ಬಾಡಗಿ ಆರ್‌ಸಿಯಲ್ಲಿ ಕಳೆ ಕಟ್ಟಿದ ಚಿನ್ನರ ಸಾಂಸ್ಕೃತಿಕ ಕಾರ್ಯಕ್ರಮ
ಬೀಳಗಿ 11: ದೇಶದ ಏಳಿಗೆ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ ಸಂಸ್ಕಾರ ಇಲ್ಲದ ಶಿಕ್ಷಣದಿಂದ ನೈತಿಕತೆ ಕುಸಿತ. ಹೀಗಾಗಿ ಗುಣಾತ್ಮಕ ಶ್ರೇಷ್ಠ ಸಂಸ್ಕಾರಾಧಾರಿತ ಶಿಕ್ಷಣ ಮತ್ತಷ್ಟು ಹರಿದು ಬರಲೆಂದು ಆಶಿಸಿದರು. ಜೀವನದುದ್ದಕ್ಕೂ ಮಾರ್ಗದರ್ಶನ ಮಾಡುವ ಶಕ್ತಿ ಕೇವಲ ವಿದ್ಯೆಗೆ ಮಾತ್ರ ಇದೆ .ವಿದ್ಯೆ ಸಂಸ್ಕಾರದಿಂದ ಕೂಡಿರಬೇಕು ಎಂದು ಸಂಸ್ಥೆಯ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ ಎಸ್ ಮೊಕಾಶಿ ಹೇಳಿದರು.
ಬೀಳಗಿ ತಾಲೂಕಿನ ಬಾಡಗಿ ಆರ್ಸಿಯಲ್ಲಿ ಬಕೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಶಿಕ್ಷಕರ ಗುಣಮಟ್ಟದ ಬೋಧನೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಜೊತೆಗೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಪಾಲಕರು ಹಾಗೂ ಶಿಕ್ಷಕರ ಬೋಧನೆಯನ್ನೇ ಆಧರಿಸಿದ್ದು ಆದ್ದರಿಂದ ಮಕ್ಕಳಿಗೆ ಗುಣಮಟ್ಟದ ಸಚ್ಚಾರಿತ್ರ್ಯದ ಬೋಧನಗೆ ಮುಂದಾಗಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು. ಜ್ಞಾನ ಸಾಗರವಿದ್ದಂತೆ ಅದನ್ನು ನಿರಂತರವಾಗಿ ಬೋಧಿಸುತ್ತಾ ಹೋದರೆ ಜ್ಞಾನದ ಶ್ರೀಮಂತಿಕೆ ಹೆಚ್ಚಾಗುತ್ತಿದ್ದು. ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕರನ್ನು ಸಮಾಜ ಹಾಗೂ ಶಿಕ್ಷಣ ಸಂಸ್ಥೆಗಳು ಗುರುತಿಸಿ ಪುರಸ್ಕರಿಸಬೇಕು ಅಂದಾಗ ಮಾತ್ರ ಶಿಕ್ಷಕರು ಹೆಚ್ಚು ಕ್ರಿಯಾಶೀಲರಾಗುತ್ತಾರೆ ಎಂದರು.
ಇಂದು ಪ್ರತಿಯೊಂದು ಕ್ಷೇತ್ರ ಸ್ಪರ್ಧೆಯಿಂದ ಕೂಡಿದ್ದು ಹೀಗಾಗಿ ವಿದ್ಯಾರ್ಥಿಗಳು ತಮ್ಮನ್ನು ತಾವು ಸ್ಪರ್ಧೆಗೆ ಒಡ್ಡಿಕೊಳ್ಳಬೇಕು ಸಮಯ ಪ್ರಜ್ಞೆ ಪ್ರಾಮಾಣಿಕತೆ ನಿರಂತರ ಅಧ್ಯಯನ ರೂಢಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಕೇಶ್ವರ ಮಠದ ಬಕ್ಕಯ್ಯಹಿರೇಮಠ್ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಜನ್ನತ ಬಿ ಮುಜಾವರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಠ್ಠಲ್ ಕುರಿಯವರ, ಹನುಮಂತ್ ಸಿಂಗ್ ರೆಡ್ಡಿ, ಶಂಬು ಶೆಟ್ಟರ್, ಸಂದೀಪ್ ದೇಸಾಯಿ, ರಾಜಪ್ಪ ಮಾದರ್, ಶ್ರೀಕಾಂತ್ ಮೂಲಿಮನಿ, ಮಂಜುಳಾ ಮೇರಾಕರ್, ಸುರೇಶ್ ಗಾಳಿ, ವಿಠ್ಠಲ್ ಕಂಬಾರ್, ವಿಠ್ಠಲ್ ಮುಕಾಶಿ, ಕವಿತಾ ಮೊಖಾಶಿ, ತಿಪ್ಪಣ್ಣ ಗಿರಿಸಾಗರ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.