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲರು ಸಂಸ್ಕಾರವಂತರಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಾ ಸಾಗಿದ್ದಲ್ಲದೇ ವಿದ್ಯಾಥರ್ಿಗಳಿಗೆ ನುರಿತ ಶಿಕ್ಷಕರಿಂದ ವಿದ್ಯಾ ದಾನ ಮಾಡುತ್ತಾ ಸಾಗಿದ್ದಾರೆ ಈ ಸಂಸ್ಥೆ ಇನ್ನೂ ಉನ್ನತ ಮಟ್ಟಕ್ಕೇರುವದರಲ್ಲಿ ಯಾವ ಸಂಶಯವಿಲ್ಲಾವೆಂದರು. 

ಉಪನ್ಯಾಸಕರಾಗಿ ಆಗಮಿಸಿದ ಪ್ರತಿಭಾ ಲೋಕ ಕರಿಯರ ಅಕಾಡೆಮಿ ಸಂಸ್ಥಾಪಕ ನಿದರ್ೇಶಕರಾದ ಶ್ರೀಕಾಂತ ಪತ್ತಾರ ಮಾತನಾಡಿ ಉತ್ತರ ಕನರ್ಾಟಕದಲ್ಲಿ ಪ್ರತಿಷ್ಠಿತ ವಿದ್ಯಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರಲ್ಲಿ ತಾಳಿಕೋಟೆಯ ಎಚ್.ಎಸ್.ಪಾಟೀಲ ಅವರೊಬ್ಬರಾಗಿದ್ದಾರೆ ಅವರು ಹೆಗ್ಗಳಿಕೆಗೆ ಪಾತ್ರರಾಗುತ್ತಾ ವಿದ್ಯಾಥರ್ಿಗಳಿಗೆ ವಸತಿ ಶಾಲೆ ಹಾಗೂ ಬಡ ವಿದ್ಯಾಥರ್ಿಗಳಿಗೆ ಉಚಿತ ಶಿಕ್ಷಣ ನೀಡುತ್ತಾ ಸಾಗುವದರೊಂದಿಗೆ ದಿಟ್ಟ ಹೆಜ್ಜೆ ಇಡುತ್ತಾ ಸಾಗಿದ ಈ ಸಂಸ್ಥೆ ಮುಂದೊಂದು ದಿನ ಮೇಲ್ಮಟ್ಟಕ್ಕೇರಲಿದೆ. ವಿದ್ಯಾಥರ್ಿಗಳಾದವರು ನಮ್ಮ ಹಣೆ ಬರಹವನ್ನು ನಾವೇ ರೂಪಿಸಿಕೊಳ್ಳಬೇಕಾಗಿದೆ ಅದನ್ನು ಅಥರ್ೈಸಿಕೊಂಡು ನಡೆಯಬೇಕೆಂದ ಅವರು ಎಸ್.ಎಸ್.ವಿದ್ಯಾ ಸಂಸ್ಥೆಯ ಶಿಕ್ಷಕರ ಸೇವಾ ಕಾರ್ಯ ವಿದ್ಯಾಥರ್ಿಗಳ ಪಾಲಕರಿಗೆ ಹಾಗೂ ಜನ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಳಿಕೋಟೆ ತಾಲೂಕಾ ತಹಶಿಲ್ದಾರ ನಿಂಗಪ್ಪ ಬಿರಾದಾರ ಅವರು ಮಾತನಾಡಿ ಶಿಕ್ಷಕರು ಮತ್ತು ಶಿಷ್ಯರು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವಂತಹ ಸ್ಥಾನಮಾನ ಇಂದಿನ ದಿನಮಾನದಲ್ಲಿ ಲಬಿಸಿದೆ ಇದಕ್ಕೆ ಶಿಕ್ಷಕರು ನೀಡಿದ ಕಲಿಕೆಯೇ ಕಾರಣವಾಗಿದೆ ಎಂದ ಅವರು ವಿದ್ಯಾಥರ್ಿಗಳು ಹೆಚ್ಚಿನ ಶಿಕ್ಷಣ ಅಪೇಕ್ಷೀಸಿದಲ್ಲಿ ಬಿಡುವಿನ ವೇಳೆಯಲ್ಲಿ ತಾವೂ ಕೂಡಾ ವಿದ್ಯಾದಾನ ಮಾಡಲು ಮುಂದಾಗಬೇಕು. ಅತಿಥಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ಬಸನಗೌಡ ಮಾಡಗಿ ಹಾಗೂ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಮಾತನಾಡಿ ವಿದ್ಯಾಥರ್ಿಗಳು ಮಾತುಗಳಲ್ಲಿ ವಿನಯತೆ, ನಮ್ರತೆ ಅಲ್ಲದೇ ಪ್ರೀತಿಯ ಆತ್ಮೀಯ ಭಾವನೆಯೊಂದಿಗೆ ನಡೆದರೆ ಬಧುಕುವೆಂಬುದು ಬಂಗಾರವಾಗಲಿದೆ ದಕ್ಷ ಪ್ರಾಮಾಣಿಕತನವೆಂಬುದು ಬಹಳೇ ದಿನ ಬರುತ್ತದೆ ಅಂತಹ ವ್ಯವಸ್ಥೆಯಲ್ಲಿ ಎಸ್.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಮುನ್ನಡೆದಿದ್ದಾರೆಂದರು. ಅಧ್ಯಕ್ಷತೆ ವಹಿಸಿದ ಎಸ್.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಮಾತನಾಡಿ ಸಮಾಜಕ್ಕೆ ನಾವು ಮಾಡಿದ ಸೇವಾ ಕಾರ್ಯವೇ ನಮ್ಮನ್ನು ಮೇಲ್ಮಟ್ಟಕ್ಕೇರಿಸಲಿದೆ ಅಂತಹ ಸೇವಾ ಕಾರ್ಯ ಇನ್ನೂ ಮಾಡಬೇಕೆಂದರು ಅಪೇಕ್ಷೆ ನನ್ನದಾಗಿದೆ ಚಿನ್ನ, ರತ್ನಕ್ಕಿಂತ ಮಿಗಿಲಾಗಿರುವ ವಿದ್ಯಾಥರ್ಿಗಳನ್ನು ಉದ್ದರಿಸುವ ಸೇವಾ ಕಾರ್ಯದೊಂದಿಗೆ ತಾವು ಮುನ್ನಡೆದಿರುವದಾಗಿ ನುಡಿದರು.

ಸಾನಿದ್ಯ ವಹಿಸಿದ ಗದ್ದನಕೇರಿ ಕಸ್ತೂರಿ ಮಠದ ಶ್ರೀ ಕರಬಸವೇಶ್ವರ ಶಿವಯೋಗಿಗಳು ಆಶಿರ್ವಚನವಿಯುತ್ತಾ ಗುರುವಿನ ಮೇಲಿಟ್ಟ ಶ್ರದ್ದೆಯಿಂದ ಬಿಲ್ ವಿದ್ಯೆಯಲ್ಲಿ ಪರಿಣತನಾದ ಏಕಲವ್ಯನ ಕಥೆಯೊಂದನ್ನು ಹೇಳಿ ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿದ್ಯಾಥರ್ಿಗಳಿಗೆ ಹಾಗೂ ಅತಿಥಿ ಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾಥರ್ಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯ ಮೇಲೆ ವೇ.ಮುರುಘೇಶ ವಿರಕ್ತಮಠ, ಭಾ.ಜ.ಪ.ಜಿಲ್ಲಾ ಪ್ರದಾನ ಕಾರ್ಯದಶರ್ಿ ಆರ್.ಎಸ್.ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ, ನಿವೃತ್ತ ದೈಹಿಕ ಉಪನ್ಯಾಸಕ ಕೆ.ಎಸ್.ಸೋಮಾಪೂರ, ಎಸ್.ಎಸ್.ಗಡೇದ, ಹಾಸ್ಯ ಕಲಾವಿದ ಸಿದ್ದು ಬಿಳೇಭಾವಿ, ನಿಂಗಪ್ಪ ಗಾಡಿ, ಶಿವಾಜಿ ವಡ್ಡರ, ಅಮರಮ್ಮ ಬಿರಾದಾರ, ಫಲ್ಲವಿ ಕುಮಟಗಿ, ಮೊದಲಾದವರು ಉಪಸ್ಥಿತರಿದ್ದರು. ನಂತರ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವವು ಉಪನ್ಯಾಸಕ ಎಸ್.ಆಯ್.ಹಿರೇಮಠ ಸ್ವಾಗತಿಸಿ. ಶಿಕ್ಷಕ ಬಿ.ಆಯ್.ಹಿರೇಹೊಳಿ ನಿರೂಪಿಸಿದರು. ಉಪನ್ಯಾಸಕಿ ಸಮೀನಾ ಕೊಕ್ಕನುಡಿ ವಂದಿಸಿದರು.